ಕೊಹ್ಲಿ ಇಲ್ಲದ ಭಾರತ ತಂಡವನ್ನು ಸುಲಭವಾಗಿ ಆಸ್ಟ್ರೇಲಿಯಾ ಸೋಲಿಸಲಿದೆ: ಮೈಕಲ್ ವಾನ್

ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಚಿತ್ತವೂ ಕೂಡ ಈಗ ಆಸ್ಟ್ರೇಲಿಯಾ ಹಾಗೂ ಭಾರತದ ನಡುವಿನ ಸರಣಿಯ ಮೇಲಿದೆ. ಅದರಲ್ಲೂ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಕಳೆದ ಬಾರಿ ಐತಿಹಾಸಿಕವಾಗಿ ಭಾರತ ಆಸ್ಟ್ರೇಲಿಯಾ ತಂಡವನ್ನು ಮಣಿಸಿರುವುದು ಇದಕ್ಕೆ ಕಾರಣವಾಗಿದೆ.
ಆದರೆ ಈ ಬಾರಿಯ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಲಿದ್ದಾರೆ. ಕೊಹ್ಲಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಕೊಹ್ಲಿ ಕುಟುಂಬವನ್ನು ಸೇರಿಕೊಳ್ಳಲು ಬಿಸಿಸಿಐ ಅನುಮತಿಯನ್ನು ನೀಡಿದೆ. ಅದು ಆಸ್ಟ್ರೇಲಿಯಾಗೆ ನೆರವನ್ನು ನೀಡಲಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಇಲ್ಲದ ಅಂತಿಮ ಮೂರು ಪಂದ್ಯಗಳು ಆಸ್ಟ್ರೇಲಿಯಾ ಪಾಲಿಗೆ ಸುಲಭವಾಗಿರಲಿದೆ. ಈ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಸುಲಭವಾಗಿ ಗೆಲುವನ್ನು ಸಾಧಿಸಲಿದೆ ಎಂದು ಮೈಕಲ್ ವಾನ್ ತಮ್ಮ ಅಭಿಪ್ರಾಯವನ್ನು ಪ್ರಕಟಿಸಿದ್ದಾರೆ.
"3 ಟೆಸ್ಟ್ ಪಂದ್ಯಗಳಿಗೆ ವಿರಾಟ್ ಕೊಹ್ಲಿ ಇಲ್ಲ. ಮೊದಲ ಮಗುವಿಗೆ ತಂದೆಯಾಗುತ್ತಿರುವ ಕಾರಣ ಇದು ಸರಿಯಾದ ಕಾರಣ. ಆದರೆ ಇದೇ ಕಾರಣದಿಂದಾಗಿ ಆಸ್ಟ್ರೇಲಿಯಾ ಈ ಟೆಸ್ಟ್ ಪಂದ್ಯಗಳನ್ನು ಸುಲಭವಾಗಿ ಗೆಲ್ಲಲಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ" ಎಂದು ಟ್ವೀಟ್‌ನಲ್ಲಿ ಮೈಕಲ್ ವಾನ್ ಬರೆದುಕೊಂಡಿದ್ದಾರೆ.
ಅಂತಿಮ ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅಲಭ್ಯತೆಯ ಕಾರಣ ಅಜಿಂಕ್ಯ ರಹಾನೆ ತಂಡದ ನಾಯಕನಾಗಿರಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೊದಲಿಗೆ ಏಕದಿನ ಸರಣಿ ಆರಂಭವಾಗಲಿದೆ.ನವೆಂಬರ್ 27, 29 ಹಾಗೂ ಡಿಸೆಂಬರ್ 2ರಂದು ಏಕದಿನ ಪಮದ್ಯಗಳು ನಡೆಯಲಿದೆ. ಬಳಿಕ ಮೂರು ಟಿ20 ಪಂದ್ಯಗಳು ನಡೆಯಲಿದೆ. ಡಿಸೆಂಬರ್ 17 ರಿಂದ ಮೊದಲ ಟೆಸ್ಟ್ ನಡೆಯಲಿದೆ. ಇದು ಅಹರ್ನಿಶಿ ಪಂದ್ಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications