For Quick Alerts
ALLOW NOTIFICATIONS  
For Daily Alerts
 

ಧೋನಿ ರೀತಿಯ ನಾಯಕ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೂ ದೊರೆಯಲಿ ಎಂದ ಪಾಕ್ ಕ್ರಿಕೆಟಿಗ

Wish Captains Like Ms Dhoni Come In Pakistan As Well: Kamran Akmal

ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿದ ನಂತರ, ಧೋನಿ ಕ್ರಿಕೆಟ್ ಸಾಧನೆಯ ಬಗ್ಗೆ ಸಹ ಆಟಗಾರರು ಹಾಗೂ ಅಭಿಮಾನಿಗಳು ಮಾತ್ರವಲ್ಲದೆ ಎದುರಾಳಿ ಆಟಗಾರರು ಕೂಡ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಎನಿಸಿರುವ ಪಾಕಿಸ್ತಾನದ ಕ್ರಿಕೆಟಿಗರು ಕೂಡ ಧೋನಿ ಆಟದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅದರಲ್ಲೂ ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಧೋನಿಯ ನಾಯಕತ್ವದ ಬಗ್ಗೆ ಭಾರೀ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಧೋನಿ ಭಾರತ ತಂಡಕ್ಕೆ ನೀಡಿದ ಕೊಡುಗೆಗಾಗಿ ಆತನಿಗೆ ಸಚಿನ್ ತೆಂಡೂಲ್ಕರ್‌ಗೆ ದೊರೆತ ಮಾದರಿಯಲ್ಲೇ ವಿದಾಯ ಪಂದ್ಯ ದೊರೆಯಬೇಕು ಎಂದಿದ್ದಾರೆ.

ಎಂಎಸ್ ಧೋನಿ ವಿಶ್ವ ಕ್ರಿಕೆಟ್‌ನಲ್ಲಿ ಭಾರತವನ್ನು ಸುದೀರ್ಘ ಕಾಲ ತನ್ನ ಜೊತೆಗೆ ಮುನ್ನಡೆಸಿದ್ದಾರೆ. ನಾಯಕತ್ವವನ್ನು ಜವಾಬ್ಧಾರಿಯುತವಾಗಿ ಪೂರೈಸಿದ್ದಾರೆ. ಧೋನಿಯ ವಿಶೇಷತೆಯೆಂದರೆ ನಾಯಕತ್ವವನ್ನು ವಹಿಸಿಕೊಂಡು ತಂಡವನ್ನು ಯತ್ತಮ ಮಟ್ಟಕ್ಕೆ ಏರಿಸಿರುವ ಜೊತೆಗೆ ತಾನೂ ಕೂಡ ವಿಶ್ವ ಶ್ರೇಷ್ಠ ಆಟಗಾರನಾಗಿ ಬದಲಾದರು ಎಂದು ಕಮ್ರಾನ್ ಅಕ್ಮಲ್ ಹೇಳಿದ್ದಾರೆ.

ಧೋನಿ ವಿದಾಯ ಹೇಳಿದ ರೀತಿಯ ಬಗ್ಗೆ ಮಾತನಾಡಿದ ಕಮ್ರಾನ್ ಅಕ್ಮಲ್ "ಧೋನಿ ತರಹದ ಆಟಗಾರರು ಈ ರೀತಿ ವಿದಾಯವನ್ನು ಹೇಳಿ ಹೋಗಬಾರದು. ಆತನಿಗೆ ಎದ್ದು ನಿಂತು ಗೌರವ ಸಲ್ಲಿಸಬೇಕು. ಸಚಿನ್‌ ತೆಂಡುಲ್ಕರ್‌ಗೆ ದೊರೆತ ರೀತಿಯಲ್ಲಿ ವಿದಾಯ ಹೇಳುವ ಮೈದಾನದಲ್ಲಿ ಆತನಿಗಾಗಿ ವಿದಾಯ ಪಂದ್ಯ ದೊರೆಯಬೇಕು ಎಂದು ಕಮ್ರಾನ್ ಅಕ್ಮಲ್ ಹೇಳಿದ್ದಾರೆ.

ಧೋನಿಯ ರೀತಿಯ ನಾಯಕತ್ವ ಸಾಕಷ್ಟು ಅಗತ್ಯವಿದೆ. ಪಾಕಿಸ್ತಾನದಲ್ಲೂ ಇನ್ಜಮಾಮ್ ಹಾಗೂ ಯೂನಿಸ್ ಖಾನ್ ತರಹ ಅತ್ಯುತ್ತಮ ನಾಯಕರು ಇದ್ದರು. ಆದರೆ ಮಹೇಂದ್ರ ಸಿಂಗ್ ಧೋನಿ ತರಹದ ನಾಯಕರು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ದೊರೆಯುವ ಅಗತ್ಯವಿದೆ ಎಂದು ಕಮ್ರಾನ್ ಅಕ್ಮಲ್ ಹೇಳಿಕೆಯನ್ನು ನೀಡಿದ್ದಾರೆ.

Story first published: Thursday, August 20, 2020, 16:14 [IST]
Other articles published on Aug 20, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+