Wisden Awards: ದೀಪ್ತಿ ಶರ್ಮಾಗೆ ಮಹಿಳಾ ಆಟಗಾರ್ತಿ ಗರಿ, ಅಭಿಷೇಕ್ ಶರ್ಮಾ ಬೆಸ್ಟ್ ಟಿ20 ಬ್ಯಾಟರ್
ಲಂಡನ್: ವಿಸ್ಡನ್ ತನ್ನ ಪ್ರತಿಷ್ಠಿತ ಪ್ರಶಸ್ತಿ ಪ್ರಕಟಿಸಿದೆ. ಈ ಪ್ರಶಸ್ತಿಗಳಲ್ಲಿ ಭಾರತೀಯ ಕ್ರಿಕೆಟ್ ಆಟಗಾರರು ಅಬ್ಬರಿಸಿದ್ದಾರೆ. 9 ಪ್ರಶಸ್ತಿಗಳಲ್ಲಿ 7 ಪ್ರಶಸ್ತಿಗಳನ್ನು ಭಾರತೀಯ ಆಟಗಾರರು ಗೆದ್ದುಕೊಂಡಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರು ವರ್ಷ್‌ದ ಮಹಿಳಾ ಆಟಗಾರ್ತಿ ಎಂಬ ಪ್ರಶಸ್ತಿ ಪಡೆದರೆ, ಅಭಿಷೇಕ್ ಶರ್ಮಾ ಅವರು ಪುರುಷರ ಟ20 ಆಟಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ.
ಟೀಮ್ ಇಂಡಿಯಾದ ಆಟಗಾರರಾದ ಶುಭಮನ್ ಗಿಲ್, ಮೊಹಮ್ಮದ್ ಸಿರಾಜ್, ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಅವರು ಸಹ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ಆಟಗಾರರು ಕಳೆದ ವರ್ಷದ ಟೆಸ್ಟ್‌ನಲ್ಲಿ ನೀಡಿದ ಅಮೋಘ ಪ್ರದರ್ಶನಕ್ಕೆ ಗೌರವ ಸಂದಿದೆ.

ವಿಸ್ಡನ್ ಪ್ರಶಸ್ತಿಯನ್ನು ಪಡೆದ ಭಾರತೀಯರಲ್ಲದ ಆಟಗಾರ ಎಂದರೆ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್. ಇವರಿಗೆ ವಿಶ್ವದ ಪುರುಷರ ಕ್ರಿಕೆಟ್ ಆಟಗಾರ ಎಂಬ ಗೌರವ ಸಂದಿದೆ. ಇವರು ಇಂಗ್ಲೆಂಡ್ ವಿರುದ್ಧದ ಆಷಸ್ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದ್ದರು. ಇವರ ಟೆಸ್ಟ್ ಸರಣಿಯಲ್ಲಿ ಆರ್ಭಟಿಸಿದ್ದು, ಇವರಿಗೆ ಪ್ರಶಸ್ತಿ ಸಂದಿದೆ. ಈಗ ಸುಮಾರು 36 ವರ್ಷ ವಯಸ್ಸಿನ ಸ್ಟಾರ್ಕ್ 2025 ರಲ್ಲಿ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 55 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 17.32 ಆಗಿತ್ತು. ಇದೇ ಪಟ್ಟಿಯಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಹಸೀಬ್ ಹಮೀದ್ ಸಹ ಪ್ರಶಸ್ತಿ ಪಡೆದಿದ್ದಾರೆ.
ದೀಪ್ತಿ ಶರ್ಮಾಗೆ ಅಬ್ಬರ
ದೀಪ್ತಿ ಶರ್ಮಾ ಅವರು 2025ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದದರು. ಇವರು ವಿಶ್ವಕಪ್‌ನಲ್ಲಿ 22 ವಿಕೆಟ್ ಪಡೆದಿದ್ದು, 215 ರನ್ ಸಿಡಿಸಿದ್ದರು. ಇವರ ಅಮೋಘ ಆಲ್‌ರೌಂಡರ್ ಆಟದ ಪ್ರದರ್ಶನದ ಬಲದಿಂದ ಇವರಿಗೆ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಸರಣಿ ಶ್ರೇಷ್ಠ ಪ್ರಶಸ್ತಿ ಸಂದಿತ್ತು. ಭಾರತ ಚೊಚ್ಚಲ ಬಾರಿಗೆ ಮಹಿಳಾ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ದೀಪ್ತಿ ಶರ್ಮಾ ದೊಡ್ಡ ಪಾತ್ರವನ್ನು ನಿರ್ವಹಿಸಿದ್ದರು.
ಟೀಮ್ ಇಂಡಿಯಾದ ಟಿ20 ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 2025ರಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇವರು ಕಳೆದ ವರ್ಷ ಆಡಿದ 21 ಪಂದ್ಯಗಳಲ್ಲಿ 193ರ ಸ್ಟ್ರೈಕ್ ರೇಟ್‌ನಲ್ಲಿ 859 ರನ್ ಕಲೆ ಹಾಕಿದ್ದರು. ಇದರಲ್ಲಿ ಒಂದು ಶತಕ ಹಾಗೂ ಐದು ಅರ್ಧಶತಕಗಳು ಸೇರಿವೆ.
ಗಿಲ್‌ಗೆ ಪ್ರಶಸ್ತಿ
ಟೀಮ್ ಇಂಡಿಯಾದ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್, ಇಂಗ್ಲೆಂಡ್ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಇವರು ಇಂಗ್ಲೆಂಡ್ ಪ್ರವಾಸದಲ್ಲಿ ಆಡಲಾದ 5 ಟೆಸ್ಟ್ ಪಂದ್ಯಗಳಲ್ಲಿ 754 ರನ್ ಸಿಡಿಸಿದ್ದರು.ಇವರ ಸ್ಥಿರ ಪ್ರದರ್ಶನದ ಫಲವಾಗಿ ಭಾರತ, ಪ್ರವಾಸದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿತ್ತು. ಈ ಸಾಧನೆಯ ವೇಳೆ ಗಿಲ್ ಸಾಧನೆ ಅಮೋಘ. ಇನ್ನು ಪಂತ್ ಇದೇ ಸರಣಿಯಲ್ಲಿ 479 ರನ್, ರವೀಂದ್ರ ಜಡೇಜಾ ಸಹ ಈ ವೇಳೆ ಅಬ್ಬರಿಸಿದ್ದರು. ಅಲ್ಲದೆ ವೇಗಿ ಮೊಹಮ್ಮದ್ ಸಿರಾಜ್ ಅವರು 23 ವಿಕೆಟ್ ಪಡೆದು ಮಿಂಚಿದ್ದರು. ಇವರ ಸ್ಥಿರ ಪ್ರದರ್ಶನಕ್ಕೆ ಪ್ರಶಸ್ತಿಯ ಗರಿ ಸಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications