ಮಹಿಳಾ ಐಪಿಎಲ್: ಬಿಸಿಸಿಐನಿಂದ ತಂಡಗಳು, ಸಂಪೂರ್ಣ ವೇಳಾಪಟ್ಟಿ ಪ್ರಕಟ

ನವದೆಹಲಿ: ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಂತೆ ಮಹಿಳೆಯರಿಗೂ ಐಪಿಎಲ್ ಟಿ20 ಟೂರ್ನಿಯನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇಂಡಿಯಾ ಆಯೋಜಿಸುತ್ತಿದೆ. ಇದಕ್ಕೆ ವಿಮೆನ್ಸ್ ಟಿ20 ಚಾಲೆಂಜ್ ಎಂದು ಕರೆಯಲಾಗುತ್ತದೆ. ಐಪಿಎಲ್ ಮಧ್ಯೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಈ ಟೂರ್ನಿ ನಡೆಯಲಿದೆ. ಟೂರ್ನಿಗೆ ಸಂಬಂಧಿಸಿ ಬಿಸಿಸಿಐಯು ಮೂರು ತಂಡಗಳು ಮತ್ತು ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಯುಎಇಯಲ್ಲಿ ನವೆಂಬರ್ 4ರಿಂದ ನವೆಂಬರ್ 9ರವರೆಗೆ ವಿಮೆನ್ಸ್ ಟಿ20 ಚಾಲೆಂಜ್ ನಡೆಯಲಿದೆ. ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂದಾನ ಮತ್ತು ಮಿಥಾಲಿ ರಾಜ್ ಕ್ರಮವಾಗಿ ಸೂಪರ್ ನೋವಾಸ್, ಟ್ರೈಬ್ಲೇಸರ್ಸ್ ಮತ್ತು ವೆಲಾಸಿಟಿ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ.
ಟೂರ್ನಿಯಲ್ಲಿ ಸ್ಪರ್ಧಿಸಲಿರುವ ಸಂಪೂರ್ಣ ತಂಡ, ವೇಳಾಪಟ್ಟಿ ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಮುಖ ದೇಶಗಳ ಆಟಗಾರ್ತಿಯರು ಭಾಗಿ
ವಿಶ್ವ ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿರುವ ಭಾರತ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ತಂಡಗಳ ಪ್ರಮುಖ ಆಟಗಾರ್ತಿಯರು ಮೂರು ತಂಡಗಳಾಗಿ ವಿಮೆನ್ಸ್ ಟಿ20 ಚಾಲೆಂಜ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಸೂಪರ್‌ನೋವಾಸ್
ಹರ್ಮನ್‌ಪ್ರೀತ್ ಕೌರ್ (ಸಿ), ಜೆಮಿಮಾ ರೊಡ್ರಿಗಸ್ (ವಿಸಿ), ಚಮರಿ ಅತಪಟ್ಟು, ಪ್ರಿಯಾ ಪೂನಿಯಾ, ಅನುಜಾ ಪಾಟೀಲ್, ರಾಧಾ ಯಾದವ್, ತಾನಿಯಾ ಭಾಟಿಯಾ (ಡಬ್ಲ್ಯೂಕೆ), ಶಶಿಕಲಾ ಸಿರಿವರ್ಧನೆ, ಪೂನಂ ಯಾದವ್, ಶಕೇರಾ ಸಲ್ಮನ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಕಾರ್ , ಮುಸ್ಕನ್ ಮಲಿಕ್.

ಟ್ರೈಬ್ಲೇಸರ್ಸ್
ಸ್ಮೃತಿ ಮಂಧಾನ (ಸಿ), ದೀಪ್ತೀ ಶರ್ಮಾ (ವಿಸಿ), ಪೂನಂ ರಾವತ್, ರಿಚಾ ಘೋಶ್, ಡಿ ಹೇಮಲತಾ, ನೌಝತ್ ಪರ್ವೀನ್ (ವಿಕೆ), ರಾಜೇಶ್ವರಿ ಗಾಯಕ್ವಾಡ್, ಹರ್ಲೀನ್ ಡಿಯೋಲ್, ಜೂಲನ್ ಗೋಸ್ವಾಮಿ, ಸಿಮ್ರನ್ ದಿಲ್ ಬಹದ್ದೂರ್, ಸಲ್ಮಾ ಖತುನ್, ಸೋಫಿ ಎಕ್ಲೆಸ್ಟೋನ್, ನಥಕನ್ ಚಾಂಥಮ್, ದಿಯಾಂದ್ರ ಡೊಟಿನ್, ಕಾಶ್ವೀ ಗೌತಮ್

ವೆಲಾಸಿಟಿ
ಮಿಥಾಲಿ ರಾಜ್ (ಸಿ), ವೇದಾ ಕೃಷ್ಣಮೂರ್ತಿ (ವಿಸಿ), ಶಫಾಲಿ ವರ್ಮಾ, ಸುಷ್ಮಾ ವರ್ಮಾ (ಡಬ್ಲ್ಯೂಕೆ), ಏಕ್ತಾ ಬಿಶ್ತ್, ಮಾನ್ಸಿ ಜೋಶಿ, ಶಿಖಾ ಪಾಂಡೆ, ದೇವಿಕಾ ವೈದ್ಯ, ಸುಶ್ರೀ ದಿವ್ಯದರ್ಶಿನಿ, ಮನಾಲಿ ದಕ್ಷಿಣಿ, ಲೀ ಕಾಸ್ಪೆರೆಕ್, ಡೇನಿಯಲ್ ವ್ಯಾಟ್, ಸುನ್ ಲೂಸ್, ಜಹನಾರಾ ಆಲಂ, ಎಂ. ಅನಘಾ.

ಸಂಪೂರ್ಣ ವೇಳಾಪಟ್ಟಿ
ಪಂದ್ಯ 1, 04/11/20, 7:30 PM, ಸೂಪರ್‌ನೋವಾಸ್ vs ವೆಲಾಸಿಟಿ
ಪಂದ್ಯ 2, 05/11/20, 3:30 PM, ವೆಲಾಸಿಟಿ vs ಟ್ರೈಬ್ಲೇಸರ್ಸ್
ಪಂದ್ಯ 3, 07/11/20, 7:30 PM, ಟ್ರೈಬ್ಲೇಸರ್ಸ್, ಸೂಪರ್ ನೋವಾಸ್
ಪಂದ್ಯ 4, 09/11/20, 7:30 PM, ಫೈನಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications