For Quick Alerts
ALLOW NOTIFICATIONS  
For Daily Alerts
 

Sarfaraz Khan: ಭಾರತ ಟೆಸ್ಟ್ ತಂಡದಿಂದ ಹೊರಗುಳಿಯುತ್ತಾರಾ ಸ್ಪೋಟಕ ಬ್ಯಾಟರ್?

ಆಸಗ್ಟ್ 17 ಶನಿವಾರ, ಗೌತಮ್ ಗಂಭೀರ್ ಹೆಟ್ ಕೋಚ್ ಆಗುತ್ತಿದ್ದಂತೆ ಟೀಮ್ ಇಂಡಿಯಾ ಹೊಸ ತಿರುವಿನ ಹಾದಿಯಲ್ಲಿದೆ. ಗಂಭೀರ್ ತಂಡದಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದ್ದಾರೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ.

ಶ್ರೀಲಂಕಾ ಪ್ರವಾಸದ ವೇಳೆಯೂ ಕೆಲವು ಯುವ ಆಟಗಾರರಿಗೆ ಟೀಮ್ ಇಂಡಿಯಾ ಪರ ಪಾರ್ದಪಣೆ ಮಾಡಲು ಅವಕಾಶ ಸಿಕ್ಕಿತ್ತು. ಆದರೆ ಇದರ ಹೊರತಾಗಿಯೂ ಭಾರತದ ಯುವ ಸ್ಪೋಟಕ ಬ್ಯಾಟರ್ ಸರ್ಫರಾಜ್ ಖಾನ್ ಅವಕಾಶ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಘೋಷಣೆಗೂ ಮುನ್ನವೇ ಸರ್ಫರಾಜ್ ನಿರೀಕ್ಷೆ ಸಂಪೂರ್ಣ ಬುಡಮೇಲಾಗಿದೆ.

Will Sarfaraz Khan be left out of India Test squad

ಸರ್ಫರಾಜ್ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿದರು. ಕೋಚ್ ಮತ್ತು ನಾಯಕನ ನಿರೀಕ್ಷೆಗೆ ತಕ್ಕಂತೆ ಆಡಿ ಸರ್ಫರಾಜ್ ಸೈ ಎನಿಸಿಕೊಂಡರು. ದೇಶಿಯ ಕ್ರಿಕೆಟ್ ದಾಖಲೆ ಹೊಂದಿರುವ ಸರ್ಫರಾಜ್ ಚೊಚ್ಚಲ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿದ್ದರು.

ಇದಾದ ನಂತರ, ಅವರು ತಮ್ಮ ಮೂರನೇ ಪಂದ್ಯದಲ್ಲೂ ಅರ್ಧಶತಕ ಗಳಿಸಿ ಟೀಮ್ ಇಂಡಿಯಾಕ್ಕೆ ನೆರವಾಗಿದ್ದರು. ಒಟ್ಟು ಮೂರು ಅರ್ಧಶತಕಗಳೊಂದಿಗೆ 200 ರನ್ ಗಳಿಸಿದ್ದರು. ಇಂತಹ ಅತ್ಯುತ್ತಮ ಅಂಕಿ-ಅಂಶಗಳ ಹೊರತಾಗಿಯೂ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯಲ್ಲಿ ಅವರ ಆಯ್ಕೆಯ ಬಗ್ಗೆ ಕೂತುಹಲ ಮೂಡಿಸಿದೆ.

ಏಕೆಂದರೆ ಟೀಮ್ ಇಂಡಿಯಾದಲ್ಲಿ ಈಗಾಗಲೇ ಅನುಭವಿ ಆಟಗಾರರು ತಂಡಕ್ಕೆ ಮರಳಲು ಸಿದ್ದರಾಗಿದ್ದಾರೆ. ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ರವಿಚಂದ್ರನ್ ಆಶ್ವಿನ್, ಮೊಹಮ್ಮದ್ ಸಿರಾಜ್ ಅವರ ಸ್ಥಾನ ಟೆಸ್ಟ್ ತಂಡದಲ್ಲಿ ಪಕ್ಕಾಗಿದೆ.

ಇನ್ನುಳಿದ ಕೆಲವೇ ಸ್ಥಾನಗಳಿಗೂ ಪೈಪೋಟಿ ಹೆಚ್ಚಾಗಿದ್ದು, ಶ್ರೇಯಸ್ ಅಯ್ಯರ್, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್ ಮತ್ತು ಇಶಾನ್ ಕಿಶನ್ ಅವರಂತಹ ಯುವ ಆಟಗಾರರು ತಂಡದಲ್ಲಿ ಅವಕಾಶ ಪಡೆಯುವ ರೇಸ್‌ನಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಸರ್ಫರಾಜ್ ಖಾನ್ ಅವರನ್ನು ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯಿಂದ ಕೈ ಬಿಡಬಹುದು.

ಸರ್ಫರಾಜ್ ಖಾನ್ ಹೇಳಿದ್ದೇನು?

ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆಯಾಗುವ ಬಗ್ಗೆ ಸರ್ಫರಾಜ್ ಮಾತನಾಡಿದ್ದಾರೆ. 'ನನಗೆ ಯಾವುದೇ ನಿರೀಕ್ಷೆಗಳಿಲ್ಲ. ಆದರೆ ನನಗೆ ಅವಕಾಶ ಸಿಕ್ಕರೆ ಆಡಲು ಸಿದ್ಧನಾಗಿದ್ದೇನೆ. ನನ್ನ ಕ್ಷಮತೆಯನ್ನು ಯಾವಾಗಲೂ ತೋರಿಸಿದ್ದೇನೆ. ಹೀಗಾಗಿ ಇದನ್ನು ಬದಲಾಯಿಸಲು ನನಗೆ ಯಾವುದೇ ಕಾರಣವಿಲ್ಲ ಎಂದು ಹೇಳಿದ್ದಾರೆ.

ರೋಹಿತ್-ಕೊಹ್ಲಿ ವಿಶ್ರಾಂತಿ

ಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ಟೆಸ್ಟ್ ಪಂದ್ಯಗಳ ಸರಣಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಶ್ರಾಂತಿ ಅವಧಿ ಮುಂದುವರೆಯಬಹುದು.

ಕೆಲಸದ ಹೊರೆಯಿಂದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ವಿಶ್ರಾಂತಿ ನೀಡುವಂತೆ ರೋಹಿತ್ ಮತ್ತು ಕೊಹ್ಲಿ ಕೋರಿದ್ದಾರೆ. ಆದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ದೃಷ್ಟಿಯಿಂದ ಭಾರತ ತಂಡಕ್ಕೆ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾದಲ್ಲಿ ಸರ್ಫರಾಜ್ ಖಾನ್ ಸ್ಥಾನ ಪಡೆಯುತ್ತಾರೋ ಇಲ್ಲವೋ ಭಾರತದ ಕ್ರೀಡಾಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Story first published: Saturday, August 17, 2024, 7:32 [IST]
Other articles published on Aug 17, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+