ಚಾಲೆಂಜರ್ಸ್ ಟ್ರೋಫಿ: ವಿಮೆನ್ ಗ್ರೀನ್ ತಂಡಕ್ಕೆ ಗೆಲುವು

ಆಲೂರು, ಆಗಸ್ಟ್ 15: ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ಚಾಲೆಂಜರ್ಸ್ ಟ್ರೋಫಿಯ ಎರಡನೆಯ ಪಂದ್ಯದಲ್ಲಿ ಇಂಡಿಯಾ ವಿಮೆನ್ ಗ್ರೀನ್ ತಂಡ ಇಂಡಿಯಾ ವಿಮೆನ್ ಬ್ಲೂ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು.
ಇದು ಬ್ಲೂ ತಂಡಕ್ಕೆ ಸತತ ಎರಡನೆಯ ಸೋಲಾಗಿದೆ. ಮೊದಲ ಪಂದ್ಯದಲ್ಲಿ ರೆಡ್ ತಂಡದ ವಿರುದ್ಧ ಮಿಥಾಲಿ ರಾಜ್ ಪಡೆ ಸೋಲು ಅನುಭವಿಸಿತ್ತು.
ಮಳೆಯ ಕಾರಣ ಪಂದ್ಯವನ್ನು 17 ಓವರ್‌ಗಳಿಗೆ ಇಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಬ್ಲೂ ತಂಡ ರನ್ ಗಳಿಸಲು ಪರದಾಡಿತು.
ವೆಳ್ಳಸ್ವಾಮಿ ವನಿತಾ 35 (39) ರನ್ ಗಳಿಸಿ ತಂಡಕ್ಕೆ ಆಧಾರವಾದರು. ಗ್ರೀನ್ ತಂಡದ ಬಿಗಿ ಬೌಲಿಂಗ್‌ನಿಂದಾಗಿ 17 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 82 ರನ್ ಕಲೆಹಾಕಿತು.
ಸುಲಭದ ಗುರಿ ಬೆನ್ನತ್ತಿದ ಗ್ರೀನ್ ತಂಡವು 78 ರನ್ ಗಳಿಸಿದ್ದಾಗ ಮತ್ತೆ ಮಳೆ ಕಾಟ ಆರಂಭವಾಯಿತು. ಇದರಿಂದ ವಿಜೆಡಿ ನಿಯಮದ ಆಧಾರದಲ್ಲಿ ಗ್ರೀನ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.
ಸಂಕ್ಷಿಪ್ತ ಸ್ಕೋರ್
ಇಂಡಿಯಾ ವಿಮೆನ್ ಬ್ಲೂ: 82/5 (17) ವಿ. ವನಿತಾ 35, ಅನುಜಾ ಪಾಟೀಲ್ 14, ಅರುಂದತಿ ರೆಡ್ಡಿ 13/2, ಮೋನಿಕಾ ದಾಸ್ 17/1
ಇಂಡಿಯಾ ವಿಮೆನ್ ಗ್ರೀನ್: 78/3 (15.4) ಪ್ರಿಯಾ ಪೂನಿಯಾ 46*, ವೇದಾ ಕೃಷ್ಣಮೂರ್ತಿ 11, ರಾಧಾ ಯಾದವ್ 15/1, ಅನುಜಾ ಪಾಟೀಲ್ 8/1
ಫಲಿತಾಂಶ: ಗ್ರೀನ್ ತಂಡಕ್ಕೆ ಏಳು ವಿಕೆಟ್ ಜಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications