ವಿಮೆನ್ಸ್ ಟಿ20: ಯುಎಇಗೆ ಹೊರಡಲು ಭಾರತದ ಮಹಿಳಾ ತಂಡ ಸಿದ್ಧತೆ

ನವದೆಹಲಿ: ವಿಮೆನ್ಸ್ ಟಿ20 ಚಾಲೆಂಜ್‌ಗಾಗಿ ಭಾರತದ ಮಹಿಳಾ ತಂಡ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಪ್ರಯಾಣ ಹೊರಡಲಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 13ರಂದು ಮುಂಬೈನಲ್ಲಿ ಒಟ್ಟು ಸೇರುವಂತೆ ತಂಡಕ್ಕೆ ಸೂಚಿಸಲಾಗಿದೆ. ಆದರೆ ಕ್ವಾರಂಟೈನ್ ನಿಯಮದ ಬಗ್ಗೆ ತಂಡದಲ್ಲಿ ಪ್ರಶ್ನೆ ಎದ್ದಿದೆ.
ಯುಎಇಯಲ್ಲಿನ ಟೂರ್ನಿಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಪ್ರತೀ ಪ್ಲೇಯರ್ 13 ದಿನಗಳ ಕ್ವಾರಂಟೈನ್ ಪಾಲಿಸಬೇಕು. ಈ ನಿಯಮ ಪಾಲಿಸುವುದಾದರೆ ಅಭ್ಯಾಸ ನಡೆಸುವುದು ಯಾವಾಗ? ಎಂಬ ಪ್ರಶ್ನೆಯೆದ್ದಿದೆ. ವಿಮೆನ್ಸ್ ಟಿ20 ಚಾಲೆಂಜ್‌ನಲ್ಲಿ ಒಟ್ಟು 3 ತಂಡಗಳು ಸ್ಪರ್ಧಿಸುತ್ತಿವೆ.
ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು ಟೂರ್ನಿಗೆ ಸಂಬಂಧಿಸಿ ತಂಡವನ್ನೇನೂ ಪ್ರಕಟಿಸಿಲ್ಲ. ಬರೀ ಆಟಗಾರ್ತಿಯರನ್ನ ಗುರುತಿಸಿದೆ. ಈ ಪಟ್ಟಿಯಲ್ಲಿ ಅಂತಾರಾಷ್ಟ್ರೀಯ ಮತ್ತು ದೇಸಿ ಕ್ರಿಕೆಟ್‌ಗೆ ಸಂಬಂಧಿಸಿ ಕ್ಯಾಪ್ಡ್ ಮತ್ತು ಅನ್ ಕ್ಯಾಪ್ಡ್ ಆಟಗಾರ್ತಿಯರಿದ್ದಾರೆ.
ಮುಂಬೈನಲ್ಲಿ ಒಟ್ಟು ಸೇರುವ ಭಾರತದ ಆಟಗಾರ್ತಿಯರು ಅಲ್ಲಿ ಒಂದು ವಾರಕ್ಕೂ ಹೆಚ್ಚು ದಿನ ಕ್ವಾರಂಟೈನ್ ಪಾಲಿಸಲಿದ್ದಾರೆ. ಹಲವಾರು ಬಾರಿ ಕೊರೊನಾ ಪರೀಕ್ಷೆಗೆ ಒಳಗಾದ ಬಳಿಕ ಅಕ್ಟೋಬರ್ 22ರಂದು ಯುಎಇಗೆ ಹೊರಡುವ ನಿರೀಕ್ಷೆಯಿದೆ. ವಿಮೆನ್ಸ್ ಟಿ20 ಚಾಲೆಂಜ್ ಟೂರ್ನಿ ನವೆಂಬರ್ 4ರಿಂದ ಆರಂಭಗೊಳ್ಳಲಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications