Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ಟಿ20 ವಿಶ್ವಕಪ್: ರೋಚಕ ಜಯದೊಂದಿಗೆ ಭಾರತ ಸೆ.ಫೈನಲ್‌ಗೆ ಲಗ್ಗೆ

Womens T20 World Cup: India beat New Zealand to enter semifinals

ಮೆಲ್ಬರ್ನ್, ಫೆಬ್ರವರಿ 27: ಮೆಲ್ಬರ್ನ್‌ನ ಜಂಕ್ಷನ್ ಓವಲ್‌ನಲ್ಲಿ ಗುರುವಾರ (ಫೆಬ್ರವರಿ 27) ನಡೆದ ಮಹಿಳಾ ಟಿ20 ವಿಶ್ವಕಪ್‌ನ ನ್ಯೂಜಿಲೆಂಡ್ ವನಿತಾ ತಂಡದ ವಿರುದ್ಧದ ಪಂದ್ಯದಲ್ಲಿ ಭಾರತದ ಮಹಿಳಾ ತಂಡ 4 ರನ್ ರೋಚಕ ಜಯ ಗಳಿಸಿದೆ. ಇದರೊಂದಿಗೆ ಭಾರತ ಸೆಮಿಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.

ನ್ಯೂಜಿಲೆಂಡ್‌ ವಿರುದ್ಧದ ಗೆಲುವಿನೊಂದಿಗೆ ಟೀಮ್ ಇಂಡಿಯಾ ವನಿತೆಯರು ಸತತ 3 ಗೆಲುವು ದಾಖಲಿಸಿದಂತಾಗಿದೆ. ಇದಕ್ಕೂ ಮುನ್ನ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡ, ಬಾಂಗ್ಲಾದೇಶದ ವಿರುದ್ಧ 18 ರನ್ ಗೆಲುವು, ಆಸ್ಟ್ರೇಲಿಯಾ ವಿರುದ್ಧ 17 ರನ್ ಜಯ ಗಳಿಸಿತ್ತು.

ಗುರುವಾರದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡ, ಶೆಫಾಲಿ ವರ್ಮಾ 46 (34 ಎಸೆತ), ಸ್ಮೃತಿ ಮಂಧಾನ 11, ತಾನಿಯಾ ಭಾಟಿಯಾ 23, ಜೆಮಿಮಾ ರೋಡ್ರಿಗಸ್ 10, ಶಿಖಾ ಪಾಂಡೆ 10, ರಾಧಾ ಯಾದವ್ 14 ರನ್ ಕೊಡುಗೆಯಿಂದ 20 ಓವರ್‌ನಲ್ಲಿ 8 ವಿಕೆಟ್ ಕಳೆದು 133 ರನ್ ಕಲೆ ಹಾಕಿತು.

ಗುರಿ ಬೆಂಬತ್ತಿದ ನ್ಯೂಜಿಲೆಂಡ್ ವನಿತೆಯರು, ರಾಚೆಲ್ ಪ್ರೀಸ್ಟ್ 12, ಸೋಫಿ ಡಿವೈನ್ 14, ಮ್ಯಾಡಿ ಗ್ರೀನ್ 24, ಕೇಟಿ ಮಾರ್ಟಿನ್ 25, ಅಮೆಲಿಯಾ ಕೆರ್ ಅಜೇಯ 34 ರನ್‌ನೊಂದಿಗೆ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದು 129 ರನ್ ಗಳಿಸಲು ಶಕ್ತರಾದರು. ಸ್ಫೋಟಕ ಬ್ಯಾಟಿಂಗ್‌ಗಾಗಿ ಶೆಫಾಲಿ ವರ್ಮಾ ಪಂದ್ಯಶ್ರೇಷ್ಠೆ ಪ್ರಶಸ್ತಿ ಪಡೆದುಕೊಂಡರು.

Story first published: Thursday, February 27, 2020, 13:19 [IST]
Other articles published on Feb 27, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+