Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಮೆನ್ ಕ್ರಿಕೆಟ್: ಇಂಡಿಯಾ ರೆಡ್ ಸತತ ಎರಡನೇ ಜಯ

Women cricket: India red wins against India blues

ಬೆಂಗಳೂರು, ಆಗಸ್ಟ್ 17: ಮಹಿಳಾ ಟಿ-20 ಚಾಲೆಂಜರ್ಸ್‌ ಟ್ರೋಫಿಯಲ್ಲಿ ಇಂಡಿಯಾ ರೆಡ್ ತಂಡವು ಸತತ ಎರಡನೇ ಜಯ ದಾಖಲಿಸಿದೆ.

ನಗರದ ಆಲೂರಿನ ಕ್ರಿಕೆಟ್ ಮೈದಾನದಲ್ಲಿ ನಿನ್ನೆ ಇಂಡಿಯಾ ಬ್ಲೂ ವಿರುದ್ಧ ನಡೆದ ಪಂದ್ಯದಲ್ಲಿ ಆಲ್‌ರೌಂಡ್ ಆಟ ಪ್ರದರ್ಶಿಸಿದ ಇಂಡಿಯಾ ರೆಡ್ ತಂಡ 8 ರನ್‌ಗಳಿಂದ ಅಮೋಘ ಜಯ ಸಾಧಿಸಿತು. ಈ ಮುಂಚೆ ಇಡಿಯಾ ಗ್ರೀನ್ ತಂಡವನ್ನು ಅದು ಮಣಿಸಿತ್ತು.

ಪೂನಂ ರಾವುತ್ ಮತ್ತು ಮೋಬಾ ಮೆಷ್ರಮ್ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ ಇಂಡಿಯಾ ರೆಡ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ 114 ರನ್ ಗಳಿಸಿತ್ತು.

ಗುರಿಯನ್ನು ಬೆನ್ನತ್ತಿದ ಇಂಡಿಯಾ ಬ್ಲೂಸ್ ತಂಡ ಆರಂಭಿಕ ಕುಸಿತಕ್ಕೆ ಓಳಗಾಯಿತು. ಆ ನಂತರ ಬಂದ ವೇದಾ ಕೃಷ್ಣಮೂರ್ತಿ ಮತ್ತು ಅರುಂಧತಿ ರೆಡ್ಡಿ ಅವರು ತಂಡಕ್ಕೆ ಆಸರೆ ನೀಡಿದರಾದರೂ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ.

ಇಂಡಿಯಾ ರೆಡ್‌ನ ಉತ್ತಮ ಬೌಲಿಂಗ್ ಮುಂದೆ ರನ್ ಗಳಿಸಲು ಪರದಾಡಿದ ಇಡಿಯಾ ಬ್ಲೂಸ್ ತಂಡ 19.4 ಓವರ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 106 ರನ್ ಅಷ್ಟೆ ಗಳಿಸಲು ಶಕ್ತವಾಯಿತು.

ಅಂತರರಾಷ್ಟ್ರೀಯ ಮಟ್ಟದ ಮಹಿಳಾ ಕ್ರಿಕೆಟ್ ಆಟಗಾರರು ಮತ್ತು ಮಹಿಳಾ ಆಟಗಾರರು ಸೇರಿಸುವ ಟಿ-20 ಚಾಲೆಂಜರ್ಸ್‌ ಟ್ರೋಫಿಯು ಆಗಸ್ಟ್ 14 ಕ್ಕೆ ಪ್ರಾರಂಭವಾಗಿದ್ದು ಆಗಸ್ಟ್ 21 ಕ್ಕೆ ಮುಗಿಯಲಿದೆ.

Story first published: Friday, August 17, 2018, 9:24 [IST]
Other articles published on Aug 17, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+