Women's Emerging Asia Cup 2023: ಕನ್ನಡತಿ ಶ್ರೇಯಾಂಕ ಮ್ಯಾಜಿಕ್; ಹಾಂಗ್‌ಕಾಂಗ್ ಬಗ್ಗುಬಡಿದ ಭಾರತ ಎ ತಂಡ
ಮಂಗಳವಾರ, ಜೂನ್ 13ರಂದು ಹಾಂಗ್‌ಕಾಂಗ್‌ನ ಮೊಂಗ್ ಕಾಕ್‌ನಲ್ಲಿರುವ ಮಿಷನ್ ರೋಡ್ ಗ್ರೌಂಡ್‌ನಲ್ಲಿ ನಡೆದ ಮಹಿಳಾ ಉದಯೋನ್ಮುಖ ಟಿ20 ಏಷ್ಯಾ ಕಪ್ 2023ರಲ್ಲಿ ಭಾರತ ಎ ತಂಡ ಹಾಂಗ್‌ಕಾಂಗ್ ತಂಡದ ವಿರುದ್ಧ ಸುಲಭ ಗೆಲುವು ಸಾಧಿಸಿತು.
ಹಾಂಗ್‌ಕಾಂಗ್ ನೀಡಿದ್ದ 35 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ ಎ ತಂಡ ಇನ್ನೂ 88 ಎಸೆತಗಳು ಬಾಕಿ ಇರುವಂತೆಯೇ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ಕಂಡಿತು.

ಈ ಅತ್ಯದ್ಭುತ ಗೆಲುವಿನೊಂದಿಗೆ ಪಾಕಿಸ್ತಾನ ಎ ಮತ್ತು ನೇಪಾಳ ಸೇರಿದಂತೆ ಇತರ ಎರಡು ತಂಡಗಳನ್ನು ಒಳಗೊಂಡಿರುವ ಎ ಗುಂಪಿನಲ್ಲಿ ಭಾರತ ಎ ತಂಡ ಎರಡು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ತನ್ನ ಖಾತೆಯನ್ನು ತೆರೆದಿದೆ.
ಮಂಗಳವಾರ ಮಧ್ಯಾಹ್ನ ಮಿಷನ್ ರೋಡ್ ಮೈದಾನದಲ್ಲಿ ಆತಿಥೇಯ ಹಾಂಗ್‌ಕಾಂಗ್ ವಿರುದ್ಧ ಟಾಸ್ ಗೆದ್ದ ಭಾರತ ಎ ತಂಡದ ನಾಯಕಿ ಶ್ವೇತಾ ಸೆಹ್ರಾವತ್ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಭಾರತ ಎ ತಂಡದ ಮಹಿಳಾ ಬೌಲರ್‌ಗಳು ಪವರ್‌ಪ್ಲೇಯಿಂದಲೇ ಎದುರಾಳಿ ತಂಡದ ವಿಕೆಟ್‌ಗಳನ್ನು ಪಡೆದಿದ್ದರಿಂದ, ನಾಯಕಿ ಶ್ವೇತಾ ಸೆಹ್ರಾವತ್ ಅವರು ಬೌಲಿಂಗ್ ಆಯ್ಕೆ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಅಂತಿಮವಾಗಿ ಹಾಂಗ್‌ಕಾಂಗ್ ತಂಡವನ್ನು 14 ಓವರ್‌ಗಳಲ್ಲಿ 34 ರನ್‌ಗಳ ಅಲ್ಪ ರನ್‌ಗಳಿಗೆ ಭಾರತದ ನಾಲ್ಕು ಬೌಲರ್‌ಗಳು ಪರಸ್ಪರ ಎಲ್ಲಾ ವಿಕೆಟ್‌ಗಳನ್ನು ಹಂಚಿಕೊಂಡರು.
ಈ ವೇಳೆ ತನ್ನ 3 ಓವರ್‌ಗಳ ಕೋಟಾದಲ್ಲಿ ಕೇವಲ ಎರಡು ರನ್‌ಗಳನ್ನು ನೀಡಿ 5 ವಿಕೆಟ್‌ಗಳನ್ನು ಪಡೆದು ಸ್ಟಾರ್ ಬೌಲರ್ ಎನಿಸಿದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಭಾರತ ಎ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.
ಇನ್ನುಳಿದಂತೆ ಭಾರತ ಎ ತಂಡದ ಪರ ಮನ್ನತ್ ಕಶ್ಯಪ್ ಮತ್ತು ಪಾರ್ಶವಿ ಚೋಪ್ರಾ ತಲಾ ಎರಡು ವಿಕೆಟ್ ಪಡೆದರೆ, ಟಿಟಾಸ್ ಸಧು 1 ವಿಕೆಟ್ ಪಡೆದರು.
ಸುಲಭ ಗುರಿ ಬೆನ್ನಟ್ಟಿದ ಭಾರತ ಎ ತಂಡ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ನಾಯಕಿ ಶ್ವೇತಾ ಸೆಹ್ರಾವತ್ ಅವರ ವಿಕೆಟ್ ಕಳೆದುಕೊಂಡಿತು. ಅನಂತರ, ಗೊಂಗಡಿ ತ್ರಿಶಾ ಅವರು ಯು ಚೆಟ್ರಿಯೊಂದಿಗೆ ಸೇರಿಕೊಂಡು 34 ರನ್‌ಗಳ ಗುರಿಯನ್ನು ನಿರಾಯಾಸವಾಗಿ ಗುರಿ ತಲುಪಿಸಿದರು.
ಹಾಂಗ್‌ಕಾಂಗ್‌ನಲ್ಲಿ ನಡೆಯುತ್ತಿರುವ 2023ರ ಉದಯೋನ್ಮುಖ ಏಷ್ಯಾ ಕಪ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ಶುಭಾರಂಭ ಮಾಡಿತು.
ಗಮನಾರ್ಹವಾಗಿ, ಇದು ಮಹಿಳೆಯರ ಟಿ20 ಎಮರ್ಜಿಂಗ್ ಏಷ್ಯಾ ಕಪ್‌ನ ಮೊದಲ ಆವೃತ್ತಿಯಾಗಿದೆ. ಈ ಪಂದ್ಯಾವಳಿಯಲ್ಲಿ ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೇರಿದಂತೆ ಏಕದಿನ ಸ್ಥಾನಮಾನ ಹೊಂದಿರುವ ತಂಡಗಳು ತಮ್ಮ ಎ ತಂಡವನ್ನು ಪಂದ್ಯಾವಳಿಗೆ ಕಳುಹಿಸಿದ್ದರೆ, ಹಾಂಗ್‌ಕಾಂಗ್, ಯುನೈಟೆಡ್ ಅರಬ್ ಎಮಿರೇಟ್ಸ್, ಮಲೇಷ್ಯಾ ಮತ್ತು ನೇಪಾಳದಂತಹ ಸಹವರ್ತಿ ರಾಷ್ಟ್ರಗಳು ತಮ್ಮ ಹಿರಿಯ ತಂಡವನ್ನು ಕಣಕ್ಕಿಳಿಸಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications