ಮಹಿಳಾ ವಿಶ್ವಕಪ್: ಭಾರತ vs ನ್ಯೂಜಿಲೆಂಡ್ ನಡುವಿನ ಮುಖಾಮುಖಿಯಲ್ಲಿ ಯಾರು ಬಲಿಷ್ಠರು?

ಒಂದೆಡೆ ಭಾರತ ಮತ್ತು ಶ್ರಿಲಂಕಾ ತಂಡಗಳ ನಡುವಿನ ಟೆಸ್ಟ್ ಸರಣಿ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಮಹಿಳಾ ವಿಶ್ವಕಪ್ ಟೂರ್ನಿ ಕೂಡ ಸದ್ದು ಮಾಡಲಾರಂಭಿಸಿದೆ. ಇನ್ನು ಈ ಬಾರಿಯ ಮಹಿಳಾ ವಿಶ್ವಕಪ್ ಟೂರ್ನಿಯನ್ನು ನ್ಯೂಜಿಲೆಂಡ್‌ನಲ್ಲಿ ಆಯೋಜಿಸಲಾಗಿದ್ದು, ಮಾರ್ಚ್ ೪ರಂದು ನಡೆದ ನ್ಯೂಜಿಲೆಂಡ್ ಮಹಿಳಾ ತಂಡ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ಮೂಲಕ ಆರಂಭವಾದ ಈ ಬಾರಿಯ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಮಾರ್ಚ್ 9ರ ವೇಳೆಗೆ ಒಟ್ಟು 7 ಪಂದ್ಯಗಳು ಮುಗಿದಿದ್ದು ಅತಿಹೆಚ್ಚು ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ತಂಡದಷ್ಟೇ ಗೆಲುವನ್ನು ಸಾಧಿಸಿರುವ ವೆಸ್ಟ್ ಇಂಡೀಸ್ ವನಿತೆಯರ ತಂಡ ದ್ವಿತೀಯ ಸ್ಥಾನದಲ್ಲಿದೆ ಮತ್ತು ಟೂರ್ನಿಯಲ್ಲಿ ಇಲ್ಲಿಯವರೆಗೂ ಕೇವಲ ಒಂದು ಪಂದ್ಯವನ್ನಾಡಿ ಆ ಪಂದ್ಯದಲ್ಲಿ ತನ್ನ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ ಜಯ ಸಾಧಿಸಿರುವ ಭಾರತೀಯ ವನಿತೆಯರ ತಂಡ ಮೂರನೇ ಸ್ಥಾನದಲ್ಲಿದೆ.
ಹೀಗೆ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 107 ರನ್‌ಗಳ ಭರ್ಜರಿ ಸಾಧಿಸುವುದರ ಮೂಲಕ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭವನ್ನು ಮಾಡಿರುವ ಭಾರತೀಯ ವನಿತೆಯರ ತಂಡ ತನ್ನ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ. ಇನ್ನು ಈ ಬಾರಿಯ ಮಹಿಳಾ ವಿಶ್ವಕಪ್ ಟೂರ್ನಿ ನ್ಯೂಜಿಲೆಂಡ್‌ನಲ್ಲಿಯೇ ನಡೆಯುತ್ತಿದ್ದು, ಈ ಟೂರ್ನಿ ಆರಂಭಕ್ಕೂ ಮುನ್ನ ಭಾರತ ನ್ಯೂಜಿಲೆಂಡ್ ಪ್ರವಾಸವನ್ನು ಕೈಗೊಂಡು ಏಕೈಕ ಟಿ ಟ್ವೆಂಟಿ ಪಂದ್ಯ ಹಾಗೂ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟ ನಡೆಸಿತ್ತು. ಈ ಪೈಕಿ ಮೊದಲು ನಡೆದ ಟಿ ಟ್ವೆಂಟಿ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ಭಾರತೀಯ ವನಿತೆಯರ ತಂಡ ನಂತರ ನಡೆದ 5 ಪಂದ್ಯಗಳ ಏಕದಿನ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಹೀನಾಯವಾಗಿ ಸೋತು ಕೊನೆಯ ಪಂದ್ಯದಲ್ಲಿ ಜಯ ಸಾಧಿಸಿ ವೈಟ್‌ವಾಷ್ ಮುಖಭಂಗದಿಂದ ಪಾರಾಯಿತು.
ಹೀಗೆ ಇತ್ತೀಚಿಗಷ್ಟೆ ನಡೆದ ಸರಣಿಗಳಲ್ಲಿ ಹೀನಾಯವಾಗಿ ಕಿವೀಸ್ ವಿರುದ್ಧ ಸೋತಿರುವ ಭಾರತೀಯ ವನಿತೆಯರ ತಂಡ ನಾಳೆ ( ಮಾರ್ಚ್ 10 ) ನಡೆಯಲಿರುವ ಪಂದ್ಯದಲ್ಲಿ ಜಯ ಸಾಧಿಸಿ ಸರಣಿ ಸೋಲಿನ ಸೇಡನ್ನು ತೀರಿಸಿಕೊಳ್ಳುತ್ತಾ ಅಥವಾ ಏಕದಿನ ಸರಣಿಯ ರೀತಿಯೇ ನ್ಯೂಜಿಲೆಂಡ್ ಮುಂದೆ ಮಂಕಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಇತ್ತಂಡಗಳ ನಡುವಿನ ಮುಖಾಮುಖಿ ಅಂಕಿಅಂಶ:
ಭಾರತ ವನಿತೆಯರ ತಂಡ ಮತ್ತು ನ್ಯೂಜಿಲೆಂಡ್ ವನಿತೆಯರ ತಂಡ ಇದುವರೆಗೂ ಒಟ್ಟು 53 ಏಕದಿನ ಪಂದ್ಯಗಳಲ್ಲಿ ಸೆಣಸಾಟ ನಡೆಸಿದ್ದು, ನ್ಯೂಜಿಲೆಂಡ್ ವನಿತೆಯರ ತಂಡ 32 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ ಭಾರತ ವನಿತೆಯರ ತಂಡ 20 ಪಂದ್ಯಗಳಲ್ಲಿ ಜಯ ಸಾಧಿಸಿದೆ ಮತ್ತು ಇನ್ನುಳಿದೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಇನ್ನು ಭಾರತ ವನಿತೆಯರ ತಂಡ ಮತ್ತು ನ್ಯೂಜಿಲೆಂಡ್ ವನಿತೆಯರ ತಂಡಗಳ ನಡುವಿನ ವಿಶ್ವಕಪ್ ಮುಖಾಮುಖಿಯಲ್ಲಿ ಇದುವರೆಗೂ ಒಟ್ಟು 11 ಪಂದ್ಯಗಳಲ್ಲಿ ಸೆಣಸಾಟ ನಡೆಸಿದ್ದು, ನ್ಯೂಜಿಲೆಂಡ್ ವನಿತೆಯರ ತಂಡ 9 ಪಂದ್ಯಗಳಲ್ಲಿ ಗೆದ್ದಿದ್ದು, ಭಾರತ ವನಿತೆಯರ ತಂಡ 2 ಪಂದ್ಯಗಳಲ್ಲಿ ಗೆದ್ದಿದೆ. ಹೀಗೆ ಏಕದಿನ ಹಾಗೂ ವಿಶ್ವಕಪ್ ಎರಡೂ ಮುಖಾಮುಖಿಗಳಲ್ಲಿಯೂ ನ್ಯೂಜಿಲೆಂಡ್ ವನಿತೆಯರ ತಂಡ ಬೃಹತ್ ಮೇಲುಗೈ ಸಾಧಿಸಿದ್ದರೆ, ಭಾರತ ವನಿತೆಯರ ತಂಡ ದೊಡ್ಡ ಹಿನ್ನಡೆ ಅನುಭವಿಸಿದೆ.
ಇನ್ನು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಡಿರುವ ಏಕೈಕ ಪಂದ್ಯದಲ್ಲಿ ಜಯ ಸಾಧಿಸಿದ್ದರೆ ಅತ್ತ ನ್ಯೂಜಿಲೆಂಡ್ ಉದ್ಘಾಟನಾ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತು ನಂತರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಜಯಗಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications