ವಿಶ್ವಕಪ್‌ಗೆ ಅಂತಿಮ 15 ಆಟಗಾರರ ತಂಡ ಪ್ರಕಟಿಸಿದ ಇಂಗ್ಲೆಂಡ್!

ಲಂಡನ್, ಮೇ 12: ಮೇ 30 ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ 12ನೇ ಆವೃತ್ತಿಗೆ ಆತಿಥೇಯ ಇಂಗ್ಲೆಂಡ್ ತಂಡ ಕೊನೆಗೂ ತನ್ನ ಅಂತಿಮ 15 ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು, ಅನುಭವಿ ವೇಗಿ ಡೇವಿಡ್ ವಿಲ್ಲೀ ಅವರನ್ನು ಕೈಬಿಟ್ಟು ಯುವ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರನ್ನು ಸೇರ್ಪಡೆ ಮಾಡಿದೆ.
ಇತ್ತೀಚೆಗೆ ಅಂತ್ಯಗೊಂಡ ಪಾಕಿಸ್ತಾನ ವಿರುದ್ಧದ 5 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಗೆ ಕಾಯ್ದಿರಿಸಿದ ಆಟಗಾರನಾಗಿದ್ದ ಜೋಫ್ರಾ ಅರ್ಚರ್‌ಗೆ ಎಡಗೈ ವೇಗದ ಬೌಲರ್ ಡೇವಿಡ್ ವಿಲ್ಲೀ ಅವರ ಸ್ಥಾನದಲ್ಲಿ ವಿಶ್ವಕಪ್ ತಂಡಕ್ಕೆ ಏರಿಸಲಾಗಿದೆ. ವಿಲ್ಲೀ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಕೇವಲ ನಾಲ್ಕು ವಿಕೆಟ್‌ಗಳನನ್ನು ಮಾತ್ರವೇ ಪಡೆಯಲು ಶಕ್ತರಾಗಿದ್ದರು.
ಇನ್ನು ಪಾಕಿಸ್ತಾನ ವಿರುದ್ಧ 2 ಏಕದಿನ ಮತ್ತು ಐರ್ಲೆಂಡ್ ವಿರುದ್ಧ ಒಂದು ಒಡಿಐ ಪಂದ್ಯವನ್ನು ಆಡಿದ್ದ 24 ವರ್ಷದ ಯುವ ಬಲಗೈ ವೇಗಿ ಆರ್ಚರ್, ಸತತವಾಗಿ 140ರ ಸರಾಸರಿಯಲ್ಲಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಇದೇ ವೇಳೆ ಇಂಗ್ಲೆಂಡ್ ತಂಡಲ್ಲಿ ಒಟ್ಟು ಮೂರು ಬದಲಾವಣೆ ತರಲಾಗಿದೆ. ಜೋಫ್ರಾ ಆರ್ಚರ್ ಹೊರತಾಗಿ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಲಿಯಾಮ್ ಡಾವ್ಸನ್ ಅವರನ್ನು ಜೋ ಡೆನ್ಲೀ ಅವರ ಸ್ಥಾನದಲ್ಲಿ ಮತ್ತು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಜೇಮ್ಸ್ ವಿನ್ಸ್ ಅವರನ್ನೂ ಸೇರ್ಪಡೆ ಮಾಡಿದೆ.
29 ವರ್ಷದ ಆಲ್‌ರೌಂಡರ್ ಡಾವ್ಸನ್ ಹ್ಯಾಂಪ್‌ಶೈರ್‌ಪರ ಕೌಂಟಿ ಕ್ರಿಕೆಟ್‌ನಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದು, ಬ್ಯಾಟಿಂಗ್‌ನಲ್ಲೂ 45ರ ಸರಾಸರಿ ಹೊಂದಿದ್ದಾರೆ. ಇನ್ನು ಅಲೆಕ್ಸ್ ಹೇಲ್ಸ್ ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದು ತಂಡದಿಂದ ಹೊರಬಿದ್ದ ಬಳಿಕ ಅವರ ಸ್ಥಾನದಲ್ಲಿ ಜೇಮ್ಸ್ ವಿನ್ಸ್ ಸೇರ್ಪಡೆಯಾಗಿದ್ದಾರೆ.
ಆತಿಥೇಯ ಇಂಗ್ಲೆಂಡ್ ತಂಡ ಮೇ 30ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.
ಐಯಾನ್ ಮಾರ್ಗನ್ (ನಾಯಕ), ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್(ವಿಕೆಟ್‌ಕೀಪರ್), ಜೋ ರೂಟ್, ಜೇಮ್ಸ್ ವಿನ್ಸ್, ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಮೊಯೀನ್ ಅಲಿ, ಆದಿಲ್ ರಶೀದ್, ಕ್ರಿಸ್ ವೋಕ್ಸ್, ಲಿಯಾಮ್ ಪ್ಲಂಕೆಟ್, ಟಾಮ್ ಕರ್ರನ್, ಲಿಯಾಮ್ ಡಾವ್ಸನ್, ಜೋಫ್ರಾ ಆರ್ಚರ್, ಮಾರ್ಕ್ ವುಡ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications