ಮಹಿಳಾ ವರ್ಲ್ಡ್‌ಕಪ್ ಸೆಮಿಫೈನಲ್: ಇತಿಹಾಸ ನಿರ್ಮಿಸಲು ಟೀಮ್ ಇಂಡಿಯಾ ಸಜ್ಜು

ಮಹಿಳಾ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ವನಿತೆಯರು ಸೆಮಿಫೈನಲ್ ಪ್ರವೇಶವನ್ನು ಪಡೆದುಕೊಂಡಿದ್ದಾರೆ. ನಾಳೆ ಸೆಮಿಫೈನಲ್ ಪಂದ್ಯ ನಡೆಯಲಿದ್ದು ಟೀಮ್ ಇಂಡಿಯಾಗೆ ಇಂಗ್ಲೆಂಡ್ ಮಹಿಳೆಯರು ಮುಖಾಮುಖಿಯಾಗುತ್ತಿದ್ದಾರೆ. ಆದರೆ ಸಿಡ್ನಿಯಲ್ಲಿ ನಡೆಯುವ ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿದೆ.
ಟೀಮ್ ಇಂಡಿಯಾ ವನಿತೆಯರು ಮೊದಲ ಬಾರಿಗೆ ಫೈನಲ್ ಪಂದ್ಯವನ್ನಾಡಲು ಕಾತುರರಾಗಿದ್ದು ನಾಳಿನ ಸೆಮಿ ಫೈನಲ್‌ನಲ್ಲಿ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಗ್ರೂಪ್ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದಿರುವುದು ಟೀಮ್ ಇಂಡಿಯಾಗೆ ದೊಡ್ಡ ಬಲ ನೀಡಿದೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ವನಿತೆಯರ ಕಾದಾಟಕ್ಕೆ ವೇದಿಕೆಯಾಗಲಿದೆ. ಈ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದರೆ ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆಯನ್ನು ಮಾಡಿದಂತಾಗುತ್ತದೆ.

ಮಳೆಯ ಮುನ್ಸೂಚನೆ, ಭಾರತಕ್ಕೆ ಲಾಭ
ಇನ್ನು ನಾಳಿನ ಪಂದ್ಯಕ್ಕೆ ಮಳೆಯ ಆತಂಕವಿದೆ. ಈ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಒಂದು ವೇಳೆ ನಾಳಿನ ಪಂದ್ಯ ಮಳೆಯಿಂದಾಗಿ ರದ್ದಾದರೆ ಟೀಮ್ ಇಂಡಿಯಾ ಪಾಲಿಗೆ ವರದಾನವಾಗಲಿದೆ. ಟೀಮ್ ಇಂಡಿಯಾ ಆಡದೆಯೇ ಫೈನಲ್‌ಗೇರುವ ಅವಕಾಶವನ್ನು ಹೊಂದಿದೆ.

ಅಜೇಯ ತಂಡ ಟೀಮ್ ಇಂಡಿಯಾ
ಟೀಮ್ ಇಂಡಿಯಾ ಗ್ರೂಪ್ ಹಂತದಲ್ಲಿ ಯಾವುದೇ ಸೋಲನ್ನು ಕಾಣದೆ ಸೆಮಿ ಫೈನಲ್ ಹಂತಕ್ಕೇರಿದೆ. ಆದರೆ ಇಂಗ್ಲೆಂಡ್ ತಂಡ ಒಂದು ಪಂದ್ಯವನ್ನು ಗ್ರೂಪ್ ಹಂತದಲ್ಲಿ ಕಳೆದುಕೊಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಮುನ್ನಡೆಯಲ್ಲಿರುವುದರಿಂದ ಅದರ ಆಧಾರದಲ್ಲಿ ಟೀಮ್ ಇಂಡಿಯಾ ವನಿತೆಯರು ಫೈನಲ್ ಪ್ರವೇಶವನ್ನು ಪಡೆದುಕೊಳ್ಳಲಿದ್ದಾರೆ.

ಶೆಫಾಲಿ ವರ್ಮ ಬಲ
ಟೀಮ್ ಇಂಡಿಯಾ ವನಿತೆಯರು ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಶೆಫಾಲಿ ವರ್ಮಾ ಮಿಂಚು ಹರಿಸುತ್ತಿದ್ದಾರೆ. ಉಳಿದಂತೆ ಸ್ಮೃತಿ ಮಂದಾನ, ಶಮಿಮಾ ರೋಡ್ರಿಗಸ್ ನಾಯಕಿ ಹರ್ಮನ್ ಪ್ರಿತ್‌ಕೌರ್ ಕಡೆಯಿಂದ ಅತ್ಯುತ್ತಮ ಪ್ರದರ್ಶನ ಇನ್ನಷ್ಟೇ ಬರಬೇಕಿದೆ.

ಬಲಿಷ್ಠ ಬೌಲಿಂಗ್
ಇನ್ನು ಟೀಮ್ ಇಂಡಿಯಾ ಬೌಲಿಂಗ್ ಪಡೆ ಬಲಿಷ್ಟವಾಗಿದೆ. ಪೂನಂ ಯಾದವ್ ಮತ್ತು ಶಿಖಾ ಪಾಂಡೆ ಮ್ಯಾಚ್ ವಿನ್ನಿಂಗ್ ಆಟವನ್ನು ಪ್ರದರ್ಶಿಸುತ್ತಿದ್ದಾರೆ. ಇದು ಟೀಮ್ ಇಂಡಿಯಾ ಪಾಲಿಗೆ ಧನಾತ್ಮಕ ಅಂಶವಾಗಿದೆ.

2009ರ ವಿಜೇತ ತಂಡ ಇಂಗ್ಲೆಂಡ್
ಇನ್ನು ಇಂಗ್ಲೆಂಡ್ ತಂಡವೂ ಸಾಕಷ್ಟು ಬಲಿಷ್ಟವಾಗಿದೆ. 2009ರ ವಿಶ್ವ ಚಾಂಪಿಯನ್ ಆಗಿರುವ ಇಂಗ್ಲೆಂಡ್ ಭಾರತವನ್ನು ಮಣಿಸಿ ಫೈನಲ್ ಹಂತಕ್ಕೇರುವ ವಿಶ್ವಾಸವನ್ನಿಟ್ಟುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications