For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ, ರೋಹಿತ್ ಟಿ20 ವೃತ್ತಿಜೀವನ ಕೊನೆಯಾಯಿತೇ?; ಆಯ್ಕೆ ಸಮಿತಿ ಹೊಸ ಅಧ್ಯಕ್ಷರ ಕೈಯಲ್ಲಿದೆ ಭವಿಷ್ಯ!

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಭಾರತದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಇದೀಗ ಈ ಇಬ್ಬರು ಆಟಗಾರರ ಟಿ20 ಕ್ರಿಕೆಟ್‌ ವೃತ್ತಿಜೀವನ ಕೊನೆಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ವಿರಾಟ್ ಕೊಹ್ಲಿ ಈಗಾಗಲೇ 34 ವರ್ಷದವರಾಗಿದ್ದರೆ, ಅದೇ ರೀತಿ ರೋಹಿತ್ ಶರ್ಮಾ 36 ವರ್ಷಗಳನ್ನು ಪೂರೈಸುವ ಹಂತದಲ್ಲಿದ್ದಾರೆ. ಹೀಗಾಗಿ ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟಿ20 ಕ್ರಿಕೆಟ್‌ನಲ್ಲಿ ಅವರ ಭವಿಷ್ಯದ ಬಗ್ಗೆ ಯೋಚಿಸುತ್ತಿದೆ.

Will Virat Kohli, Rohit Sharmas T20 Career Ends? Selectors To Decide The Future of Legends

ಮುಂದಿನ 2024ರ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಯಲಿದ್ದು, ಅಷ್ಟರೊಳಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಆಯ್ಕೆ ಸಮಿತಿಯ ​​ಹೊಸ ಅಧ್ಯಕ್ಷರನ್ನು ಬಿಸಿಸಿಐ ಎದುರು ನೋಡುತ್ತಿದೆ.

ಈಗಾಗಲೇ ಭಾರತ ತಂಡದ ಮಾಜಿ ವೇಗಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸಹಾಯಕ ಕೋಚ್ ಅಜಿತ್ ಅಗರ್ಕರ್ ಅವರು ಹೊಸ ಮುಖ್ಯ ಆಯ್ಕೆಗಾರನಾಗಲು ನೆಚ್ಚಿನವರಾಗಿ, ಅರ್ಜಿ ಸಲ್ಲಿಸಿದ್ದಾರೆ.

ಇನ್‌ಸೈಡ್‌ಸ್ಪೋರ್ಟ್ ವೆಬ್‌ಸೈಟ್‌ನಲ್ಲಿನ ವರದಿಯ ಪ್ರಕಾರ, ಅಜಿತ್ ಅಗರ್ಕರ್ ಅಧಿಕೃತವಾಗಿ ಆಯ್ಕೆ ಸಮಿತಿಯ ​​ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಟಿ20 ಭವಿಷ್ಯದ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಿದ್ದಾರೆ.

"ಆಯ್ಕೆ ಸಮಿತಿಯ ​​ಹೊಸ ಅಧ್ಯಕ್ಷನ ಮೊದಲ ಕೆಲಸವೆಂದರೆ ಆಟಗಾರರೊಂದಿಗೆ ಅವರ ಭವಿಷ್ಯದ ಯೋಜನೆಗಳ ಕುರಿತು ಮಾತನಾಡುವುದು. ಇದಕ್ಕೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸಹ ಹೊರತಾಗಿಲ್ಲ. ಅವರು ಬಯಸಿದಷ್ಟು ಕಾಲ ನಾವು ಮುಂದುವರಿಯಲು ಬಯಸುತ್ತೇವೆ. ಆದರೆ ಎಲ್ಲ ಶ್ರೇಷ್ಠ ಆಟಗಾರರು ತಮ್ಮ ಯೋಜನೆಗಳನ್ನು ಪರಿಗಣಿಸಲು ನಿರ್ದಿಷ್ಟ ಸಮಯ ಹೊಂದಿರುತ್ತಾರೆ. ಮೂರು ಸ್ವರೂಪದ ಆಟ ಮತ್ತು ಐಪಿಎಲ್ ಆಡುವುದು ಸುಲಭದ ಕೆಲಸವಲ್ಲ," ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಭಾರತ ತಂಡ ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧ 5 ಟಿ20 ಪಂದ್ಯಗಳನ್ನು ಆಡಲಿದೆ, ಭಾರತ ತಂಡವನ್ನು ಬಿಸಿಸಿಐ ಇನ್ನೂ ಪ್ರಕಟಿಸಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿಯ ನಂತರ ವಿರಾಟ್ ಕೊಹ್ಲಿ ಜೊತೆಗೆ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವ ಮೂಲಕ ಆಲ್‌‌ರೌಂಡರ್ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.

2024ರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡದ ನೀಲನಕ್ಷೆಯನ್ನು ಸಿದ್ಧಪಡಿಸಲು ಹೊಸ ಮುಖ್ಯ ಆಯ್ಕೆಗಾರರು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಭವಿಷ್ಯದ ಯೋಜನೆಗಳನ್ನು ಚರ್ಚಿಸುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ 2023ರ ಏಕದಿನ ವಿಶ್ವಕಪ್ ನಂತರ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಸ್ವಯಂ ಆಗಿ ಯಾವುದಾದರೂ ಒಂದು ಸ್ವರೂಪವನ್ನು ತ್ಯಜಿಸಿ, ಹೊಸಬರಿಗೆ ಅವಕಾಶಗಳನ್ನು ನೀಡುವ ಸಾಧ್ಯತೆ ಇದೆ.

ಪ್ರಸ್ತುತ ಯೋಜನೆಗಳ ಪ್ರಕಾರ, ಮುಂದಿನ ಎಫ್‌ಟಿಪಿ ಚಕ್ರದಲ್ಲಿ ಭಾರತ ತಂಡ 61 ಟಿ20 ಪಂದ್ಯಗಳನ್ನು ಆಡಲಿದೆ. ಅದರಲ್ಲಿ 2024ರ ಅಕ್ಟೋಬರ್‌ನಲ್ಲಿ ಯುಎಸ್ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಸಹ ಸೇರಿದೆ.

"ಏಕದಿನ ವಿಶ್ವಕಪ್ ನಂತರ ಟಿ20 ಪಂದ್ಯಗಳತ್ತ ಗಮನ ಹರಿಸಲಾಗುತ್ತದೆ. 2007ರಿಂದ ನಾವು ಟಿ20 ವಿಶ್ವಕಪ್ ಗೆದ್ದಿಲ್ಲ ಮತ್ತು ಐಪಿಎಲ್ ವೇಗವಾಗಿ ಬೆಳೆಯುತ್ತಿರುವ ಕಾರಣ, ಇದು ಈಗ ಆದ್ಯತೆ ಮತ್ತು ಪ್ರತಿಷ್ಠೆಯ ವಿಷಯವಾಗಿದೆ. ಐಪಿಎಲ್ ಮೂಲಕ ಒಳಬರುವ ಆಟಗಾರರೊಂದಿಗೆ ನಾವು ಟಿ20 ವಿಶ್ವಕಪ್ ಗೆಲ್ಲದಿದ್ದರೆ ಉತ್ತಮವಾಗಿ ಕಾಣುವುದಿಲ್ಲ," ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಮಾಜಿ ನಾಯಕ ವಿರಾಟ್ ಕೊಹ್ಲಿ ಇಲ್ಲಿಯವರೆಗೆ 115 ಟಿ20 ಪಂದ್ಯಗಳಲ್ಲಿ 52.73ರ ಸರಾಸರಿಯಲ್ಲಿ 1 ಶತಕ ಮತ್ತು 37 ಅರ್ಧ ಶತಕಗಳೊಂದಿಗೆ 4,008 ರನ್ ಬಾರಿಸಿದ್ದಾರೆ. ಇನ್ನು ರೋಹಿತ್ ಶರ್ಮಾ 148 ಟಿ20 ಪಂದ್ಯಗಳಲ್ಲಿ 4 ಶತಕ ಮತ್ತು 29 ಅರ್ಧ ಶತಕಗಳೊಂದಿಗೆ 3,853 ರನ್ ಗಳಿಸಿದ್ದಾರೆ.

Story first published: Tuesday, July 4, 2023, 14:52 [IST]
Other articles published on Jul 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+