For Quick Alerts
ALLOW NOTIFICATIONS  
For Daily Alerts
 

ನಾವಿವತ್ತು ನೆಮ್ಮದಿಯಿಂದ ನಿದ್ದೆ ಮಾಡ್ತೇವೆ: ಪಂದ್ಯಶ್ರೇಷ್ಠ ಕರನ್

will sleep well tonight, says Man of the Match Sam Curran

ಬರ್ಮಿಂಗ್ ಹ್ಯಾಮ್, ಆಗಸ್ಟ್ 4: ಬರ್ಮಿಂಗ್ ಹ್ಯಾಮ್ ನ ಎಜ್ ಬಾಸ್ಟನ್ ನಲ್ಲಿ ಶನಿವಾರ (ಆಗಸ್ಟ್ 4) ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ಬಳಿಕ ಮಾತನಾಡಿದ ಪಂದ್ಯಶ್ರೇಷ್ಠ, ಇಂಗ್ಲೆಂಡ್ ನ ಸ್ಯಾಮ್ ಕರನ್, ನಾವಿವತ್ತು ನೆಮ್ಮದಿಯಿಂದ ನಿದ್ದೆ ಮಾಡುತ್ತೇವೆ ಎಂದಿದ್ದಾರೆ.

ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ 31ರನ್ ಗಳಿಂದ ಜಯ ಸಾಧಿಸಿತ್ತು. ಭಾರತ (ಎರಡೂ ಇನ್ನಿಂಗ್ಸ್ ಸೇರಿಸಿ) 274+162 ರನ್ ಪೇರಿಸಿದರೆ, ಇಂಗ್ಲೆಂಡ್ ತಂಡ 287+180 ರನ್ ಗಳಿಸಿ ಭಾರತವನ್ನು 31 ರನ್ ಗಳಿಂದ ಹಿಮ್ಮೆಟ್ಟಿಸಿತ್ತು.

ಟೆಸ್ಟ್ ಆರಂಭದಿಂದಲೂ ಬೇರೆ ಬೇರೆ ಕಾರಣಕ್ಕಾಗಿ ಕುತೂಹಲ ಮೂಡಿಸಿತ್ತು. ಭಾರತದೆದುರು ಇಂಗ್ಲೆಂಡ್ 1000ನೇ ಟೆಸ್ಟ್ ಪಂದ್ಯವನ್ನಾಡಿದ್ದು ಮೊದಲ ವಿಶೇಷವಾದರೆ, ಕೊಹ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದರು. ಜೊತೆಗೆ ಇಂಗ್ಲೆಂಡ್ ನಾಯಕ ಜೋ ರೂಟ್ ಅವರು ಅತೀ ಸಣ್ಣ ವಯಸ್ಸಿನಲ್ಲಿ 6,000 ರನ್ ಪೂರೈಸಿದ ವಿಶ್ವದ ಮೂರನೇ ಆಟಗಾರನಾಗಿ ಗುರುತಿಸಿಕೊಂಡಿದ್ದರು.

ಆ್ಯಂಡರ್ಸನ್-ಕೊಹ್ಲಿಯ ಕಾಲೆಳೆದಾಟವೂ ಪಂದ್ಯದ ಕುತೂಹಲ ಹೆಚ್ಚಿಸಿತ್ತು. ಹೀಗಾಗಿ ಮೊದಲ ಟೆಸ್ಟ ವಿಜಯದ ಬಳಿಕ ಮಾತನಾಡಿದ ಆಲ್ ರೌಂಡರ್ ಆಟಗಾರ ಕರನ್, 'ಈ ಪಂದ್ಯವನ್ನು ಎಲ್ಲಾ ಪಂದ್ಯಗಳಲ್ಲೊಂದು ಎಂಬಂತೆ ಭಾವಿಸುವುದಿಲ್ಲ. ಇದು ನಮಗೆ ತುಂಬಾ ವಿಶೇಷವಾದ ಪಂದ್ಯ. ಈ ಗೆಲುವೂ ವಿಶೇಷವೆ. ನಾವಿವತ್ತು ರಾತ್ರಿ ನೆಮ್ಮದಿಯಿಂದ ಕಣ್ತುಂಬ ನಿದ್ದೆ ಮಾಡುತ್ತೇವೆ' ಎಂದರು.

ಮೊದಲ ಟೆಸ್ಟ್ ನಲ್ಲಿ ಕರನ್ 4+1 ವಿಕೆಟ್ ಮತ್ತು 63+24 ರನ್ ಸಾಧನೆ ತೋರಿದ್ದರು. ಹೀಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಕರನ್ ಪಾಲಾಗಿತ್ತು.

Story first published: Saturday, August 4, 2018, 21:01 [IST]
Other articles published on Aug 4, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+