ಮಹಿಳಾ ಟಿ20 ವಿಶ್ವಕಪ್: ಶ್ರೀಲಂಕಾ ವಿರುದ್ಧ ಭಾರತಕ್ಕೆ ಸುಲಭ ಗೆಲುವು

ಮೆಲ್ಬರ್ನ್, ಫೆಬ್ರವರಿ 29: ಆರಂಭಿಕ ಬ್ಯಾಟ್ಸ್‌ಮನ್ ಶೆಫಾಲಿ ವರ್ಮಾ ಅವರ ಸ್ಫೋಟಕ ಬ್ಯಾಟಿಂಗ್, ರಾಧಾ ಯಾದವ್ ಮಾರಕ ಬೌಲಿಂಗ್‌ನಿಂದಾಗಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಕೊನೇ ಲೀಗ್ ಪಂದ್ಯದಲ್ಲಿ ಭಾರತದ ವನಿತಾ ತಂಡ, ಶ್ರೀಲಂಕಾ ವಿರುದ್ಧ 7 ವಿಕೆಟ್ ಸುಲಭ ಗೆಲುವನ್ನಾಚರಿಸಿದೆ. ಭಾರತ ತಂಡ ಈಗಾಗಲೇ ಸೆಮಿಫೈನಲ್‌ಗೆ ಪ್ರವೇಶಿಸಿರುವುದರಿಂದ ಈ ಪಂದ್ಯ ಔಪಚಾರಿಕವಾಗಿತ್ತಷ್ಟೇ.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಶ್ರೀಲಂಕಾ ವನಿತೆಯರು, 20 ಓವರ್‌ಗೆ 9 ವಿಕೆಟ್ ಕಳೆದುಕೊಂಡು 113 ರನ್ ಕಲೆ ಹಾಕಿದ್ದರು. ನಾಯಕಿ ಚಮರಿ ಅಥಾಪಟು 33, ಹರ್ಷಿತಾ ಮಾದವಿ 12, ಶಶಿಕಲಾ ಸಿರಿವರ್ಧನೆ 13, ಕವಿಶಾ ದಿಲ್ಹಾರಿ 25 ರನ್ ಸೇರಿಸಿದ್ದೇ ಹೆಚ್ಚು.
ಗುರಿ ಬೆಂಬತ್ತಿದ ಭಾರತ, ಶೆಫಾಲಿ ವರ್ಮಾ 47 (34 ಎಸೆತ), ಸ್ಮೃತಿ ಮಂಧಾನ 17, ನಾಯಕಿ ಹರ್ಮನ್ ಪ್ರೀತ್ ಕೌರ್ 15, ಜೆಮಿಮಾ ರೋಡ್ರಿಗಸ್ ಅಜೇಯ 15, ದೀಪ್ತಿ ಶರ್ಮಾ ಅಜೇಯ 15 ರನ್ ಸೇರ್ಪಡೆಯೊಂದಿಗೆ 14.4 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 116 ರನ್ ಗಳಿಸಿತು.
ಲಂಕಾ ಇನ್ನಿಂಗ್ಸ್‌ನಲ್ಲಿ ಭಾರತದ ರಾಧಾ ಯಾದವ್ 23 ರನ್‌ಗೆ 4, ರಾಜೇಶ್ವರ ಗಾಯಕ್ವಾಡ್ 2, ದೀಪ್ತಿ ಶರ್ಮಾ, ಶಿಖಾ ಪಾಂಡೆ, ಪೂನಂ ಯಾದವ್ ತಲಾ 1 ವಿಕೆಟ್ ಪಡೆದರು. ರಾಧಾ ಯಾದವ್ ಪಂದ್ಯಶ್ರೇಷ್ಠೆ ಪ್ರಶಸ್ತಿ ಪಡೆದುಕೊಂಡರು. ಮಾರ್ಚ್ 5ರಂದು ಭಾರತದ ವನಿತಾ ತಂಡ ಸೆಮಿಫೈನಲ್ ಪಂದ್ಯವನ್ನಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications