ಭಾರತ ತಂಡದ ಹೊಸ ಹೆಡ್ ಕೋಚ್ ಗೌತಮ್ ಗಂಭೀರ್ ಕೆಕೆಆರ್ ಮೆಂಟರ್ ಆಗಿ ಉಳಿಯುತ್ತಾರಾ?; ಬಿಸಿಸಿಐ ನಿಯಮಗಳೇನು?
ಜುಲೈ 11 ಬುಧವಾರ, ಭಾರತ ಕ್ರಿಕೆಟ್ ತಂಡದ ಹೊಸ ಹೆಡ್ ಕೋಚ್ ಯಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಗೌತಮ್ ಗಂಭೀರ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ.
ಕನ್ನಡಿಗ ರಾಹುಲ್ ದ್ರಾವಿಡ್ ಅವರಿಂದ ತೆರವಾಗಿದ್ದ ಹೆಡ್ ಕೋಚ್ ಸ್ಥಾನಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಆಯ್ಕೆ ಆಗಿದ್ದಾರೆ. ಬಿಸಿಸಿಐ ಅಧಿಕೃತ ಪ್ರಕಟಣೆಯ ನಂತರ, ಗೌತಮ್ ಗಂಭೀರ್ ಎಲ್ಲಾರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ದ್ರಾವಿಡ್ ನಂತರ ಭಾರತದ ಗುರು ಗಂಭೀರ್
ರಾಹುಲ್ ದ್ರಾವಿಡ್ ತಮ್ಮ ಮುಖ್ಯ ಕೋಚ್ ಅವಧಿಯ ಕೊನೆಯ ಐಸಿಸಿ ಟೂರ್ನಮೆಂಟ್‌ನಲ್ಲಿ ಟೀಮ್ ಇಂಡಿಯಾವನ್ನು ಟಿ20 ವಿಶ್ವಕಪ್ ಚಾಂಪಿಯನ್ ಮಾಡಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾದ ಗುರುವಾಗಿ ಗಂಭೀರ್ ಅವರನ್ನು ಬಿಸಿಸಿಐ ನೂತನ ಹೆಡ್ ಕೋಚ್ ಆಗಿ ನೇಮಕ ಮಾಡಿದೆ.
ಈ ತಿಂಗಳ ಅಂತ್ಯದಲ್ಲಿ ಶ್ರೀಲಂಕಾ ಪ್ರವಾಸಕ್ಕೆ ತೆರಳಲಿರುವ ಟೀಮ್ ಇಂಡಿಯಾದ ಜೊತೆಗೆ ಗಂಭೀರ್ ಅವರ ಕೋಚ್ ಅಧಿಕಾರಾವಧಿ ಆರಂಭವಾಗಲಿದೆ. ಜುಲೈ 27 ರಿಂದ ಪ್ರಾರಂಭವಾಗುವ ಈ ಪ್ರವಾಸದಲ್ಲಿ ಟೀಮ್ ಇಂಡಿಯಾ 3 ಟಿ20 ಮತ್ತು ಏಕದಿನ ಪಂದ್ಯಗಳ ಸರಣಿ ಆಡಲಿದೆ. ಗಂಭೀರ್ ಅವರ ಅಧಿಕಾರಾವಧಿ 2027 ರವರೆಗೆ ಇರಲಿದೆ.
ಐಪಿಎಲ್‌ನಲ್ಲಿ ಕೆಕೆಆರ್ ಚಾಂಪಿಯನ್
ಐಪಿಎಲ್ 2024ರ ಟೂರ್ನಿಗೂ ಮುನ್ನ, ಕೋಲ್ಕತ್ತಾ ನೈಟ್ ರೈಡರ್ಸ್ ಗೌತಮ್ ಗಂಭೀರ್ ಅವರನ್ನು ಮೆಂಟರ್ ಆಗಿ ನೇಮಿಸಿತ್ತು. ಬಳಿಕ ಗಂಭೀರ್ ಅವರು ತಮ್ಮ ಅದ್ಭತ ಅನುಭವವೊಂದಿಗೆ ಶ್ರೇಯಸ್ ಅಯ್ಯರ್ ನಾಯಕತ್ವದ ತಂಡವನ್ನು ಚಾಂಪಿಯನ್ ಮಾಡಿದ್ದು.
ಇದರೊಂದಿಗೆ ಕೆಕೆಆರ್ ತನ್ನ 10 ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸಿತು. ಇದಕ್ಕೂ ಮುನ್ನ ಕೆಕೆಆರ್ ತಂಡ ಎರಡು ಬಾರಿ ಚಾಂಪಿಯನ್ ಆಗಿತ್ತು.
ಗೌತಮ್ ಗಂಭೀರ್ ನಾಯಕತ್ವದಲ್ಲಿ 2012 ಮತ್ತು 2014 ರಲ್ಲಿ ಟ್ರೋಫಿ ಗೆಲ್ಲಿಸಿದ್ದಾರೆ. ಈಗ ಟೀಮ್ ಇಂಡಿಯಾದ ಮುಖ್ಯ ಕೋಚ್ ಆದ ನಂತರ ಗಂಭೀರ್ ಕೆಕೆಆರ್‌ಗೆ ಮೆಂಟರ್ ಪಾತ್ರವನ್ನು ವಹಿಸಬಹುದೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಮಾರ್ಗದರ್ಶಕರು ಗಂಭೀರವಾಗಿ ಉಳಿಯುತ್ತಾರೆಯೇ?
ನೂತನವಾಗಿ ಟೀಮ್ ಇಂಡಿಯಾ ಹೆಡ್ ಕೋಚ್ ಆಗಿರುವ ಗಂಭೀರ್ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಕೆಕೆಆರ್‌ನ ಮೆಂಟರ್ ಹುದ್ದೆ ತೊರೆಯಬೇಕಾಗುತ್ತದೆ. ಎರಡು ಬಾರಿ ಐಪಿಎಲ್ ಕಪ್ ಗೆದ್ದಿರುವ ನಾಯಕ ಗಂಭೀರ್ ಕೆಕೆಆರ್ ಜೊತೆ ಸುದೀರ್ಘ ಒಡನಾಟ ಹೊಂದಿದ್ದಾರೆ.
ಬಿಸಿಸಿಐ ನಿಯಮಗಳ ಪ್ರಕಾರ ಗಂಭೀರ್ ಏಕಕಾಲದಲ್ಲಿ ಭಾರತ ತಂಡದ ಕೋಚ್ ಹಾಗೂ ಕೆಕೆಆರ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುವಂತಿಲ್ಲ. ಇದರರ್ಥ ಗಂಭೀರ್ ಐಪಿಎಲ್ 2025 ರಲ್ಲಿ ಕೆಕೆಆರ್ ಸಿಬ್ಬಂದಿಯ ಭಾಗವಾಗಿರುವುದಿಲ್ಲ.
ಹೀಗಾಗಿ ಕೆಕೆಆರ್ ಗಂಭಿರ್ ಅವರ ಸ್ಥಾನಕ್ಕೆ ಪ್ರಬಲ ವ್ಯಕ್ತಿಯ ಹುಡುಕಾಟದಲ್ಲದೆ. ಇತ್ತೀಚೆಗಿನ ವರದಿಗಳ ಪ್ರಕಾರ ಕೆಕೆಆರ್ ಮೆಂಟರ್ ಅಥವಾ ಹೆಡ್ ಕೋಚ್ ಸ್ಥಾನಕ್ಕೆ ಚಾಂಪಿಯನ್ ರಾಹುಲ್ ದ್ರಾವಿಡ್ ಅವರನ್ನು ಸಂಪರ್ಕ ಮಾಡಿದೆ ಎನ್ನಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications