Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇದೇ ದಿನ ಮಹಿಳಾ ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ

ಮತ್ತೊಂದು ಐಸಿಸಿ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಜೂನ್‌ 12 ರಂದು ಇಂಗ್ಲೆಂಡ್‌ನಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ಮೆಗಾ ಟೂರ್ನಿಯಲ್ಲಿ ಭಾರತ ಸಹ ಭಾಗವಹಿಸಲಿದೆ. ಟೀಮ್ ಇಂಡಿಯಾ ಈಗಾಗಲೇ ಏಕದಿನ ವಿಶ್ವಕಪ್‌ ಸರಣಿಯನ್ನು ಗೆದ್ದಿದ್ದು, ಮತ್ತೊಂದು ಬಾರಿ ಟ್ರೋಫಿಗೆ ಮುತ್ತಿಡುವ ಕನಸು ಕಾಣುತ್ತಿದೆ. ಈ ಮೆಗಾ ಟೂರ್ನಿಗೆ ಟೀಮ್ ಇಂಡಿಯಾದ ಆಯ್ಕೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಇತ್ತೀಚೆಗೆ ಭಾರತ ತಂಡ, ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದ್ದು, ಐದು ಪಂದ್ಯಗಳ ಟಿ20 ಸರಣಿಯನ್ನು ಆಡಿದ್ದು, 4-1 ಅಂತರದ ಸೋಲನ್ನು ಅನುಭವಿಸಿತ್ತು. ಈ ಸರಣಿ ಟಿ20 ವಿಶ್ವಕಪ್‌ ದೃಷ್ಟಿಯಿಂದ ಮಹತ್ವ ಪಡೆದಿತ್ತು. ಆದರೆ ಈ ಸರಣಿಯಲ್ಲಿ ಭಾರತ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆದರೆ ಟಿ20 ವಿಶ್ವಕಪ್‌ನಲ್ಲಿ ಭಾರತ ವನಿತೆಯರು ಚೇತೋಹಾರಿ ಪ್ರದರ್ಶನ ನೀಡುವ ಇರಾದೆ ಹೊಂದಿದೆ. ಈ ಮೆಗಾ ಟೂರ್ನಿಗೆ ಬಿಸಿಸಿಐ ಭಾರತ ತಂಡವನ್ನು ಮೇ 2 ರಂದು ಘೋಷಿಸಲಿದೆ.

Women

ಈ ಬಗ್ಗೆ ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದೆ. ಈ ಪೋಸ್ಟ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಮೇ 2 ರಂದು ಘೋಷಿಸಲಾಗುವುದು ಎಂದು ತಿಳಿಸಿದೆ. ಇದೇ ವೇಳೆ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ತಂಡವನ್ನು ಸಹ ಘೋಷಿಸಲಾಗುವುದು. ಇಂಗ್ಲೆಂಡ್‌ ವಿರುದ್ಧದ ಸರಣಿ ಭಾರತಕ್ಕೆ ವಿಶ್ವಕಪ್‌ ಪೂರ್ವ ಅಭ್ಯಾಸವಾಗಿರಲಿದೆ.

ಕಳೆದ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.
ಕಳೆದ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಗುಂಪು ಹಂತದಿಂದಲೇ ಹೊರಬಿದ್ದಿತ್ತು. ಈ ಬಾರಿಯ ಟೂರ್ನಿಯಲ್ಲಿ ಮಹಿಳಾ ತಂಡ ಸ್ಥಿರ ಪ್ರದರ್ಶನ ನೀಡುವ ಇರಾದೆಯನ್ನು ಹೊಂದಿದೆ. ಈಗ ತಂಡದಲ್ಲಿ ಪಡೆಯುವ ಹೆಚ್ಚಿನ ಆಟಗಾರ್ತಿಯರಿಗೆ ಟಿ20 ಸ್ವರೂಪದಲ್ಲಿ ಆಡಿದ ಅನುಭವ ಸಾಕಷ್ಟಿದೆ.

ಯಾವ ಗುಂಪಿನಲ್ಲಿ ಸ್ಥಾನ ಪಡೆದಿದೆ ಭಾರತ?

ಭಾರತ ತಂಡವು ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ನೆದರ್‌ಲ್ಯಾಂಡ್ಸ್ ಮಹಿಳಾ ತಂಡಗಳ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಯಾವಾಗ?

ಜೂನ್ 14 ರಂದು ಬರ್ಮಿಂಗ್ಹ್ಯಾಮ್‌ನಲ್ಲಿ ಭಾರತ, ಪಾಕಿಸ್ತಾನ ಹೈವೋಲ್ಟೇಜ್ ಫೈಟ್ ನಡೆಯಲಿದೆ.

ಭಾರತ ತಂಡದ ವೇಳಾಪಟ್ಟಿ

ಜೂನ್ 14 ರಂದು ಪಾಕಿಸ್ತಾನ ವಿರುದ್ಧ
ಜೂನ್ 17 ರಂದು ನೆದರ್‌ಲ್ಯಾಂಡ್ಸ್ ವಿರುದ್ಧ
ಜೂನ್ 21 ರಂದು ದಕ್ಷಿಣ ಆಫ್ರಿಕಾ ವಿರುದ್ಧ
ಜೂನ್ 25 ರಂದು ಬಾಂಗ್ಲಾದೇಶ ವಿರುದ್ಧ
ಜೂನ್ 28 ರಂದು ಆಸ್ಟ್ರೇಲಿಯಾ ವಿರುದ್ಧ

Story first published: Thursday, April 30, 2026, 12:15 [IST]
Other articles published on Apr 30, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+