ಮಾಲಿಕರ ಜೇಬಿಗೆ ಕತ್ತರಿ ಹಾಕಿದ RTM: ಭಾರೀ ಮೊತ್ತಕ್ಕೆ ಸೇಲ್ ಆದ ಆಟಗಾರರ ಪಟ್ಟಿ
ಐಪಿಎಲ್ ಮೆಗಾ ಹರಾಜಿಗೆ ಆಟಗಾರರ ರಿಟೇನ್ ಲೀಸ್ಟ್ ನೀಡುವಂತೆ ಬಿಸಿಸಿಐ ಸೂಚಿಸಿದ್ದಾಗ, ಆರು ಜನರನ್ನು ತಂಡದಲ್ಲಿ ಉಳಿಸಿಕೊಳ್ಳುವ ಅವಕಾಶವನ್ನು ನೀಡಿತ್ತು. ಅಲ್ಲದೆ ರೈಟ್ ಟು ಮ್ಯಾಚ್ ಕಾರ್ಡ್ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿತ್ತು. ಇದರಂತೆ ಮಾಲೀಕರು ಸಹ ಅಳೆದು ತೂಗಿ ತಮ್ಮಲ್ಲಿರುವ ಆರ್‌ಟಿಎಂ ಕಾರ್ಡ್ ಬಳಸಿ ತಮ್ಮ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡರು. ಈ ವೇಳೆ ಹಲವು ಸ್ಟಾರ್ ಆಟಗಾರರು ಭಾರೀ ಮೊತ್ತವನ್ನು ಜೇಬಿಗೆ ಇಳಿಸಿಕೊಂಡು ಹಳೆಯ ತಂಡವನ್ನೇ ಸೇರಿದ್ದಾರೆ.
ಆರ್‌ಟಿಎಂ ಎಂಬ ಬ್ರಹ್ಮಾಸ್ತ್ರವನ್ನು ಬಳಸಿಕೊಂಡು ತಮ್ಮ ಆಟಗಾರರು ಬೇರೆ ತಂಡಗಳಿಗೆ ಹೋಗದಂತೆ ತಡೆಯುವ ಒಂದು ಅಸ್ತ್ರ ಎಲ್ಲ ತಂಡಗಳಲ್ಲಿ ಕೈ ಎಲ್ಲಿತ್ತು. ಆದರೆ ಈ ವೇಳೆ ಫ್ರಾಂಚೈಸಿಗಳು ಹಲವರಿಗೆ ಮಣೆ ಹಾಕಿದರೆ, ಇನ್ನು ಹಲವರನ್ನು ತಂಡಕ್ಕೆ ಮತ್ತೆ ಸೇರಿಸಿಕೊಳ್ಳಲುವಲ್ಲಿ ವಿಫಲವಾಗಿವೆ. ಆರ್‌ಟಿಎಂ ಎಂಬ ಬ್ರಹ್ಮಾಸ್ತ್ರವನ್ನು ಉಪಯೋಗಿಸಿ ಬಿಡ್ ಗೆದ್ದ ಆಟಗಾರರ ಪಟ್ಟಿ ಇಲ್ಲಿದೆ.

ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣುವ ಹೆಸರು ಅರ್ಷದೀಪ್ ಸಿಂಗ್. ಇವರನ್ನು ಪಂಜಾಬ್ ಕಿಂಗ್ಸ್ ಹರಾಜು ಅಂಗಳಕ್ಕೆ ಬಿಟ್ಟಿತ್ತು. ಆದರೆ ಮತ್ತೆ ಏಕೆ ಇವರ ಮೇಲೆ ಆ ತಂಡಕ್ಕೆ ಪ್ರೀತಿ ಬಂದಿತೋ ಏನೋ ಭಾರೀ ಮೊತ್ತವನ್ನು ಪಾವತಿಸಿ ತಮ್ಮ ತಂಡದಲ್ಲಿ ಉಳಿಸಿಕೊಂಡಿದೆ. ಇವರು ಮುಂದಿನ ಬಾರಿಯ ಐಪಿಎಲ್‌ನಲ್ಲೂ ಪಂಜಾಬ್ ಪರ ಕಣಕ್ಕೆ ಇಳಿಯಲಿದ್ದಾರೆ. ಇದಕ್ಕಾಗಿ ಇವರಿಗೆ ಸಿಕ್ಕ ಹಣ 18 ಕೋಟಿ.
ಇಬ್ಬರಿಗೆ ಆರ್‌ಟಿಎಂ ಬಳಿಸಿದ ಡೆಲ್ಲಿ
ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಇಬ್ಬರು ಆಟಗಾರರಿಗೆ ಆರ್‌ಟಿಎಂ ಬಳಸಿದೆ. ಈ ಪ್ಲೇಯರ್‌ಗೆ ಆರ್‌ಟಿಎಂ ಡೆಲ್ಲಿ ಬಳಸಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಜೇಕ್ ಫ್ರೇಸರ್-ಮೆಕ್ಗುರ್ಕ್ ಅವರಿಗೆ ಬೇರೆ ತಂಡಗಳ ಪರ ಆಡದಂತೆ ಡೆಲ್ಲಿ ತಡೆಯುವಲ್ಲಿ ಸಫಲವಾಗಿದ್ದು, ಇವರಿಗೆ 9 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಇನ್ನು ಟೀಮ್ ಇಂಡಿಯಾದ ಭರವಸೆಯ ಬೌಲರ್ ಮುಕೇಶ್ ಕುಮಾರ್ ಅವರ ಕ್ಷಮತೆಯನ್ನು ಗುರುತಿಸಿದ ಡೆಲ್ಲಿ 8 ಕೋಟಿ ರೂ. ನೀಡಿ ತಂಡದ ಪರ ಆಡುವಂತೆ ಹೇಳಿದೆ.
ನಮನ್ ದೀರ್‌ಗೆ ಜಾಕ್ ಪಾಟ್
ಮುಂಬೈ ಇಂಡಿಯನ್ಸ್ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದ ನಮನ್ ದೀರ್ ಅವರನ್ನು ಉಳಿಸಿಕೊಳ್ಳುವಲ್ಲಿ ಮುಂಬೈ ಸಫಲವಾಗಿದೆ. ಮುಂಬೈ ತನ್ನ ಬಳಿ ಇದ್ದ ಏಕೈಕ ಆರ್‌ಟಿಎಂ ಕಾರ್ಡ್‌ನ್ನು ಈ ಪ್ಲೇಯರ್‌ಗೆ ಬಳಸಿದೆ. ಮುಂದಿನ ಆವೃತ್ತಿಯಲ್ಲಿ ಮುಂಬೈ ಪರ ಆಡಲಿರುವ ನಮನ್ 5.25 ಕೋಟಿ ರೂಪಾಯಿ ಜೇಬಿಗೆ ಇಳಿಸಿಕೊಂಡಿದ್ದಾರೆ.
ಚೆನ್ನೈ ಪರ ಆಡಲಿರುವ ಕಿವೀಸ್ ಆಲ್‌ರೌಂಡರ್
ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದ ರಚಿನ್ ರವೀಂದ್ರ ಅವರಿಗೆ ಮತ್ತೊಮ್ಮೆ ಚೆನ್ನೈ ಅವಕಾಶ ನೀಡಿದೆ. ಇವರಿಗೆ ಚೆನ್ನೈ ಬರೋಬ್ಬರಿ 4 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
ಉಳಿದಂತೆ ಸಾಯಿ ಕಿಶೋರ್ ಅವರಿಗೆ ಗುಜರಾತ್, ಸ್ವಪ್ನಿಲ್ ಸಿಂಗ್‌ಗೆ ಬೆಂಗಳೂರು ಆರ್‌ಟಿಎಂ ಬಳಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications