ಪಂದ್ಯ ಗೆಲ್ಲುವುದೇ ನನ್ನ ಗುರಿ ಹೊರತು, ತ್ರಿಶತಕವಲ್ಲ: ಕೊಹ್ಲಿ

ನವದೆಹಲಿ, ಮೇ 6: ಪಂದ್ಯ ಗೆಲ್ಲುವ ಒಂದೇ ಉದ್ದೇಶ ನನ್ನದು ಹೊರತು, ತ್ರಿಶತಕ ಬಾರಿಸುವುದಲ್ಲ ಎಂದು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೊಹ್ಲಿ ಕ್ರಿಕೆಟ್ ಬಗೆಗಿನ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತ, 'ಪಂದ್ಯ ಆಡುವಾಗ ನನ್ನ ಉದ್ದೇಶ ಪಂದ್ಯ ಗೆಲ್ಲಬೇಕು ಎಂಬುದೊಂದೇ ಆಗಿರುತ್ತದೆಯೇ ಹೊರತು ತ್ರಿಶತಕ ಬಾರಿಸುವ ಯೋಜನೆ ನಾನು ಯಾವತ್ತಿಗೂ ಇಟ್ಟುಕೊಂಡಿರುವುದಿಲ್ಲ' ಎಂದಿದ್ದಾರೆ.
ಕ್ರಿಕೆಟ್ ದಂತಕತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಜೀವನದಲ್ಲಿ ಸಾಧನೆಯ ಹೆಜ್ಜೆ ಗುರುತುಗಳನ್ನು ಮೂಡಿಸಿದಂತೆ ವಿರಾಟ್ ಕೊಹ್ಲಿ ಅವರೂ ದಾಖಲೆ, ಸಾಧನೆಗಳನ್ನು ಮಾಡುತ್ತಾ ಬಂದಿದ್ದಾರೆ. ಒಟ್ಟು 6 ಡಬಲ್ ಸೆಂಚುರಿ ಸಾಧನೆ ವಿರಾಟ್ ಅವರಿಂದಾಗಿದೆ.

ಆದರೆ ತ್ರಿಶತಕ ಸಾಧನೆ ಕೊಹ್ಲಿಯಿಂದ ಈವರೆಗೂ ಆಗಿಲ್ಲ. ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಕೊಹ್ಲಿ ಉತ್ತರಿಸುತ್ತ, ಉಳಿದ ಆಟಗಾರರಿಗೆ ಇರಬಹುದೇನೊ. ತನಗೆ ನನಗೆ ಅಂಥ ಉದ್ದೇಶವೇ ಇಲ್ಲ ಎಂದಿದ್ದಾರೆ.
ಸದ್ಯ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ನಂ. 2ನೇ ಸ್ಥಾನದಲ್ಲಿರುವ ಕೊಹ್ಲಿ 243ರ ಗರಿಷ್ಠ ರನ್ ದಾಖಲೆ ಹೊಂದಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವೀರೇಂದ್ರ ಸೆಹ್ವಾಗ್ ಮತ್ತು ಕರುಣ್ ನಾಯರ್ ತ್ರಿಶತಕ ಬಾರಿಸಿ ಇಬ್ಬರು ಭಾರತೀಯರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications