Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ಐಪಿಎಲ್ ಯಾವಾಗ ಎಂಬುದರ ಕುರಿತು ಸುಳಿವು ನೀಡಿದ ಗಂಗೂಲಿ

Womens IPL likely to stars from 2023 hints Sourav Ganguly

ಜಗತ್ತಿನ ಅತಿ ದೊಡ್ಡ ಮತ್ತು ಅತಿ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಯಾವುದು ಎಂಬ ಪ್ರಶ್ನೆ ಎದುರಾದಾಗ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯ ಬಾಯಲ್ಲಿಯೂ ಕೂಡ ಬರುವ ಪ್ರಥಮ ಉತ್ತರವೇ ಇಂಡಿಯನ್ ಪ್ರೀಮಿಯರ್ ಲೀಗ್ ಎಂಬುದು. ಹೌದು, ವಿಶ್ವದ ಯಾವುದೇ ಫ್ರಾಂಚೈಸಿ ಕ್ರಿಕೆಟ್ ಲೀಗ್ ಟೂರ್ನಿಯೂ ಕೂಡ ಕ್ರೇಜ್ ವಿಷಯದಲ್ಲಾಗಲೀ ಅಥವಾ ಆದಾಯದ ವಿಷಯದಲ್ಲಾಗಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಮೀರಿಸುವುದು ಅಸಾಧ್ಯದ ಮಾತು. ವಿಶ್ವದ ಹಲವಾರು ಕ್ರಿಕೆಟಿಗರಿಗೆ ಕೋಟಿ ಕೋಟಿ ಕೊಟ್ಟು ಖರೀದಿಸುವ ಫ್ರಾಂಚೈಸಿಗಳು ಯುವ ಕ್ರಿಕೆಟಿಗರನ್ನು ಕೂಡ ಖರೀದಿಸುವುದರ ಮೂಲಕ ಅವರ ಕ್ರಿಕೆಟ್ ಭವಿಷ್ಯ ಉಜ್ವಲಿಸುವಂತೆ ಮಾಡಿದ್ದಾರೆ. ಹೀಗೆ ಫ್ರಾಂಚೈಸಿಗಳಿಗೆ ಮತ್ತು ಆಯೋಜಕರಿಗೆ ಆದಾಯ ಹಾಗೂ ಪ್ರತಿಭಾವಂತರ ಕ್ರಿಕೆಟಿಗರಿಗೆ ಅವಕಾಶಗಳನ್ನು ತಂದುಕೊಟ್ಟಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸದ್ಯ ವಿಶ್ವದಾದ್ಯಂತ ಫುಟ್‌ಬಾಲ್‌ ಟೂರ್ನಿಯ ರೇಂಜಿಗೆ ಸದ್ದನ್ನು ಮಾಡುತ್ತಿದೆ.

ಹೌದು, ಭಾರತದ ಫ್ರಾಂಚೈಸಿ ಕ್ರಿಕೆಟ್ ಲೀಗ್ ಆದ ಇಂಡಿಯನ್ ಪ್ರಿಮಿಯರ್ ಲೀಗ್ ಸದ್ಯ ವಿಶ್ವ ಕ್ರಿಕೆಟ್‍ನಲ್ಲಿ ಫುಟ್‌ಬಾಲ್‌ನಷ್ಟು ಜನಪ್ರಿಯತೆಯನ್ನು ಗಳಿಸುವಷ್ಟು ಬೆಳವಣಿಗೆಯನ್ನು ಕಾಣುತ್ತಿದೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಎಂದರೆ ವಿಶ್ವದಾದ್ಯಂತ ಇರುವ ಹಲವಾರು ಕ್ರಿಕೆಟಿಗರು ಟೂರ್ನಿಯಲ್ಲಿ ಆಡುವ ಅವಕಾಶ ಲಭಿಸಿದರೆ ಸಾಕು ಉತ್ತಮ ಪ್ರದರ್ಶನವನ್ನು ನೀಡಿ ವಿಶ್ವದ ಕ್ರಿಕೆಟ್ ತುಂಬಾ ಜನಪ್ರಿಯತೆಯನ್ನು ಗಳಿಸಬಹುದು ಎಂಬ ಚಿಂತನೆಯಲ್ಲಿರುತ್ತಾರೆ. ಹೀಗಾಗಿಯೇ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ವಿಶ್ವದಾದ್ಯಂತ ಇರುವ ಒಟ್ಟು 1214 ಕ್ರಿಕೆಟಿಗರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ.

ಹೀಗೆ ಭಾರೀ ಜನಪ್ರಿಯತೆಯನ್ನು ಗಳಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅಂತೆಯೇ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ನಡೆಸಲಿದ್ದೇವೆ ಎಂದು ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿ ಮಾಹಿತಿ ನೀಡಿದ್ದಾರೆ. ಹೌದು, ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ಬೇಕಾದ ಸಿದ್ಧತೆಯ ಹಂತಗಳ ಅಂತಿಮ ಘಟ್ಟದಲ್ಲಿದ್ದು 2023ರಲ್ಲಿ ಚೊಚ್ಚಲ ಮಹಿಳಾ ಇಂಡಿಯನ್ ಪ್ರಿಮಿಯರ್ ಲೀಗ್ ಪ್ರಾರಂಭವಾಗುವ ಸಾಧ್ಯತೆಗಳಿವೆ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ. ಹಾಗೂ ಹೀಗೆ ಆರಂಭವಾಗಲಿರುವ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 7 ತಂಡಗಳು ಭಾಗವಹಿಸಲಿವೆ ಎಂದು ಕೂಡ ಸೌರವ್ ಗಂಗೂಲಿ ತಿಳಿಸಿದ್ದಾರೆ.

ಈ ವಿಷಯದ ಕುರಿತಾಗಿ ಇನ್ನೂ ಮುಂದುವರಿದು ಮಾತನಾಡಿರುವ ಸೌರವ್ ಗಂಗೂಲಿ ಮುಂದಿನ ದಿನಗಳಲ್ಲಿ ಹೆಚ್ಚು ತಂಡಗಳನ್ನು ಕಟ್ಟುವಷ್ಟು ಮಹಿಳಾ ಆಟಗಾರ್ತಿಯರು ಲಭಿಸಿದರೆ ದೊಡ್ಡ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಆಯೋಜಿಸಲಿದ್ದೇವೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇ ಆಫ್ ಸಮಯದಲ್ಲಿ ಅಂದರೆ ಮೇ ತಿಂಗಳಿನಲ್ಲಿ ದ ವುಮೆನ್ಸ್ ಟಿ ಟ್ವೆಂಟಿ ಚಾಲೆಂಜ್ ಮತ್ತೆ ಬರಲಿದೆ ಎಂದೂ ಸಹಾ ಸೌರವ್ ಗಂಗೂಲಿ ಹೇಳಿದ್ದಾರೆ.

Story first published: Saturday, February 5, 2022, 13:46 [IST]
Other articles published on Feb 5, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+