Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿಯ 'ಐಪಿಎಲ್‌ ಕಪ್‌'ನ ಬರ ನೀಗಿಸ್ತಾರಾ ಮ್ಯಾಕ್ಸ್‌ವೆಲ್, ಜೇಮಿಸನ್?

Will the arrival of Glenn Maxwell and Kyle Jamieson help RCB end title drought?

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ ಆರ್ಕರ್ಷಣೀಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಇನ್ನಷ್ಟು ಬಲಗೊಂಡಿದೆ. ಹೀಗಾಗಿ ಸಹಜವಾಗೇ ಆರ್‌ಸಿಬಿ ಅಭಿಮಾನಿಗಳಲ್ಲಿ ಕಪ್‌ನ ಆಸೆಯೂ ಮೂಡಿಸಿದೆ. ಈ ಬಾರಿಯಾದರೂ ಆರ್‌ಸಿಬಿ ಕಪ್‌ ಗೆದ್ದು ಅಭಿಮಾನಿಗಳು 'ಈ ಸಲ ಕಪ್‌ ನಮ್ದೇ' ಎಂದು ಎದೆಯುಬ್ಬಿಸಿ ಹೇಳಬಹುದೇನೋ ಅನ್ನೋ ನಿರೀಕ್ಷೆಯಿದೆ.

ಐಪಿಎಲ್‌ನಲ್ಲಿ ಒಂದು ಬಾರಿಯೂ ಟ್ರೋಫಿ ಗೆಲ್ಲದ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್‌ ಕಿಂಗ್ಸ್ ತಂಡಗಳಿವೆ. ಈ ಬಾರಿ ಆರ್‌ಸಿಬಿಗೆ ಹೊಸ ಪ್ರಮುಖ ಆಟಗಾರರು ಸೇರ್ಪಡೆಯಾಗಿದ್ದಾರೆ. ತಂಡದ ಬ್ಯಾಟಿಂಗ್‌ ಆರ್ಡರ್‌ನಲ್ಲೂ ಬದಲಾವಣೆಯಾಗಲಿರುವುದರಿಂದ ಆರ್‌ಸಿಬಿ ಪ್ರದರ್ಶನ ಕುತೂಹಲ ಮೂಡಿಸಿದೆ.

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ತಂಡಕ್ಕೆ ನ್ಯೂಜಿಲೆಂಡ್ ಆಲ್ ರೌಂಡರ್ ಕೈಲ್ ಜೇಮಿಸನ್ 15 ಕೋ.ರೂ.ಗೆ ಸೇರ್ಪಡೆಗೊಂಡಿದ್ದರು. ಟೆಸ್ಟ್‌ ಕ್ರಿಕೆಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ 5 ವಿಕೆಟ್ ಪಡೆದ ಮೊದಲ ನ್ಯೂಜಿಲೆಂಡ್ ಆಟಗಾರ ಜೇಮಿಸನ್. ಇನ್ನು ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಹರಾಜಿನ ವೇಳೆ 14.25 ಕೋ.ರೂ.ಗೆ ಆರ್‌ಸಿಬಿಯಿಂದ ಖರೀದಿಸಲ್ಪಟ್ಟಿದ್ದರು.

ಈ ಐಪಿಎಲ್‌ ಸೀಸನ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕೈಲ್ ಜೇಮಿಸನ್ ಆರ್‌ಸಿಬಿಯ ಪ್ರಮುಖಾಕರ್ಷಣೆ ಆಗಿರಲಿದ್ದಾರೆ. ಉಳಿದಂತೆ ಕಿವೀಸ್ ಯುವ ಸ್ಫೋಟಕ ಬ್ಯಾಟ್ಸ್‌ಮನ್‌ ಫಿನ್ ಅಲೆನ್ ಆಟವೂ ಕುತೂಹಲ ಮೂಡಿಸಿದೆ. ಏಪ್ರಿಲ್ 9ರಂದು ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಮತ್ತು ಬೆಂಗಳೂರು ಸ್ಪರ್ಧಿಸಲಿವೆ.

ಡೇನಿಯಲ್ ಸ್ಯಾಮ್ಸ್ (ಆಸ್ಟ್ರೇಲಿಯಾ), ಜೇಮಿಸನ್, ಮ್ಯಾಕ್ಸ್‌ವೆಲ್, ದೇವದತ್ ಪಡಿಕ್ಕಲ್, ಕೊಹ್ಲಿ, ಎಬಿ ಡಿ ವಿಲಿಯರ್ಸ್, ಡಾನ್ ಕ್ರಿಶ್ಚಿಯನ್ (ಆಸ್ಟ್ರೇಲಿಯಾ) ಇವರೆಲ್ಲ ಈ ಬಾರಿ ಆಸ್ಟ್ರೇಲಿಯಾದಲ್ಲಿ ಕಪ್‌ ಗೆಲ್ಲಿಸುವಲ್ಲಿನ ಆಶಾಭಾವನೆಗಳಾಗಿದ್ದಾರೆ. ಹೀಗಾಗಿ ಈ ಬಾರಿಯಾದರೂ ಆರ್‌ಸಿಬಿಯ ಕಪ್ಪಿನ ಬರ ನೀಗುತ್ತಾ ಕಾದು ನೋಡಬೇಕಿದೆ.

Story first published: Saturday, April 3, 2021, 14:23 [IST]
Other articles published on Apr 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+