Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ಏಷ್ಯಾಕಪ್: ಪಾಕ್ ವಿರುದ್ಧ ಸೋಲು ಅನುಭವಿಸಿದ ಭಾರತ: ಕಾರಣ ಬಿಚ್ಚಿಟ್ಟ ನಾಯಕಿ ಹರ್ಮನ್

Women Asia cup: Harmanpreet Kaur explain reason why India Women lost match against Pakistan

ಮಹಿಳಾ ಏಷ್ಯಾ ಕಪ್‌ನಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದ್ದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಮುಖಾಮುಖಿ ಶುಕ್ರವಾರ ನಡೆಯಿತು. ಈ ಪಂದ್ಯದಲ್ಲಿ ಭಾರತದ ವನಿತೆಯರ ತಂಡ ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸುವ ಮೂಲಕ ನಿರಾಸೆ ಅನುಭವಿಸಿದೆ. ಈ ಮೂಲಕ ಪಾಕಿಸ್ತಾನದ ವಿರುದ್ಧ ಭಾರತ ಮಹಿಳಾ ತಂಡ ಆರು ವರ್ಷಗಳ ಬಳಿಕ ಸೋಲು ಅನುಭವಿಸಿದಂತಾಗಿದೆ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಭಾರತದ ವನಿತೆಯರು ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಭಾರತೀಯ ಅಭಿಮಾನಿಗಳಿಗೂ ಬೇಸರ ಮೂಡಿಸಿದೆ.

ಈ ಸೋಲಿನ ಬಳಿಕ ತಂಡದ ನಾಯಕ ಹರ್ಮನ್‌ಪ್ರೀತ್ ಕೌರ್ ಮಾತನಾಡಿದ್ದಾರೆ. "ಇದು ಬೆನ್ನಟ್ಟಬಹುದಾಗಿದ್ದ ಗುರಿಯಾಗಿತ್ತು. ಮಧ್ಯಮ ಓವರ್‌ಗಳಲ್ಲಿ ನಾವು ಸಿಂಗಲ್ಸ್‌ಗಳನ್ನು ತೆಗೆದುಕೊಂಡು ಸ್ಟ್ರೈಕ್‌ ರೊಟೇಟ್ ಮಾಡಲು ವಿಫಲವಾದೆವು. ಸಾಕಷ್ಟು ಡಾಟ್ ಬಾಲ್‌ಗಳನ್ನು ನಾವು ಆಡಿದೆವು. ಇದುವೇ ಸೋಲಿಗೆ ಕಾರಣವಾಯಿತು" ಎಂದಿದ್ದಾರೆ ನಾಯಕಿ ಹರ್ಮನ್‌ಪ್ರೀತ್ ಕೌರ್. ಈ ಸೋಲಿನ ಹೊರತಾಗಿಯೂ ಭಾರತ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಮುಂದುವರಿಸಿದೆ. ಆಡಿರುವ ನಾಲ್ಕು ಪಂದ್ಯಗಳ ಪೈಕಿ ಭಾರತ ತಂಡ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಮೊದಲಿಗೆ ಬೌಲಿಂಗ್ ನಡೆಸಿದ ಭಾರತ ಉತ್ತಮ ದಾಳಿ ಸಂಘಟಿಸಿ ಯಶಸ್ಸು ಸಾಧಿಸಿತ್ತು. ಪಾಕಿಸ್ತಾನ ಟಾಪ್ ಆರ್ಡರ್‌ ಬಹುಬೇಗನೆ ವಿಕೆಟ್ ಕಳೆದುಕೊಂಡಿತ್ತು. ಮುನೀಬ ಅಲಿ ಮತ್ತು ಅಮೀನ್ ಬೇಗನೆ ವಿಕೆಟ್ ಒಪ್ಪಿಸಿದ್ರೆ, ಸೊಹಾಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು. ಈ ವೇಳೆಯಲ್ಲಿ ತಂಡಕ್ಕೆ ಆಧಾರವಾಗಿದ್ದು ನಾಯಕಿ ಬಿಸ್ಮಾ ಮರೂಫ್ ಹಾಗೂ ನಿದಾ ದಾರ್‌. ಬಿಸ್ಮಾ ಮರೂಫ್ ಮತ್ತು ನಿದಾ ದಾರ್ ಜೊತೆಯಾಟವು ತಂಡದ ಸ್ಕೋರನ್ನು 100ರ ಗಡಿದಾಟಿಸಿತು. ಮರೂಫ್ 35 ಎಸೆತಗಳಲ್ಲಿ 32ರನ್ ಕಲೆಹಾಕಿದ್ರೆ, ನಿದಾ ದಾರ್ 37 ಎಸೆತಗಳಲ್ಲಿ ಅಜೇಯ 56ರನ್‌ ಕಲೆಹಾಕುವ ಮೂಲಕ ಮಿಂಚಿದರು. ಅಂತಿಮವಾಗಿ ಪಾಕಿಸ್ತಾನ 6 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿತು.

138 ರನ್ ಗುರಿ ಬೆನ್ನತ್ತಿದ ಹರ್ಮನ್ ಪ್ರೀತ್ ಕೌರ್ ಪಡೆ ಆರಂಭದಲ್ಲಿಯೇ ಮುಗ್ಗರಿಸಲು ಆರಂಭಿಸಿತು. ಸ್ಮೃತಿ ಮಂಧಾನ 17, ಸಬ್ಬಿನೇನಿ ಮೇಘನಾ 15, ಜೆಮಿಮಾ ರಾಡ್ರಿಗಸ್ 2, ದಯಾಲನ್ ಹೇಮಲತಾ 20, ದೀಪ್ತಿ ಶರ್ಮಾ 16, ಹರ್ಮನ್‌ಪ್ರೀತ್ ಕೌರ್ 12, ರಿಚಾ ಘೋಷ್ 26, ಪೂಜಾ ವಸ್ತ್ರಾಕರ್ 5, ರಾಧಾ ಯಾದವ್ 3, ರೇಣುಕಾ ಸಿಂಗ್ 2, ರಾಜೇಶ್ವರಿ ಗಾಯಕ್ವಾಡ್‌ 1 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು.
ಗೆಲ್ಲುವ ಪಂದ್ಯವನ್ನ ಕೈ ಚೆಲ್ಲಿದ ಭಾರತದ ವನಿತೆಯರು 19.4 ಓವರ್‌ಗಳಲ್ಲಿ 124ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಶರಣಾಯಿತು.

ಪಾಕಿಸ್ತಾನ ಮಹಿಳಾ ತಂಡದ ಪ್ಲೇಯಿಂಗ್ 11
ಮುನೀಬಾ ಅಲಿ(ವಿಕೆಟ್ ಕೀಪರ್), ಸಿದ್ರಾ ಅಮೀನ್, ಬಿಸ್ಮಾ ಮರೂಫ್(ನಾಯಕಿ), ನಿದಾ ದಾರ್, ಆಯೇಶಾ ನಸೀಮ್, ಅಲಿಯಾ ರಿಯಾಜ್, ಒಮೈಮಾ ಸೊಹೈಲ್, ಐಮಾನ್ ಅನ್ವರ್, ಸಾದಿಯಾ ಇಕ್ಬಾಲ್, ತುಬಾ ಹಸನ್, ನಶ್ರಾ ಸಂಧು
ಬೆಂಚ್‌: ಕೈನಾತ್ ಇಮ್ತಿಯಾಜ್, ಡಯಾನಾ ಬೇಗ್, ಸಿದ್ರಾ ನವಾಜ್, ಸದಾಫ್ ಶಮಾಸ್
ಭಾರತ ಮಹಿಳಾ ತಂಡದ ಪ್ಲೇಯಿಂಗ್ 11
ಸ್ಮೃತಿ ಮಂಧಾನ, ಸಬ್ಬಿನೇನಿ ಮೇಘನಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ದಯಾಲನ್ ಹೇಮಲತಾ, ರಿಚಾ ಘೋಷ್(ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್‌
ಬೆಂಚ್‌: ಶಫಾಲಿ ವರ್ಮಾ, ಸ್ನೇಹ ರಾಣಾ, ಕಿರಣ್ ನವ್ಗಿರೆ, ಮೇಘನಾ ಸಿಂಗ್‌

Story first published: Saturday, October 8, 2022, 2:15 [IST]
Other articles published on Oct 8, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+