For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ ಇಂದು ಐರ್ಲೆಂಡ್ ಎದುರಾಳಿ: ಸೆಮಿಫೈನಲ್ ಗುರಿ ಈಡೇರಿಸಿಕೊಳ್ಳುತ್ತಾ ಹರ್ಮನ್‌ಪಡೆ?

Womens T20 World Cup 2023: India vs Ireland, match preview and live telecast details

ಟಿ20 ವಿಶ್ವಕಪ್‌ನ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಭಾರತ ಇಂದು ಸೆಣೆಸಾಟಕ್ಕೆ ಇಳಿಯಲು ಸಜ್ಜಾಗಿದೆ. ಗ್ರೂಫ್ 2 ವಿಭಾಗದಲ್ಲಿ ಅಂತಿಮ ಪಂದ್ಯವನ್ನಾಡುತ್ತಿರುವ ಭಾರತಕ್ಕೆ ಇಂದು ಎದುರಾಳಿಯಾಗಿರುವುದು ಐರ್ಲೆಂಡ್ ತಂಡ. ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿರುವ ಭಾರತ ತಂಡಕ್ಕೆ ಇಂದಿನ ಗೆಲುವು ಮಹತ್ವದ್ದಾಗಿದ್ದು ಗೆದ್ದು ಸೆಮಿಫೈನಲ್‌ಗೇರಲು ತುದಿಗಾಲಲ್ಲಿ ನಿಂತಿದೆ.

ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿದ ಕಾರಣ ಭಾರತ ತಂಡಕ್ಕೆ ಹಿನ್ನಡೆಯಾಯಿತು. ಹೀಗಾಗಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಅಂತರದಿಂದ ಗೆದ್ದು ಸೆಮಿಫೈನಲ್ ಟಿಕೆಟ್ ಖಚಿತಪಡಿಸಿಕೊಳ್ಳುವ ಒತ್ತಡ ಭಾರತ ತಂಡದ ಮೇಲಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಪರವಾಗಿ ಸ್ಮೃತಿ ಮಂಧಾನ ಭರ್ಜರಿ ಅರ್ಧ ಶತಕ ಹಾಗೂ ರಿಚಾ ಘೋಷ್ ಅವರ ಅಜೇಯ 47 ರನ್‌ಗಳ ಹೊರತಾಗಿಯೂ ಭಾರತ ತಂಡ 11 ರನ್‌ಗಳ ಅಂತರದಿಂದ ಪಂದ್ಯವನ್ನು ಕಳೆದುಕೊಂಡಿತ್ತು.

ಮತ್ತೊಂದೆಡೆ ಐರ್ಲೆಂಡ್ ತಂಡ ಕೂಡ ಈ ಹಿಂದಿನ ಪಂದ್ಯದಲ್ಲಿ ಸೋಲು ಸನುಭವಿಸಿ ಹಿನ್ನಡೆ ಕಂಡಿದೆ. ಆದರೆ ಐರ್ಲೆಂಡ್ ತಂಡ ಈಗಾಗಲೇ ಮೂರು ಸೋಲು ಅನುಭವಿಸಿರುವ ಕಾರಣ ಸೆಮಿಫೈನಲ್‌ಗೇರುವ ಸ್ಪರ್ಧೆಯಿಂದ ಈಗಾಗಲೇ ಹೊರಬಿದ್ದಾಗಿದೆ. ಆದರೆ ಈಗ ಭಾರತದ ಕನಸನ್ನು ಭಗ್ಗೊಳಿಸುವ ಅವಕಾಶ ಐರ್ಲೆಂಡ್ ಮುಂದಿದೆ.

ಪಂದ್ಯದ ಸಮಯ ಹಾಗೂ ಇತರ ಮಾಹಿತಿ
ಭಾರತ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಪಂದ್ಯ ಫೆಬ್ರವರಿ 20 ಸೋಮವಾರ ಆಯೋಜನೆಯಾಗಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಸಂಜೆ 6:30ಕ್ಕೆ ಆರಂಭವಾಗಲಿದ್ದು 6 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಟೀಮ್ ಇಂಡಿಯಾ ಬಳಗವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಿದರೆ ಐರ್ಲೆಂಡ್ ತಂಡಕ್ಕೆ ಲೋರಾ ಡೆಲಾನಿ ನಾಯಕತ್ವವಿದೆ.

ಪಂದ್ಯದ ನೇರಪ್ರಸಾರದ ಮಾಹಿತಿ: ಭಾರತ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಟಿ20 ವಿಶ್ವಕಪ್‌ನ ಪಂದ್ಯ ಭಾರತದಲ್ಲಿ ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಅಲ್ಲದೆ ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರರು ಕೂಡ ಈ ಪಂದ್ಯವನ್ನು ವೀಕ್ಷಿಸುವ ಅವಕಾಶವಿದೆ.

ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಶಿಖಾ ಪಾಂಡೆ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಠಾಕೂರ್ ಸಿಂಗ್, ದೇವಿಕಾ ವೈದ್ಯ, ಹರ್ಲೀನ್ ಡಿಯೋಲ್, ಅಂಜಲಿ ಸರ್ವಾಣಿ, ಯಾಸ್ತಿಕಾ ಭಾಟಿಯಾ

ಐರ್ಲೆಂಡ್ ಸ್ಕ್ವಾಡ್: ಲಾರಾ ಡೆಲಾನಿ (ನಾಯಕಿ), ಮೇರಿ ವಾಲ್ಡ್ರನ್ (ವಿಕೆಟ್ ಕೀಪರ್), ಆಮಿ ಹಂಟರ್, ಗೇಬಿ ಲೆವಿಸ್, ಓರ್ಲಾ ಪ್ರೆಂಡರ್‌ಗಾಸ್ಟ್, ಐಮಿಯರ್ ರಿಚರ್ಡ್‌ಸನ್, ಲೂಯಿಸ್ ಲಿಟಲ್, ಅರ್ಲೀನ್ ಕೆಲ್ಲಿ, ಲೇಹ್ ಪಾಲ್, ಕಾರಾ ಮರ್ರೆ, ಜೇನ್ ಮ್ಯಾಗೈರ್, ಜಾರ್ಜಿನಾ ಡೆಂಪ್ಸೆ, ರಾಚೆಲ್ ಡೆಲಾನಿ, ಸೋಫಿ ಮ್ಯಾಕ್ ಮಹೊನ್, ಶೌನಾ ಕವನಾಗ್

Story first published: Monday, February 20, 2023, 8:34 [IST]
Other articles published on Feb 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+