17 ವರ್ಷಗಳಿಂದ ಕಪ್ ಗೆಲ್ಲದ ಬರವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ನೀಗಿಸಿಕೊಂಡಿದೆ. ತಂಡದ ಸಂಘಟಿತ ಆಟಕ್ಕೆ ಚಾಂಪಿಯನ್ ಪಟ್ಟ ದಕ್ಕಿದೆ. ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಮಣಿಸಿದ ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೆ ಏರಿತು. ಈ ಮೂಲಕ ವಿರಾಟ್ ಕೊಹ್ಲಿ ಅವರ ಬಹುದಿನಗಳ ಕನಸು ನನಸಾಯಿತು. ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೇರುತ್ತಲೇ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಆದರೆ ಜೂನ್ 4 ರಂದು ನಡೆದ ಆ ಒಂದು ಘಟನೆ ನಿಜಕ್ಕೂ ಕಪ್ಪು ಚುಕ್ಕಿಯಾಗಿದೆ.
ಆರ್‌ಸಿಬಿ ಸಂಭ್ರಮಾಚರಣೆಯ ವೇಳೆ ಸಂಭವಿಸಿದ ಕಾಲ್ತುಳಿತದಿಂದ 11 ಜನ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಅಭಿಮಾನಿಗಳಿಗೆ ನೋವು ತಂದಿದೆ. ಈ ಸಂಬಂಧ ಈಗ ಕರ್ನಾಟಕ ಹೈ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇದೇ ವೇಳೆ ಸರ್ಕಾರ ಸಹ ಘಟನೆಗೆ ಕಾರಣ ಏನು ಎಂಬ ಬಗ್ಗೆ ಕೋರ್ಟ್‌ಗೆ ವರದಿ ನೀಡಿದೆ. ಈ ವರದಿಯಲ್ಲಿ ವಿರಾಟ್ ಕೊಹ್ಲಿ ಅವರ ವಿಡಿಯೋ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

ಆರ್‌ಸಿಬಿ ತಂಡದ ಮುಖ ಇದ್ದಂತೆ ಇದ್ದ ವಿರಾಟ್ ಕೊಹ್ಲಿ ಅವರ ಹೆಸರನ್ನು ಪದೇ ಪದೇ ಎಳೆದು ತರುತ್ತಿರುವುದು ನಿಜಕ್ಕೂ ಸೂಪರ್ ಸ್ಟಾರ್ ಅಭಿಮಾನಿಗಳಿಗೆ ಬೇಸರ ತಂದಿದೆ. ಆರ್‌ಸಿಬಿಗಾಗಿ ಇಷ್ಟು ವರ್ಷ ಕಷ್ಟ ಪಟ್ಟು ಕೊನೆಗೆ ಕಪ್ ಗೆಲುವಿನ ಮುಕುಟ ತೊಡಿಸಿದ ವಿರಾಟ್‌ಗೆ ಸಿಗಗುತ್ತಿರುವ ಬೆಲೆ ನಿಜಕ್ಕೂ ಅವರಿಗೆ ಬೇಸರ ತರಿಸಿದೆ. ಒಂದು ವೇಳೆ ವಿರಾಟ್ ಅವರ ಹೆಸರು ಈ ಪ್ರಕರಣದಲ್ಲಿ ತಳಕು ಹಾಕುತ್ತಲೇ ಸಾಗಿದರೆ, ವಿರಾಟ್ ಆ ಒಂದು ದೊಡ್ಡ ನಿರ್ಧಾರವನ್ನು ಕೈಗೊಳ್ಳಬಹುದು. ಆರ್‌ಸಿಬಿ ತಂಡದ ರಾಯಭಾರೀ ರೀತಿ ಕಾಣಿಸಿಕೊಂಡಿದ್ದ ವಿರಾಟ್ ಅವರಿಗೆ ಇದು ಮುಜುಗರ ಉಂಟು ಮಾಡಿದೆ.
ತಾನು ಮಾಡದ ತಪ್ಪಿಗೆ ವಿರಾಟ್ ಹೆಸರು ಈ ಪ್ರಕರಣದಲ್ಲಿ ಎಳೆದು ತರಲು ಆ ಒಂದು ವಿಡಿಯೋ ಕಾರಣ. ಅಸಲಿಗೆ ವಿರಾಟ್ ಸ್ವಯಂ ಪ್ರೇರಿತವಾಗಿ ಆ ವಿಡಿಯೋವನ್ನು ಏನು ಹಾಕುವುದಿಲ್ಲ. ಆರ್‌ಸಿಬಿ ಮ್ಯಾನೇಜ್ಮೆಂಟ್ ನಿರ್ದೇಶನದ ಮೇಲೆಗೆ ವಿಡಿಯೋ ಒಂದನ್ನು ರೆಕಾರ್ಡ್ ಮಾಡಲಾಗುತ್ತದೆ. ಆದರೆ ಅದನ್ನು ಸಹ ಆರ್‌ಸಿಬಿ ಸಾಮಾಜಿಕ ತಾಣದಲ್ಲಿ ಹಾಕಲಾಗುತ್ತದೆ.

ಆರ್‌ಸಿಬಿ ಸಂಭ್ರಮಾಚರಣೆಯ ಕಾಲ್ತುಳಿತದಲ್ಲಿ ವಿರಾಟ್ ಕೊಹ್ಲಿ ಅವರ ಹೆಸರನ್ನು ಪದೆ ಪದೇ ಎಳೆದು ತರುವುದರಿಂದ ಅವರ ಘನತೆಗೆ ಚ್ಯುತಿ ಬಂದಂತೆ ಆಗುತ್ತದೆ. ಹೀಗಾಗಿ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡವನ್ನು ಬಿಟ್ಟು ಬೇರೆ ತಂಡಗಳತ್ತ ಮುಖ ಮಾಡಬಹುದು.
ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಸೂಪರ್ ಸ್ಟಾರ್ ಆಟಗಾರ. ಇವರಿಗೆ ದೇಶದಲ್ಲೇ ಅಪಾರ ಅಭಿಮಾನಿಗಳ ಬಳಗವಿದೆ. ಒಂದು ವೇಳೆ ವಿರಾಟ್ ಮನನೊಂದು ಆರ್‌ಸಿಬಿಯನ್ನು ತ್ಯಜಿಸಿದಲ್ಲಿ, ಇವರನ್ನು ಕೊಳ್ಳಲು ಫ್ರಾಂಚೈಸಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ.