Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women's T20 World Cup Final: ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ

Womens T20 World Cup Final: Australia Has Won The Toss And Opted To Bat First Against South Africa

ಮಹಿಳಾ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆಸ್ಟ್ರೇಲಿಯಾ ತಂಡ 7ನೇ ಬಾರಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಆಡುತ್ತಿದ್ದು, ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಫೈನಲ್ ತಲುಪಿದೆ.

ದಕ್ಷಿಣ ಆಫ್ರಿಕಾದ ನ್ಯೂಲ್ಯಾಂಡ್ಸ್‌ನ ಕೇಪ್‌ಟೌನ್ ಅಂಗಳದಲ್ಲಿ ಫೈನಲ್ ಪಂದ್ಯ ನಡೆಯುತ್ತಿದೆ. ಆತಿಥೇಯ ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಫೈನಲ್ ತಲುಪಿರುವುದು ಅಭಿಮಾನಿಗಳಿಗೆ ರೋಮಾಂಚನ ಉಂಟುಮಾಡಿದೆ. ಫೈನಲ್ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದ್ದು, ತುಂಬಿದ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾ ತಂಡವನ್ನು ಎದುರಿಸುತ್ತಿದೆ.

ಆಸ್ಟ್ರೇಲಿಯಾ ತಂಡ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದೆ. ದಕ್ಷಿಣ ಆಫ್ರಿಕಾ ಕೂಡ ಇಂಗ್ಲೆಂಡ್ ವಿರುದ್ಧದ ರೋಚಕ ಪಂದ್ಯದಲ್ಲಿ ರೋಚಕ ಜಯ ಸಾಧಿಸುವ ಮೂಲಕ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ.

ಫೈನಲ್ ಪಂದ್ಯಕ್ಕಾಗಿ ಉಭಯ ತಂಡಗಳು ಸೆಮಿಫೈನಲ್‌ನಲ್ಲಿ ಆಡಿದ್ದ ಪ್ಲೇಯಿಂಗ್ ಇಲೆವೆನ್‌ ಅನ್ನು ಉಳಿಸಿಕೊಂಡಿವೆ. ಫೈನಲ್ ಪಂದ್ಯದಲ್ಲಿ ಗೆಲುವಿಗಾಗಿ ಉಭಯ ತಂಡಗಳು ರೋಚಕವಾಗಿ ಸೆಣೆಸಾಡುವ ನಿರೀಕ್ಷೆ ಮಾಡಲಾಗಿದೆ.

Womens T20 World Cup Final: Australia Has Won The Toss And Opted To Bat First Against South Africa

ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದಿಲ್ಲ

ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧ 6 ಪಂದ್ಯಗಳನ್ನಾಡಿದ್ದು ಎಲ್ಲಾ ಪಂದ್ಯಗಳನ್ನು ಜಯ ಗಳಿಸಿದೆ. ಬಲಿಷ್ಠ ತಂಡವಾಗಿರುವ ಆಸ್ಟ್ರೇಲಿಯಾ ತಂಡವನ್ನು ಸೋಲಿಸಬೇಕೆಂದರೆ ದಕ್ಷಿಣ ಆಫ್ರಿಕಾ ತಂಡವಾಗಿ ಉತ್ತಮ ಪ್ರದರ್ಶನ ನೀಡಬೇಕಿದೆ.

ಎರಡೂ ಸೆಮಿಫೈನಲ್‌ ಪಂದ್ಯಗಳು ನ್ಯೂಲ್ಯಾಂಡ್ಸ್‌ನ ಕೇಪ್‌ಟೌನ್‌ ಅಂಗಳದಲ್ಲಿ ನಡೆದಿದ್ದವು. ಎರಡೂ ಪಂದ್ಯಗಳು ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಜಯ ಸಾಧಿಸಿತ್ತು. ಎರಡೂ ಸೆಮಿಫೈನಲ್ ಪಂದ್ಯಗಳು ಹೈ ಸ್ಕೋರಿಂಗ್ ಪಂದ್ಯಗಳಾಗಿದ್ದವು. ಫೈನಲ್ ಕೂಡ ಹೈ ಸ್ಕೋರಿಂಗ್ ಪಂದ್ಯವಾಗುವ ಸಾಧ್ಯತೆ ಇದೆ.

Womens T20 World Cup Final: Australia Has Won The Toss And Opted To Bat First Against South Africa

ಉಭಯ ತಂಡಗಳ ಆಡುವ ಬಳಗ

ದಕ್ಷಿಣ ಆಫ್ರಿಕಾ : ಲಾರಾ ವೊಲ್ವಾರ್ಡ್ಟ್, ತಜ್ಮಿನ್ ಬ್ರಿಟ್ಸ್, ಮಾರಿಜಾನ್ನೆ ಕಪ್, ಕ್ಲೋಯ್ ಟ್ರಯಾನ್, ನಡಿನ್ ಡಿ ಕ್ಲರ್ಕ್, ಸುನೆ ಲೂಸ್(ನಾಯಕಿ), ಅನ್ನೆಕೆ ಬಾಷ್, ಸಿನಾಲೊ ಜಫ್ತಾ(ವಿಕೆಟ್ ಕೀಪರ್), ಶಬ್ನಿಮ್ ಇಸ್ಮಾಯಿಲ್, ಅಯಾಬೊಂಗಾ ಖಾಕಾ, ನಾನ್‌ಕುಲುಲೆಕೊ ಮ್ಲಾಬಾ.

ಆಸ್ಟ್ರೇಲಿಯಾ : ಅಲಿಸ್ಸಾ ಹೀಲಿ (ವಿಕೆಟ್ ಕೀಪರ್), ಬೆತ್ ಮೂನಿ, ಮೆಗ್ ಲ್ಯಾನಿಂಗ್ (ನಾಯಕಿ), ಆಶ್ಲೆ ಗಾರ್ಡ್ನರ್, ಗ್ರೇಸ್ ಹ್ಯಾರಿಸ್, ಎಲ್ಲಿಸ್ ಪೆರ್ರಿ, ತಹ್ಲಿಯಾ ಮೆಕ್‌ಗ್ರಾತ್, ಜಾರ್ಜಿಯಾ ವೇರ್‌ಹ್ಯಾಮ್, ಜೆಸ್ ಜೊನಾಸೆನ್, ಮೇಗನ್ ಶುಟ್, ಡಾರ್ಸಿ ಬ್ರೌನ್.

Story first published: Sunday, February 26, 2023, 18:23 [IST]
Other articles published on Feb 26, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+