For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20 ವಿಶ್ವಕಪ್ 2023 ವೇಳಾಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ: ಫೆಬ್ರವರಿ 12 ರಂದು ಭಾರತ, ಪಾಕ್ ಮುಖಾಮುಖಿ

Womens T20 World Cup 2023: ICC announced timetable and venue, India will face Pakistan on February 12

ಮಹಿಳಾ ಟಿ20 ವಿಶ್ವಕಪ್ 2023ರ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆಗೊಳಿಸಿದ್ದು ದಕ್ಷಿಣ ಆಫ್ರಿಕಾದಲ್ಲಿ ಫೆಬ್ರವರಿ 10ರಿಂದ ಈ ಟೂರ್ನಿ ಆರಂಭವಾಗಲಿದೆ. ಕಳೆದ ವಿಶ್ವಕಪ್‌ನ ಫೈನಲಿಸ್ಟ್ ತಂಡವಾಗಿರುವ ಭಾರತ ತಂಡ ಗ್ರೂಪ್ 2ರಲ್ಲಿದ್ದು ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಐರ್ಲೆಂಡ್ ತಂಡಗಳು ಈ ಗುಂಪಿನಲ್ಲಿರುವ ಇತರ ತಂಡಗಳಾಗಿದೆ. ಇನ್ನು ಗ್ರೂಪ್ 1ರಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳಿದೆ.

ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಟೂರ್ನಿಯ ಉದ್ಘಾಟನಾ ಪಂದ್ಯ ನಡೆಯಲಿದ್ದು ಆತಿಥೇಯ ದಕ್ಷಿಣ ಆಫ್ರಿಕಾಗೆ ಶ್ರೀಲಂಕಾ ತಂಡ ಈ ಪಂದ್ಯದಲ್ಲಿ ಎದುರಾಳಿಯಾಗಿರಲಿದೆ. ಇನ್ನು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಫೆಬ್ರವರಿ 11ರಂದು ತನ್ನ ಅಭಿಯಾನ ಆರಂಬಿಸಲಿದ್ದಯ ನ್ಯೂಜಿಲೆಂಡ್ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ ಸೆಣೆಸಾಡಲಿದೆ.

ಇನ್ನು ಫೆಬ್ರವರಿ 12ರಂದು ಭಾರತ ಮಹಿಳಾ ತಂಡ ತನ್ನ ಅಭಿಯಾನವನ್ನು ಆರಂಭಿಸಲಿದೆ. ಭಾರತಕ್ಕೆ ಈ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ಸವಾಲೊಡ್ಡಲಿದ್ದು ಕೇಪ್‌ಟೌಟ್ ಮೈದಾನ ಈ ಪಂದ್ಯಕ್ಕೆ ಆತಿಥ್ಯವಹಿಸಲಿದೆ. ಗಮನಾರ್ಹ ಸಂಗತಿಯೆಂದರೆ ಪ್ರಸ್ತುತ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿಯೂ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಪಾಕಿಸ್ತಾನ ತಂಡದ ವಿರುದ್ಧ ಸೆಣೆಸಾಟವನ್ನು ನಡೆಸಲಿದೆ.

2021ರಲ್ಲಿ ನಡೆದ ಟಿ20 ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿತ್ತು. ಈ ಟೂರ್ನಿಯಲ್ಲಿ ಭಾರತ ಅಜೇಯವಾಗಿಯೇ ಫೈನಲ್‌ಗೆ ಪ್ರವೇಶ ಪಡೆದಿದ್ದು ಟೂರ್ನಿಯಲ್ಲಿ ಏಕೈಕ ಸೋಲನ್ನು ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಅನುಭವಿಸುವ ಮೂಲಕ ಟ್ರೋಫಿಯ ಕನಸನ್ನು ಭಗ್ನಗೊಳಿಸಿತ್ತು. ಹೀಗಾಗಿ ಈ ಬಾರಿಯ ಟೂರ್ನಿಯಲ್ಲಿ ಟ್ರೋಫಿ ಗೆಲುವ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಇನ್ನು ಈ ವರ್ಷ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿಯೂ ಭಾರತದ ಮಹಿಳಾ ತಂಡ ಬೆಳ್ಳಿ ಪದಕವನ್ನು ಗೆದ್ದುಕೊಂಡಿತ್ತು. ಇಲ್ಲಿಯೂ ಫೈನಲ್‌ನಲ್ಲಿ ಆಸ್ಟ್ರೇಲಿಯಾಗೆ ಭಾರತ ವನಿತಾ ಪಡೆ ಶರಣಾಗಿತ್ತು.

ಇನ್ನು ಈ ಟಿ20 ವಿಶ್ವಕಪ್‌ನಲ್ಲಿ ಪ್ರತಿ ಗುಂಪಿನಲ್ಲಿರುವ ತಂಡಗಳು ಕೂಡ ತಮ್ಮ ಗುಂಪಿನ ಎಲ್ಲಾ ತಂಡಗಳ ವಿರುದ್ಧ ಮುಖಾಮುಖಿಯಾಗಲಿದೆ. ಲೀಗ್ ಹಂತದ ಅಂತ್ಯದಲ್ಲಿ ಎರಡು ಗುಂಪುಗಳ ತಲಾ ಎರಡು ಅಗ್ರ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದೆ. ನಂತರ ಅಲ್ಲಿ ಗೆದ್ದ ತಂಡಗಳು ಫೈನಲ್‌ಗೆ ಪ್ರವೇಶ ಪಡೆದು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.

ಮಹಿಳಾ ಟಿ20 ವಿಶ್ವಕಪ್‌ನ ವೇಳಾಪಟ್ಟಿ ಹೀಗಿದೆ

11 ಫೆಬ್ರವರಿ, ವೆಸ್ಟ್ ಇಂಡೀಸ್ vs ಇಂಗ್ಲೆಂಡ್-ಪಾರ್ಲ್
11 ಫೆಬ್ರವರಿ ಆಸ್ಟ್ರೇಲಿಯಾ vs ನ್ಯೂಜಿಲೆಂಡ್- ಪಾರ್ಲ್
12 ಫೆಬ್ರವರಿ ಭಾರತ vs ಪಾಕಿಸ್ತಾನ- ಕೇಪ್‌ಟೌನ್
12 ಫೆಬ್ರವರಿ ಬಾಂಗ್ಲಾದೇಶ vs ಶ್ರೀಲಂಕಾ- ಕೇಪ್‌ಟೌನ್
13 ಫೆಬ್ರವರಿ ಐರ್ಲೆಂಡ್ vs ಇಂಗ್ಲೆಂಡ್- ಪಾರ್ಲ್
13 ಫೆಬ್ರವರಿ ದಕ್ಷಿಣ ಆಫ್ರಿಕಾ vs ನ್ಯೂಜಿಲೆಂಡ್- ಪಾರ್ಲ್
14 ಫೆಬ್ರವರಿ ಆಸ್ಟ್ರೇಲಿಯಾ vs ಬಾಂಗ್ಲಾದೇಶ- ಗೈಬರ್ಹಾ
15 ಫೆಬ್ರವರಿ ವೆಸ್ಟ್ ಇಂಡೀಸ್ vs ಭಾರತ- ಕೇಪ್‌ಟೌನ್
15 ಫೆಬ್ರವರಿ ಪಾಕಿಸ್ತಾನ vs ಐರ್ಲೆಂಡ್- ಕೇಪ್‌ಟೌನ್
16 ಫೆಬ್ರವರಿ ಶ್ರೀಲಂಕಾ vs ಆಸ್ಟ್ರೇಲಿಯಾ- ಗ್ಕೆಬರ್ಹಾ
17 ಫೆಬ್ರವರಿ ನ್ಯೂಜಿಲೆಂಡ್ vs ಬಾಂಗ್ಲಾದೇಶ- ಕೇಪ್‌ಟೌನ್
17 ಫೆಬ್ರವರಿ ವೆಸ್ಟ್ ಇಂಡೀಸ್ vs ಐರ್ಲೆಂಡ್- ಕೇಪ್‌ಟೌನ್
18 ಫೆಬ್ರವರಿ ಇಂಗ್ಲೆಂಡ್ vs ಭಾರತ- ಗೈಬರ್ಹಾ
18 ಫೆಬ್ರವರಿ ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ- ಗ್ಕೆಬರ್ಹಾ
19 ಫೆಬ್ರವರಿ ಪಾಕಿಸ್ತಾನ vs ವೆಸ್ಟ್ ಇಂಡೀಸ್- ಪಾರ್ಲ್
19 ಫೆಬ್ರವರಿ ನ್ಯೂಜಿಲೆಂಡ್ vs ಶ್ರೀಲಂಕಾ- ಪಾರ್ಲ್
20 ಫೆಬ್ರವರಿ ಐರ್ಲೆಂಡ್ vs ಭಾರತ- ಗೈಬರ್ಹಾ
21 ಫೆಬ್ರವರಿ ಇಂಗ್ಲೆಂಡ್ vs ಪಾಕಿಸ್ತಾನ- ಕೇಪ್‌ಟೌನ್
21 ಫೆಬ್ರವರಿ ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ- ಕೇಪ್‌ಟೌನ್
23 ಫೆಬ್ರವರಿ ಸೆಮಿ-ಫೈನಲ್ 1-ಕೇಪ್‌ಟೌನ್
24 ಫೆಬ್ರವರಿ ರಿಸರ್ವ್ ಡೇ-ಕೇಪ್‌ಟೌನ್
24 ಫೆಬ್ರವರಿ ಸೆಮಿ-ಫೈನಲ್ 2-ಕೇಪ್‌ಟೌನ್
25 ಫೆಬ್ರವರಿ ರಿಸರ್ವ್ ಡೇ ಕೇಪ್‌ಟೌನ್
26 ಫೆಬ್ರವರಿ ಫೈನಲ್-ಕೇಪ್‌ಟೌನ್
27 ಫೆಬ್ರವರಿ ರಿಸರ್ವ್ ಡೇ ಕೇಪ್ ಟೌನ್

Story first published: Monday, October 3, 2022, 23:43 [IST]
Other articles published on Oct 3, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+