
ಕೌಲಾಲಂಪುರ, ಜೂ. 10: ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ವನಿತಾ ಟಿ20 ಫೈನಲ್ ಪಂದ್ಯ ನಡೆಯುತ್ತಿದ್ದು, ಭಾರತ ಆರಂಭದಲ್ಲೇ ಬ್ಯಾಟಿಂಗ್ ವೈಫಲ್ಯವನ್ನು ತೋರಿಕೊಂಡಿದೆ. 10 ಓವರ್ ಮುಕ್ತಾಯಕ್ಕೆ ಭಾರತ 4 ವಿಕೆಟ್ ಕಳೆದುಕೊಂಡು ಕೇವಲ 46 ರನ್ ಪೇರಿಸಿದೆ.
ಟಾಸ್ ಗೆದ್ದಿರುವ ಬಾಂಗ್ಲಾ ದೇಶ ವನಿತೆಯರು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದು, ಭಾರತ ಈ ಪ್ರಮುಖ ಪಂದ್ಯದಲ್ಲೇ ಕಳಪೆ ಬ್ಯಾಟಿಂಗ್ ತೋರಿಕೊಂಡಿತು. ಬಾಂಗ್ಲಾ ಆಟಗಾರ್ತಿಯರ ಸ್ಪಿನ್ ದಾಳಿಗೆ ಭಾರತ ಬೇಗನೆ ವಿಕೆಟ್ ಕಳೆದುಕೊಂಡು ರನ್ ಗಳಿಕೆಯಲ್ಲಿ ಹಿನ್ನೆಡೆ ಅನುಭವಿಸಿತು.
ಟೂರ್ನಿಯಲ್ಲಿ ಆಡಿರುವ ಒಟ್ಟು 5 ಪಂದ್ಯಗಳಲ್ಲಿ 4 ಗೆಲುವು ಮತ್ತು 1 ಸೋಲನ್ನು ಕಂಡಿರುವ ಭಾರತ ಒಟ್ಟು 8 ಅಂಕಗಳನ್ನು ಗಳಿಸುವುದರೊಂದಿಗೆ ಫೈನಲ್ ಕಾದಾಟಕ್ಕಿಳಿದಿದ್ದು, ಈ ಪಂದ್ಯದಲ್ಲೂ ಗೆಲ್ಲುವ ನಿರೀಕ್ಷೆಯಿದೆ.
ಶನಿವಾರ ನಡೆದ ಸೆಮಿಫೈನಲ್ಸ್ ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು 7 ವಿಕೆಟ್ ನಿಂದ ಮಣಿಸಿ ಫೈನಲ್ ಗೆ ಲಗ್ಗೆಯಿಟ್ಟಿತ್ತು. ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಭಾರತ, ಪಾಕಿಸ್ತಾನ ನೀಡಿದ್ದ 73 ರನ್ ಗುರಿ ತಲುಪಿ ವಿಜಯದ ನಗು ಬೀರಿತ್ತು.