WPL Auction 2023: ಇಂದು ಮುಂಬೈನಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಆಟಗಾರರ ಹರಾಜು

ಮಹಿಳಾ ಪ್ರೀಮಿಯರ್ ಲೀಗ್ (WPL 2023) ಚೊಚ್ಚಲ ಆವೃತ್ತಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಇಂದು ಆರಂಭವಾಗಲಿದೆ. ಮುಂಬೈನ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಬರೋಬ್ಬರಿ 449 ಕ್ರಿಕೆಟಿಗರು ಹೆಸರು ನೊಂದಾಯಿಸಿಕೊಂಡಿದ್ದು, ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ.
5 ತಂಡಗಳು ತಮ್ಮ ಯೋಜನೆ, ರಣತಂತ್ರದೊಂದಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿವೆ. ಪ್ರತಿ ತಂಡ ಆಟಗಾರರ ಖರೀದಿಗಾಗಿ 12 ಕೋಟಿ ರುಪಾಯಿ ಖರ್ಚು ಮಾಡುತ್ತದೆ. ಮಧ್ಯಾಹ್ಮ 2.30 ಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ಮಧ್ಯಾಹ್ನ 2 ಗಂಟೆಗೆ ಜಿಯೋ ಸಿನಿಮಾ ಹರಾಜು ಪ್ರಕ್ರಿಯೆಯನ್ನು ನೇರಪ್ರಸಾರ ಮಾಡಲಿದೆ. ಮಲ್ಲಿಕಾ ಸಾಗರ್ ಮೊಲದ ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯನ್ನು ನಡೆಸಿಕೊಡಲಿದ್ದಾರೆ.
449 ಆಟಗಾರರಲ್ಲಿ ಗರಿಷ್ಠ 90 ಆಟಗಾರರು ಮಾತ್ರ ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಅವಕಾಶ ಪಡೆಯುತ್ತಾರೆ. ಪ್ರತಿ ತಂಡ 15-18 ಆಟಗಾರರನ್ನು ಹೊಂದಲು ಮಾತ್ರ ಅವಕಾಶ ಇದೆ. ಪ್ರತಿ ತಂಡದಲ್ಲಿ ಗರಿಷ್ಠ 6 ವಿದೇಶಿ ಆಟಗಾರರನ್ನು ಹೊಂದಲು ಅವಕಾಶ ಮಾಡಿಕೊಡಲಾಗಿದೆ. ಒಟ್ಟು 60 ಭಾರತೀಯ ಆಟಗಾರರು ಮತ್ತು 30 ವಿದೇಶಿ ಆಟಗಾರರು ವಿವಿಧ ತಂಡಗಳನ್ನು ಸೇರಲಿದ್ದಾರೆ.

ಬಲಿಷ್ಠ ತಂಡ ಕಟ್ಟಲು ತಯಾರಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ , ಯುಪಿ ವಾರಿಯರ್ಸ್, ಗುಜರಾತ್ ಜೈಂಟ್ಸ್ , ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿಗಾಗಿ ಸೆಣೆಸಲಿವೆ. ಬಲಿಷ್ಠ ತಂಡವನ್ನು ಕಟ್ಟಲು ಎಲ್ಲಾ ತಂಡಗಳು ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿವೆ.
24 ಆಟಗಾರರು ಗರಿಷ್ಠ 50 ಲಕ್ಷ ರುಪಾಯಿ ಮೂಲಬೆಲೆ ಹೊಂದಿದ್ದಾರೆ. ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನ, ಸೇರಿದಂತೆ ಭಾರತ 8 ಆಟಗಾರರು ಈ ಪಟ್ಟಿಯಲ್ಲಿದ್ದಾರೆ. 40 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿರುವ 30 ಆಟಗಾರರಿದ್ದು, ಇದರಲ್ಲಿ ಭಾರತದ 8 ಆಟಗಾರರು ಸೇರಿದ್ದಾರೆ.

ಯಾವ್ಯಾವ ದೇಶದಿಂದ ಎಷ್ಟು ಆಟಗಾರರ ನೋಂದಣಿ
ಕ್ರಿಕೆಟ್ ಆಡುವ ಬಹುತೇಕ ಎಲ್ಲಾ ರಾಷ್ಟ್ರಗಳಿಂದ ಆಟಗಾರರು ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ 28 ಆಟಗಾರರು, ಇಂಗ್ಲೆಂಡ್‌ನಿಂದ 27 ಆಟಗಾರರು, ವೆಸ್ಟ್ ಇಂಡೀಸ್‌ನ 23 ಆಟಗಾರರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಉತ್ಸಾಹ ತೋರಿದ್ದಾರೆ.
ನ್ಯೂಜಿಲೆಂಡ್‌ನಿಂದ 19, ದಕ್ಷಿಣ ಆಫ್ರಿಕಾದಿಂದ 17 ಆಟಗಾರರು ಸ್ಪರ್ಧೆಯಲ್ಲಿದ್ದಾರೆ. ಶ್ರೀಲಂಕಾದಿಂದ 15 ಆಟಗಾರರು, ಜಿಂಬಾಬ್ವೆಯಿಂದ 11 ಆಟಗಾರರು, ಬಾಂಗ್ಲಾದೇಶದಿಂದ 9, ಯುಎಇಯಿಂದ 4 ಆಟಗಾರರು ಇದ್ದಾರೆ. ಯುಎಸ್‌ಎ, ಹಾಂಗ್‌ಕಾಂಗ್, ನೆದರ್ಲ್ಯಾಂಡ್ಸ್ ಮತ್ತು ಥೈಲ್ಯಾಂಡ್‌ನಿಂದ ತಲಾ ಒಬ್ಬರು ಹರಾಜು ಪ್ರಕ್ರಿಯೆಯಲ್ಲಿದ್ದಾರೆ.

ಯಾರಾಗ್ತಾರೆ ದುಬಾರಿ ಆಟಗಾರರು?
ಪ್ರಮುಖ ಆಟಗಾರರನ್ನು ತಂಡಕ್ಕೆ ಸೇರಿಸಲು ಎಲ್ಲಾ ಫ್ರಾಂಚೈಸಿಗಳು ಪೈಪೋಟಿ ನಡೆಸುವುದರಿಂದ ಕೆಲವರು ದೊಡ್ಡ ಮೊತ್ತಕ್ಕೆ ಹರಾಜಾಗುವ ಬಗ್ಗೆ ನಿರೀಕ್ಷೆ ಹೊಂದಲಾಗಿದೆ. ಸ್ಮೃತಿ ಮಂದಾನ, ಹರ್ಮನ್ ಪ್ರೀತ್ ಕೌರ್, ಸೋಫಿ ಡಿವೈನ್, ಆಶ್ಲೆ ಗಾರ್ಡ್ನರ್, ಹೇಲಿ ಮ್ಯಾಥ್ಯೂಸ್, ಎಲಿಸಾ ಪೆರ್ರಿ, ಎಕ್ಲೆಸ್ಟೋನ್ ದೊಡ್ಡ ಮೊತ್ತಕ್ಕೆ ಹರಾಜಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಶ್ರೀಲಂಕಾದ ಲತಿಕಾ ಕುಮಾರಿ ಹರಾಜಿನಲ್ಲಿ ಭಾಗವಹಿಸುತ್ತಿರುವ ಹಿರಿಯ ಆಟಗಾರ್ತಿಯಾಗಿದ್ದಾರೆ. ಇವರಿಗೆ 41 ವರ್ಷ ವಯಸ್ಸಾಗಿದೆ. 15 ವರ್ಷದ ಮೂವರು ಆಟಗಾರ್ತಿಯರು ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಟಿ20 ವಿಶ್ವಕಪ್ ಗೆದ್ದ ಭಾರತ ಅಂಡರ್ 19 ತಂಡದ ಆಟಗಾರರಾದ ವೇಗದ ಬೌಲರ್ ಶಬ್ನಮ್ MD ಮತ್ತು ಎಡಗೈ ಸ್ಪಿನ್ನರ್ ಸೋನಮ್ ಯಾದವ್ ಹರಾಜಿನಲ್ಲಿದ್ದಾರೆ. ಆಂಧ್ರದ ಸ್ಪಿನ್ನರ್ ವಿನ್ನಿ ಸುಜಾನ್ 10 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications