ಥೈಲ್ಯಾಂಡ್ ವಿರುದ್ಧ ದಕ್ಷಿಣ ಆಫ್ರಿಕಾ ವನಿತಾ ತಂಡಕ್ಕೆ ದಾಖಲೆಯ ಜಯ

ಕ್ಯಾನ್‌ಬೆರಾ, ಫೆಬ್ರವರಿ 28: ಶುಕ್ರವಾರ (ಫೆಬ್ರವರಿ 28) ನಡೆದ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಥೈಲ್ಯಾಂಡ್ ವಿರುದ್ಧ ದಕ್ಷಿಣ ಆಫ್ರಿಕಾ ವನಿತೆಯರು ದಾಖಲೆಯ ಗೆಲುವು ಸಾಧಿಸಿದ್ದಾರೆ. ಆರಂಭಿಕ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಕಲೆ ಹಾಕಿದ 195 ರನ್ ಮೊತ್ತ ದಾಖಲೆಯಾಗಿ ಗುರುತಿಸಿಕೊಂಡಿದೆ. ಈ ಜಯದೊಂದಿಗೆ ಆಫ್ರಿಕಾ ವನಿತೆಯರು ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದಿಂದ ಲಿಜೆಲ್ ಲೀ ಅವರ ಸ್ಫೋಟಕ ಶತಕ, ಸಿಮ್ ಲೂಸ್ ಅರ್ಧ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ದೊಡ್ಡ ಮೊತ್ತ ಕಲೆ ಹಾಕಲು ಸಾಧ್ಯವಾಯ್ತು. ಈ ಪಂದ್ಯದಲ್ಲಿ ಆಫ್ರಿಕಾ ಮಹಿಳೆಯರು ದಾಖಲಿಸಿರುವ 113 ರನ್ ಜಯವೂ ಬೃಹತ್ ರನ್ ಗೆಲುವಾಗಿ ಗಮನ ಸೆಳೆದಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ವನಿತೆಯರ ಪರ, ಆರಂಭಿಕ ಬ್ಯಾಟ್ಸ್‌ಮನ್ ಲಿಜೆಲ್ ಲೀ 101 (60 ಎಸೆತ), ಡೇನ್ ವ್ಯಾನ್ ನೀಕೆರ್ಕ್ 2, ಸನ್ ಲೂಸ್ 61 (41 ಎಸೆತ), ಕ್ಲೋಯ್ ಟ್ರಯಾನ್ 24, ಮಿಗ್ನಾನ್ ಡು ಪ್ರೀಜ್ 3 ರನ್ ಕೊಡುಗೆಯಿತ್ತರು. ಆಫ್ರಿಕಾ, 20 ಓವರ್‌ನಲ್ಲಿ 3 ವಿಕೆಟ್ ಕಳೆದು 195 ರನ್ ಗಳಿಸಿತು.
ಗುರಿ ಬೆಂಬತ್ತಿದ ಥೈಲ್ಯಾಂಡ್ ತಂಡ, ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಳ್ಳತೊಡಗಿತು. ಈ ತಂಡದ ಪರ 5ಕ್ಕೂ ಮಿಕ್ಕಿ ರನ್ ಗಳಿಸಿದವರೆಂದರೆ ನಟ್ಟಕನ್ ಚಾಂಟಮ್ (6 ರನ್), ನಟ್ಟಾಯ ಬೂಚತಮ್ (8), ಒನಿಚಾ ಕಾಮ್ಚೊಮ್ಫು (26), ವಂಗ್‌ಪಕ ಲಯೆಂಪ್ರಸರ್ಟ್ (6), ರತ್ನಪೂರ್ಣ್ ಪಡುಂಗ್ಲೆರ್ಡ್ (7) ಮಾತ್ರ. ಥೈಲ್ಯಾಂಡ್ 19.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 82 ರನ್ ಗಳಿಸಿತು.
ಥೈಲ್ಯಾಂಡ್ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ನನ್ಕುಲುಲೆಕೊ ಮ್ಲಾಬಾ 1, ಶಬ್ನಿಮ್ ಇಸ್ಮಾಯಿಲ್ 3 (8 ರನ್), ಡೇನ್ ವ್ಯಾನ್ ನೀಕೆರ್ಕ್ 1, ಸನ್ ಲೂಸ್ 3 (15 ರನ್), ನಾಡಿನ್ ಡಿ ಕ್ಲಾರ್ಕ್ 1 ವಿಕೆಟ್ ಪಡೆದರು. ಸ್ಫೋಟಕ ಶತಕಕ್ಕಾಗಿ ದಕ್ಷಿಣ ಆಫ್ರಿಕಾದ ಲಿಜೆಲ್ ಲೀ ಪಂದ್ಯಶ್ರೇಷ್ಠೆ ಪ್ರಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications