Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ಟಂಪ್ಸ್‌ ಮೇಲೆ ದಾಳಿ ನಮ್ಮ ತಂತ್ರವಾಗಿತ್ತು: ಸ್ಮೃತಿ ಮಂಧಾನ

Womens T20 Challenge: Our strategy of attacking the stumps worked, says Smriti Mandhana

ಶಾರ್ಜಾ: ವಿಕೆಟ್‌ಗಳನ್ನು ಉರುಳಿಸೋದು ನಮ್ಮ ತಂತ್ರವಾಗಿತ್ತು. ಅದನ್ನು ನಮ್ಮ ಬೌಲರ್‌ಗಳು ಚೆನ್ನಾಗಿ ಕಾರ್ಯರೂಪಕ್ಕೆ ತಂದರು ಎಂದು ಟ್ರಯಲ್‌ಬ್ಲೇಸರ್ಸ್ ನಾಯಕಿ ಸ್ಮೃತಿ ಮಂಧಾನ ಹೇಳಿದ್ದಾರೆ. ವಿಮೆನ್ಸ್ ಟಿ20 ಚಾಲೆಂಜ್ ದ್ವಿತೀಯ ಪಂದ್ಯದಲ್ಲಿ ವೆಲಾಸಿಟಿ ವಿರುದ್ಧ ಜಯ ಗಳಿಸಿದ ಬಳಿಕ ಮಂಧಾನ ಈ ಹೇಳಿಕೆ ನೀಡಿದ್ದಾರೆ.

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ (ನವೆಂಬರ್ 5) ನಡೆದಿದ್ದ ವೆಲಾಸಿಟಿ vs ಟ್ರಯಲ್‌ಬ್ಲೇಸರ್ಸ್ ಪಂದ್ಯದಲ್ಲಿ, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ವೆಲಾಸಿಟಿ ದುರ್ಬಲ ಬ್ಯಾಟಿಂಗ್ ಪ್ರದರ್ಶಿಸಿತ್ತು. ಶಫಾಲಿ ವರ್ಮಾ 13, ಶಿಖಾ ಪಾಂಡೆ 10, ಕ್ಯಾಸ್ಪೆರ್ಕ್ 11 ರನ್ ಬಾರಿಸಿದ್ದೇ ಹೆಚ್ಚು. ಇನ್ನು ಯಾರೂ 13ಕ್ಕೂ ಹೆಚ್ಚು ರನ್ ಗಳಿಸಲಿಲ್ಲ.

ವೆಲಾಸಿಟಿ ಇನ್ನಿಂಗ್ಸ್‌ನಲ್ಲಿ ಟ್ರಯಲ್‌ಬ್ಲೇಸರ್ಸ್‌ನ ಜೂಲನ್ ಗೋಸ್ವಾಮಿ 13 ರನ್‌ಗೆ 2, ಸೋಫಿ ಎಕ್ಲೆಸ್ಟೋನ್ 9 ರನ್‌ಗೆ 4, ರಾಜೇಶ್ವರಿ ಗಾಯಕ್ವಾಡ್ 13ಕ್ಕೆ 2, ದೀಪ್ತಿ ಶರ್ಮಾ 8ಕ್ಕೆ 1 ವಿಕೆಟ್ ಪಡೆದರು. ಹೀಗಾಗಿ ವೆಲಾಸಿಟಿ 15.1ನೇ ಓವರ್‌ಗೆ 10 ವಿಕೆಟ್ ಕಳೆದು 47 ರನ್ ಗಳಿಸಿತ್ತು. ಟ್ರಯಲ್‌ಬ್ಲೇಸರ್ಸ್ 7.5 ಓವರ್‌ಗೆ 49 ರನ್ ಬಾರಿಸಿ ಗೆಲುವನ್ನಾಚರಿಸಿತ್ತು.

'ಬ್ಯಾಕ್ ಆಫ್‌ ದ ಲೆಂತ್ ಮತ್ತು ಸ್ಟಂಪ್ ಲೈನ್‌ಗೆ ಗಟ್ಟಿಯಾಗಿರಿ ಎಂದು ನಾನು ಎಲ್ಲಾ ಬೌಲರ್‌ಗಳಿಗೆ ಹೇಳಿದ್ದೆ. ನಮ್ಮಲ್ಲಿ ಒಳ್ಳೆಯ ಸ್ಪಿನ್ ದಾಳಿಯಿತ್ತು. ನಾನು ಐಪಿಎಲ್ ಅನ್ನು ಅನುಸರಿಸುತ್ತಿದ್ದೇನೆ. ಹೀಗಾಗಿ ನಮ್ಮಲ್ಲಿ ಒಳ್ಳೆಯ ಬೌಲಿಂಗ್ ದಾಳಿಯಿದೆ ಎಂದು ನಾನು ಭಾವಿಸುತ್ತೇನೆ,' ಎಂದು ಪಂದ್ಯದ ಬಳಿಕ ಮಾತನಾಡಿದ ಮಂಧಾನ ಹೇಳಿಕೊಂಡಿದ್ದಾರೆ.

Story first published: Thursday, November 5, 2020, 22:09 [IST]
Other articles published on Nov 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+