CWC 2023: ಧರ್ಮಶಾಲಾದಲ್ಲಿ ಸಚಿನ್ ದಾಖಲೆ ಸರಿಗಟ್ಟುತ್ತಾರಾ ಕಿಂಗ್ ಕೊಹ್ಲಿ?
ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್.. ಚೇಸಿಂಗ್ ಮಾಸ್ಟರ್.. ವಿಶ್ವಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು ಎಲ್ಲರ ಚಿತ್ತ ಕದ್ದಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಬಿಗ್ ಇನ್ನಿಂಗ್ಸ್ ಕಟ್ಟಿ ಎಲ್ಲರೂ ಹುಬ್ಬೇರುಸುವಂತೆ ಮಾಡಿದ್ದಾರೆ.
ವಿಶ್ವಕಪ್ ಲೀಗ್ ಹಂತದ ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ, ಶತಕ ಬಾರಿಸಿ ಭರವಸೆ ಮೂಡಿಸಿದ್ದಾರೆ. ವಿರಾಟ್ ಆಟ ನೋಡಿದ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಈಗ ವಿರಾಟ್ ಏಕದಿನ ಕ್ರಿಕೆಟ್ ನಲ್ಲಿ ಇನ್ನೊಂದು ಶತಕ ಬಾರಿಸಿದರೆ, ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿ ಗಟ್ಟುತ್ತಾರೆ.
ಈ ಸುವರ್ಣ ಕ್ಷಣ ಭಾನುವಾರ ನಡೆಯಬಹುದು ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಗುರುವಿನ ದಾಖಲೆಯ ಬೆನ್ನು ಹತ್ತಿರುವ ವಿರಾಟ್ ಮತ್ತೊಂದು ಶತಕವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ 21 ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಶತಕಗಳ ಶ್ರೇಷ್ಠ ದಾಖಲೆಯನ್ನು ಸರಿಗಟ್ಟಬಹುದು. ವಿರಾಟ್ ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 103 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಸದ್ಯಕ್ಕೆ ಅವರು ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ.
ವಿರಾಟ್ ತಮ್ಮ ODI ವೃತ್ತಿಜೀವನದ 48ನೇ ಶತಕ
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿರಾಟ್ ತಮ್ಮ ODI ವೃತ್ತಿಜೀವನದ 48ನೇ ಶತಕವನ್ನು ಗಳಿಸಿದರು. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ನ್ಯೂಜಿಲೆಂಡ್ ವಿರುದ್ಧ ವಿರಾಟ್ ಶತಕ ಸಿಡಿಸಿದ್ದೇ ಆದಲ್ಲಿ ಸಚಿನ್ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಬಲಗೈ ಬ್ಯಾಟ್ಸಮ್ಯಾನ್ ವಿರಾಟ್ ಒಟ್ಟಾರೆ, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 78 ಶತಕಗಳನ್ನು ಗಳಿಸಿದ್ದಾರೆ. ಧರ್ಮಶಾಲಾ ಪಿಚ್ ಬ್ಯಾಟ್ಸಮ್ಯಾನ್ ಗಳಿಗೆ ಸೂಕ್ತವೆಂದು ಪರಿಗಣಿಸಲಾಗಿದೆ. ಕಿವೀಸ್ ತಂಡದ ವಿರುದ್ಧ ಕೊಹ್ಲಿ ದೊಡ್ಡ ಇನ್ನಿಂಗ್ಸ್ ಆಡಬಲ್ಲರು.
ಸಚಿನ್ ತೆಂಡೂಲ್ಕರ್ 452 ODI ಇನ್ನಿಂಗ್ಸ್ ಗಳಲ್ಲಿ 44.83 ಸರಾಸರಿಯಲ್ಲಿ 49 ಶತಕ ಒಳಗೊಂಡಂತೆ ಒಟ್ಟು 18,426 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 273 ಇನ್ನಿಂಗ್ಸ್ ಗಳಲ್ಲಿ 58 ಸರಾಸರಿಯಲ್ಲಿ 48 ಶತಕಗಳನ್ನು ಒಳಗೊಂಡಂತೆ 13,342 ರನ್ ಸಿಡಿಸಿದ್ದಾರೆ.
247 ಇನ್ನಿಂಗ್ಸ್ ಗಳಲ್ಲಿ 31 ಶತಕ ಸಿಡಿಸಿರುವ ರೋಹಿತ್ ಶರ್ಮಾ
247 ಇನ್ನಿಂಗ್ಸ್ ಗಳಲ್ಲಿ 31 ಶತಕ ಸಿಡಿಸಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ವಿಶ್ವಕಪ್ ನಲ್ಲಿ ತಮ್ಮ ಶತಕಗಳ ಸಂಖ್ಯೆಯನ್ನು 3 ಕ್ಕೆ ಏರಿಸಿದ್ದಾರೆ. 8 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ನಲ್ಲಿ ಕೊಹ್ಲಿ ಶತಕ ಬಾರಿಸಿದ್ದಾರೆ.
ಈ ಅವಧಿಯಲ್ಲಿ, ವಿಶ್ವಕಪ್ ನಲ್ಲಿ ಮೂರು ಶತಕಗಳನ್ನು ಹೊಂದಿರುವ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ವಿರಾಟ್ ಸರಿಗಟ್ಟಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸಮ್ಯಾನ್ ಗಳ ಪಟ್ಟಿಯಲ್ಲಿ ವಿರಾಟ್ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ. ಈ ವೇಳೆ ಅವರು ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications