Women's IPL 2023 : ಮಹಿಳಾ ಐಪಿಎಲ್ ಪ್ರಸಾರದ ಹಕ್ಕು ವಯಕಾಮ್ 18 ಪಾಲು: ಉತ್ತಮ ಮೊತ್ತಕ್ಕೆ ಮಾರಾಟ

ಮಹಿಳಾ ಐಪಿಎಲ್ ಟೂರ್ನಿಯನ್ನು ಈ ಬಾರಿ ಆರಂಭಿಸಲು ಬಿಸಿಸಿಐ ಎಲ್ಲಾ ಸಿದ್ಧತೆಗಳನ್ನು ಕೂಡ ಚುರುಕುಗೊಳಿಸಿದೆ. ಇದರ ಭಾಗವಾಗಿ ಐಪಿಎಲ್ ಪ್ರಸಾರದ ಹಕ್ಕು ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಮಾಹಿತಿ ನೀಡಿದೆ. ಐಪಿಎಲ್ ಪ್ರಸಾರದ ಹಕ್ಕನ್ನು ರಿಲಾಯನ್ಸ್ ಒಡೆತನದ ವಯಕಾಮ್ 18 ಗೆದ್ದುಕೊಂಡಿರುವುದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವಿಟ್ಟರ್‌ನಲ್ಲಿ ಘೋಷಣೆ ಮಾಡಿದ್ದಾರೆ.
ಮಹಿಳಾ ಐಪಿಎಲ್ ಟೂರ್ನಿಯ ಮುಂದಿನ ಐದು ಆವೃತ್ತಿಗಳ ಪ್ರಸಾರದ ಹಕ್ಕು 951 ಕೋಟಿ ಮೊತ್ತಕ್ಕೆ ವಯಕಾಮ್ 18 ಖರೀದಿಸಿದೆ. ಇದರರ್ಥ ಮುಂದಿನ ಐದು ವರ್ಷಗಳ ಕಾಲ ಮಹಿಳಾ ಐಪಿಎಲ್ ಟೂರ್ನಿಯ ಪ್ರತಿ ಪಂದ್ಯಕ್ಕೆ 7.09 ಕೋಟಿ ಮೊತ್ತವನ್ನು ವಯಕಾಮ್ 18 ಬಿಸಿಸಿಐಗೆ ನೀಡಬೇಕಾಗುತ್ತದೆ. ಈ ಮೌಲ್ಯ ಮಹಿಳಾ ಕ್ರಿಕೆಟ್‌ಗೆ ಇದು ಬಹುದೊಡ್ಡ ಶಕ್ತಿ ನೀಡಲಿದೆ ಎಂದು ವಿಶ್ಲೇಷಣೆಗಳು ಆರಂಭವಾಗಿದೆ.
ಮಹಿಳಾ ಐಪಿಎಲ್ ಪ್ರಸಾರದ ಹಕ್ಕು ಮಾರಾಟದ ಬಳಿಕ ಟ್ವೀಟ್‌ನಲ್ಲಿ ಜಯ್ ಶಾ ಇದು ಐತಿಹಾಸಿಕ ಸಂಗತಿ ಎಂದು ಬಣ್ಣಿಸಿದ್ದಾರೆ. ಹೊಸ ಯುಗದ ಆರಂಭ ಎಂದು ಕರೆದಿರುವ ಜಯ್ ಶಾ ಭಾರತದಲ್ಲಿ ಮಹಿಳಾ ಕ್ರಿಕೆಟ್‌ನ ಸಬಲೀಕರಣಕ್ಕೆ ದೊಡ್ಡ ಮತ್ತು ಅತ್ಯಂತ ಮಹತ್ವದ ಹೆಜ್ಜೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ವಯಸ್ಸಿನ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಮಹಿಳಾ ಐಪಿಎಲ್ ವೇದಿಕೆ ನೀಡಲಿದೆ ಎಂಬ ಭರವಸೆ ನೀಡಿದ್ದಾರೆ.
ಇನ್ನು ಈಗಾಗಲೇ ನಡೆಯುತ್ತಿದ್ದ ವಿಮೆನ್ಸ್ ಟಿ20 ಚಾಲೆಂಜ್ ಪಂದ್ಯದ ಪ್ರಸಾರಕ್ಕಾಗಿ ಪ್ರಸಾರದ ಹಕ್ಕು ಹೊಂದಿದ್ದ ಸ್ಟಾರ್ ಸ್ಪೋರ್ಟ್ಸ್ ಪ್ರತಿ ಪಂದ್ಯಕ್ಕೆ 2.5 ಕೋಟಿ ಮೊತ್ತವನ್ನು ಮಾತ್ರವೇ ನೀಡುತ್ತಿತ್ತು. ಇದು ಮಾರುಕಟ್ಟೆ ಮೌಲ್ಯಕ್ಕಿಂತ ಬಹಳ ಕಡಿಮೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಹೀಗಾಗಿ ಮಹಿಳಾ ಐಪಿಎಲ್ ಪ್ರಸಾರದ ಮೌಲ್ಯ ಇದರ ದ್ವಿಗುಣಗೊಳ್ಳವ ನಿರೀಕ್ಷೆಯಿತ್ತು. ಆರಂಬಿಕ ಆವೃತ್ತಿಯಲ್ಲಿ 22 ಪಂದ್ಯಗಳೊಂದಿಗೆ ಆರಂಬವಾಗುವ ಈ ಟೂರ್ನಿ ಪ್ರತಿ ಪಂದ್ಯಕ್ಕೆ 5 ಕೋಟಿಯಂತೆ ಒಂದು ಆವೃತ್ತಿಗೆ ಕನಿಷ್ಠ 110 ಕೋಟಿ ಮೊತ್ತವನ್ನು ಗಳಿಸುವ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆಗೂ ಮೀರಿ 7.09 ಕೋಟಿ ಮೊತ್ತಕ್ಕೆ ವಯಕಾಮ್ ಪಾಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications