ನವೆಂಬರ್ 4-9ಕ್ಕೆ ಯುಎಇಯಲ್ಲಿ ವಿಮೆನ್ಸ್ ಚಾಲೆಂಜರ್ ಸೀರೀಸ್

ದುಬೈ: ಮಹಿಳೆಯರ ಮಿನಿ ಐಪಿಎಲ್ ಎಂದು ಕರೆಯಲಾಗುವ ಬಹು ನಿರೀಕ್ಷಿತ ವಿಮೆನ್ಸ್ ಚಾಲೆಂಜರ್ ಸೀರೀಸ್‌ನ ದಿನಾಂಕ ಪ್ರಕಟವಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನವೆಂಬರ್ 4ರಿಂದ ನವೆಂಬರ್ 9ರ ವರೆಗೆ ವಿಮೆನ್ಸ್ ಚಾಲೆಂಜರ್ ಸೀರೀಸ್ ನಡೆಯಲಿದೆ.
ಐಪಿಎಲ್ ಹಿರಿಯ ಅಧಿಕಾರಿಯೊಬ್ಬರು ವಿಮೆನ್ಸ್ ಚಾಲೆಂಜರ್ ಸೀರೀಸ್ ದಿನಾಂಕವನ್ನು ಬುಧವಾರ (ಸೆಪ್ಟೆಂಬರ್ 30) ಖಾತರಿಪಡಿಸಿದ್ದಾರೆ. ಕೊರೊನಾವೈರಸ್‌ನಿಂದಾಗಿ ಭಾರತದಲ್ಲಿ ಮಹಿಳಾ ಕ್ರಿಕೆಟ್ ಇನ್ನೂ ಶುರುವಾಗಿಲ್ಲ. 'ಹೌದು, ಟೂರ್ನಿಯ ದಿನಾಂಕಗಳು ಅಂತಿಮಗೊಂಡಿವೆ,' ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಕೊರೊನಾ ನಡುವಿನಲ್ಲಿ ಮಹಿಳಾ ಟೂರ್ನಿ ನಡೆಸಲು ಮುಂದಾಗಿರುವುದಕ್ಕೆ ಸೌರವ್ ಗಂಗೂಲಿ ಮುಂದಾಳತ್ವದ ಬಿಸಿಸಿಐ ವಿರುದ್ಧ ಟೀಕೆಗಳೂ ಕೇಳಿ ಬಂದಿವೆ. ಅದರೆ ಮೂರು ತಂಡಗಳು ಸ್ಪರ್ಧಿಸುವ ಈ ಟೂರ್ನಿ ನಡೆಸಲು ಬಿಸಿಸಿಐ ನಿರ್ಧರಿಸಿದೆ.
ವಿಮೆನ್ಸ್ ಚಾಲೆಂಜರ್ ಸೀರೀಸ್‌ನಲ್ಲಿ ಪಾಲ್ಗೊಳ್ಳಲಿರುವ ತಂಡಗಳೆಂದರೆ ಟ್ರೈಬ್ಲೇಝರ್ಸ್, ವೆಲಾಸಿಟಿ ಮತ್ತು ಸೂಪರ್‌ನೋವಾಸ್. ಫೈನಲ್ ಪಂದ್ಯ ನವೆಂಬರ್ 9ಕ್ಕೆ ನಡೆಯಲಿದೆ. ಈ ದಿನ ಪುರುಷರ ಫೈನಲ್ಸ್ ಇರೋದಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications