Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಇಂಗ್ಲೆಂಡ್ ವನಿತೆಯರ 3ನೇ ಟಿ20 ಪಂದ್ಯದ ದಿನಾಂಕ ಬದಲು

Womens T20 third match between India and England rescheduled to July 14

ಲಂಡನ್: ಕ್ಲೌಡ್‌ಫಮ್ ಕೌಂಟಿ ಗ್ರೌಂಡ್‌ನಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ವನಿತೆಯರ ನಡುವಿನ ತೃತೀಯ ಟಿ20ಐ ಪಂದ್ಯದ ದಿನಾಂಕ ಬದಲಾಗಿದೆ. ಚೆಲ್ಮ್‌ಸ್ಪೋರ್ಡ್‌ನಲ್ಲಿ ನಡೆಯಲಿದ್ದ ಈ ಪಂದ್ಯದ ವೇಳಾಪಟ್ಟಿ ಒಂದು ದಿನ ಮುಂಚಿತವಾಗಿ ಅಂದರೆ ಜುಲೈ 14ಕ್ಕೆ ನಡೆಯಲಿದೆ.

ಇಂಗ್ಲೆಂಡ್‌ಗೆ ಹೋಗಲಿರುವ ಭಾರತೀಯ ವನಿತಾ ಮತ್ತು ಪುರುಷರ ತಂಡ ಸದ್ಯ ಮುಂಬೈಯಲ್ಲಿ ಕ್ವಾರಂಟೈನ್‌ ಪಾಲಿಸುತ್ತಿದೆ. ಇಂಗ್ಲೆಂಡ್‌ಗೆ ಜೂನ್ 2ರಂದು ಪ್ರಯಾಣ ಬೆಳೆಸಲಿರುವ ಭಾರತದ ಮಹಿಳಾ ತಂಡ ಅಲ್ಲಿ ಜೂನ್ 16ರಿಂದ ಒಂದು ಟೆಸ್ಟ್ ಪಂದ್ಯ ಆಡಲಿದೆ. ಇದು ಏಳು ವರ್ಷಗಳ ಬಳಿಕ ಭಾರತೀಯ ಮಹಿಳಾ ತಂಡ ಆಡುತ್ತಿರುವ ಚೊಚ್ಚಲ ಟೆಸ್ಟ್ ಪಂದ್ಯ.

'ಕ್ಲೌಡ್‌ಫಮ್‌ನ ಕೌಂಟಿ ಗ್ರೌಂಡ್‌ನಲ್ಲಿ ನಡೆಯಲಿರುವ ಭಾರತದ ಮಹಿಳೆಯರು ಮತ್ತು ಇಂಗ್ಲೆಂಡ್ ಮಹಿಳೆಯರ ನಡುವಿನ ತೃತೀಯ ಟಿ20ಐ ಪಂದ್ಯ ಪ್ರಸಾರಕರ ಉದ್ದೇಶದಿಂದ ಜುಲೈ 14ರ ಬುಧವಾರ ನಡೆಯಲಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.

ಇಂಗ್ಲೆಂಡ್‌ಗೆ ಪ್ರವಾಸ ಹೋಗುವ ಭಾರತೀಯ ಮಹಿಳಾ ತಂಡ ಒಂದು ಟೆಸ್ಟ್, 3 ಟಿ20ಐ ಮತ್ತು 3 ಏಕದಿನ ಪಂದ್ಯಗಳನ್ನಾಡಲಿದೆ. ಮೂರು ಟಿ20 ಪಂದ್ಯಗಳಲ್ಲಿ ಮೊದಲನೆಯದು ಜುಲೈ 9ಕ್ಕೆ ನಡೆದರೆ ದ್ವಿತೀಯ ಪಂದ್ಯ ಜುಲೈ 11ಕ್ಕೆ ನಡೆಯಲಿದೆ.

Story first published: Wednesday, May 26, 2021, 0:23 [IST]
Other articles published on May 26, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+