ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಬಾಂಗ್ಲಾ ವನಿತೆಯರು!

By Mahesh
ಭಾರತದ ವಿರುದ್ಧ ಇತಿಹಾಸ ಬರೆದ ಬಾಂಗ್ಲಾ ವನಿತೆಯರು | Oneindia kannada
Womens Asia Cup T20: Bangladesh stun India for maiden victory

ಕೌಲಾಲಂಪುರ್, ಜೂನ್ 06: ಮಹಿಳೆಯರ ಏಷ್ಯಾಕಪ್ ಟಿ20 ಟೂರ್ನಮೆಂಟ್ ನಲ್ಲಿ ಮೊದಲೆರಡು ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದ ಭಾರತ ಮಹಿಳಾ ತಂಡದ ಗೆಲುವಿನ ಓಟಕ್ಕೆ ಬಾಂಗ್ಲಾದೇಶದ ತಂಡ ಬ್ರೇಕ್ ಹಾಕಿದೆ.

ಈ ಗೆಲುವಿನ ಮೂಲಕ ಬಾಂಗ್ಲಾ ವನಿತೆಯರು, ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಪಂದ್ಯಾವಳಿಯಲ್ಲಿ ಮೊಟ್ಟ ಮೊದಲ ಗೆಲುವು ದಾಖಲಿಸಿದ್ದಾರೆ.

ಥೈಲ್ಯಾಂಡ್‌ ಹಾಗೂ ಮಲೇಶಿಯಾ ವಿರುದ್ಧ ಸುಲಭದ ಗೆಲುವು ದಾಖಲಿಸಿದ ಭಾರತ ಬುಧವಾರ(ಜೂನ್ 06) ದಂದು ತನ್ನ ಮೂರನೇ ಪಂದ್ಯದಲ್ಲಿ 7 ವಿಕೆಟ್ ಗಳಿಂದ ಸೋಲು ಕಂಡಿದೆ.

ಈ ಪಂದ್ಯದಲ್ಲಿ ಸೋಲು ಕಂಡರೂ, ಮೂರು ಪಂದ್ಯಗಳಲ್ಲಿ ಎರಡಲ್ಲಿ ಗೆಲುವು ಸಾದಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.



ಭಾರತದ ವನಿತೆಯರ ತಂಡ ಗುರುವಾರದಂದು ಶ್ರೀಲಂಕಾ ಹಾಗೂ ಶನಿವಾರದಂದು ಪಾಕಿಸ್ತಾನ ವಿರುದ್ಧ ಆಡಲಿದೆ. ಭಾರತ, ಶ್ರೀಲಂಕಾ, ಪಾಕಿಸ್ತಾನ ತಲಾ 4 ಅಂಕಗಳನ್ನು ಗಳಿಸಿವೆ. ಆದರೆ, ಭಾರತದ ಮಹಿಳೆಯರ ತಂಡವು +3.428 ರನ್ ಸರಾಸರಿ ಹೊಂದಿದೆ.

ಸಂಕ್ಷಿಪ್ತ ಸ್ಕೋರ್ :
ಭಾರತ 20 ಓವರ್ ಗಳಲ್ಲಿ 141/7 (ಹರ್ಮನ್ ಪ್ರೀತ್ ಕೌರ್ 42ರನ್ (37 ಎಸೆತಗಳು), ದೀಪ್ತಿ ಶರ್ಮ 32 ರನ್ (28 ಎಸೆತಗಳು), ರುಮಾನಾ ಅಹ್ಮದ್ 4 ಓವರ್ ಗಳಲ್ಲಿ 3/21)

ಬಾಂಗ್ಲಾದೇಶ 19.4ಓವರ್ ಗಳಲ್ಲಿ 142ರನ್ (ಫರ್ಗಾನಾ ಹಕ್ 46 ಎಸೆತಗಳಲ್ಲಿ 52 ಅಜೇಯ, ರುಮಾನಾ ಅಹ್ಮದ್ 34 ಎಸೆತಗಳಲ್ಲಿ 42 ಅಜೇಯ)
ಫಲಿತಾಂಶ: ಬಾಂಗ್ಲಾದೇಶಕ್ಕೆ 7 ವಿಕೆಟ್ ಗಳ ಜಯ.

Story first published: Thursday, June 7, 2018, 0:13 [IST]
Other articles published on Jun 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X