For Quick Alerts
ALLOW NOTIFICATIONS  
For Daily Alerts
 

'ವಿಕೆಟ್ ಉರುಳಿದಾಗ ಸಂಭ್ರಮಿಸುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ'

Women’s T20 Challenge: Missed the feeling of celebrating a wicket, says Poonam Yadav

ಮುಂಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ವಿಮೆನ್ಸ್ ಟಿ20 ಚಾಲೆಂಜ್ ಟೂರ್ನಿಗಾಗಿ ತೆರಳಲಿರುವ ಭಾರತದ ಲೆಗ್‌ ಸ್ಪಿನ್ನರ್ ಪೂನಂ ಯಾದವ್ ಸದ್ಯ ಮುಂಬೈನಲ್ಲಿ ಕ್ವಾರಂಟೈನ್ ಪಾಲಿಸುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ ಅನ್ನು ಬರೀ ಟಿವಿಲಿ ನೋಡಿ ಒಬ್ಬರೇ ಸಮಯ ಕಳೆಯುತ್ತಿದ್ದಾರೆ.

ಕ್ವಾರಂಟೈನ್ ಪಾಲಿಸುವಾಗಿನ ಬೇಸರದ ಕ್ಷಣಗಳನ್ನು ಪೂನಂ ಯಾದವ್ ಹೇಳಿಕೊಂಡಿದ್ದಾರೆ. ಜೊತೆಗೆ ಐಪಿಎಲ್‌ನಲ್ಲಿ ತನಗೆ ತನ್ನ ಫೇವರಿಟ್ ಬೌಲರ್ ಅಫ್ಘಾನಿಸ್ತಾನ್‌ನ ರಶೀದ್ ಖಾನ್ ಬೌಲಿಂಗ್ ನೋಡಲು ಖುಷಿ ಎಂದು ಯಾದವ್ ಹೇಳಿದ್ದಾರೆ.

'ಒಬ್ಬಳೇ ಇದ್ದು ಕ್ವಾರಂಟೈನ್ ಪಾಲಿಸೋದು ತುಂಬಾ ಸವಾಲಿನ ಸಂಗತಿ. ನಾನು ಮ್ಯೂಸಿಕ್ ಕೇಳುತ್ತೇನೆ, ವ್ಯಾಯಾಮ ಮಾಡುತ್ತೇನೆ, ಲಿಫ್ಟಿಂಗ್ ಮಾಡುತ್ತೇನೆ. ಸನ್ ರೈಸರ್ಸ್ ಹೈದರಾಬಾದ್‌ನ ರಶೀದ್ ಖಾನ್ ಬೌಲಿಂಗ್ ಮಾಡೋದು ನೋಡುವಾಗ ಖುಷಿಯಾಗುತ್ತದೆ,' ಎಂದಿದ್ದಾರೆ.

'ಖಾನ್ ಬೌಲಿಂಗ್ ನೋಡುವಾಗ ನಾನೂ ಬೇಗನೆ ಯುಎಇಗೆ ಹೋಗಬೇಕು, ಬೌಲಿಂಗ್ ಮಾಡಬೇಕು ಅನ್ನಿಸುತ್ತದೆ. ಆದರೆ (ಕೊರೊನಾ ಕಾರಣ) ವಿಕೆಟ್ ಸಿಕ್ಕಾಗ ಸಂಭ್ರಮಿಸುವುದನ್ನು ಬದುಕಿನಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ನನಗನ್ನಿಸುತ್ತದೆ,' ಎಂದು ಯಾದವ್ ಹೇಳಿಕೊಂಡಿದ್ದಾರೆ.

Story first published: Saturday, October 24, 2020, 9:48 [IST]
Other articles published on Oct 24, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+