Women’s World Boxing Championship: ಚಿನ್ನದ ಪದಕ ಗೆದ್ದು ದಾಖಲೆ ಬರೆದ ನಿತು ಘಂಘಾಸ್

ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ನಿತು ಘಂಘಾಸ್ ಶನಿವಾರ ನವದೆಹಲಿಯಲ್ಲಿ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ. ಶನಿವಾರ ನಡೆದ ಫೈನಲ್‌ನಲ್ಲಿ ನೀತು ಘಂಘಾಸ್ 48 ಕೆಜಿ ವಿಭಾಗದಲ್ಲಿ ಮಂಗೋಲಿಯಾದ ಲುತ್ಸೈಖಾನ್ ಅಲ್ಟಾನ್‌ಸೆಟ್ಸೆಗ್ ವಿರುದ್ಧ ಜಯ ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದರು.
ಕೆಲವು ಸಂದರ್ಭಗಳಲ್ಲಿ ಸಮತೋಲನ ಕಳೆದುಕೊಂಡರೂ, ತಮ್ಮ ಆಕ್ರಮಣಕಾರಿ ವಿಧಾನದಿಂದ ಎದುರಾಳಿಗೆ ಯಾವುದೇ ಅವಕಾಶವನ್ನು ನೀಡಲಿಲ್ಲ. ಈ ಮೂಲಕ 2023 ರ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಬಾಕ್ಸರ್ ಎನಿಸಿಕೊಂಡಿದ್ದಾರೆ.
ದೆಹಲಿಯಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಅವರು ಕಿಕ್ಕಿರಿದ ಜನಸ್ತೋಮದ ನಡುವೆ ತಮ್ಮ ಆರಾಧ್ಯ ದೈವವಾದ ವಿಜೇಂದರ್ ಸಿಂಗ್ ಅವರ ಉಪಸ್ಥಿತಿಯಲ್ಲಿ ನೀತು ಘಂಘಾಸ್ ಅಮೋಘ ಪ್ರದರ್ಶನ ನೀಡಿದರು. ನಿತು ಆಕ್ರಮಣಕಾರಿಯಾಗಿಯೇ ಆಟವನ್ನು ಶುರು ಮಾಡಿದರು. ಮೊದಲ ಸುತ್ತಿನಲ್ಲಿ 5-0 ಮುನ್ನಡೆ ಪಡೆದುಕೊಂಡರು.

3-2 ಅಂತರದಲ್ಲಿ ಗೆದ್ದ ನಿತು
ಎರಡನೇ ಸುತ್ತಿನಲ್ಲಿ ಅಲ್ಟಾನ್‌ಸೆಟ್ಸೆಗ್ ವಾಪಸಾತಿ ಮಾಡಿದರು. ಪಾಯಿಂಟ್‌ಗಳ ಅಂತರವನ್ನು 3-2 ಕ್ಕೆ ಕಡಿಮೆ ಮಾಡಿದರು. ಅಂತಿಮ ಮೂರು ನಿಮಿಷಗಳಲ್ಲಿ ನಿತು ರಕ್ಷಣಾತ್ಮಕವಾಗಿ ಆಡಿದರು, ಕೊನೆಗೆ 3-2 ಅಂತರದಲ್ಲಿ ಅವರು ಗೆಲುವು ಸಾಧಿಸಿದರು.
ನಿತು ಇಡೀ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಮೊದಲ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ, 2022 ರ ಸ್ಟ್ರಾಂಡ್ಜಾ ಸ್ಮಾರಕ ಚಿನ್ನದ ಪದಕ ವಿಜೇತ, ವಿಶ್ವ ಚಾಂಪಿಯನ್ ಕಿರೀಟವನ್ನು ಪಡೆದ ಆರನೇ ಭಾರತೀಯ ಬಾಕ್ಸರ್ ಎನಿಸಿಕೊಂಡರು. ಆರು ಬಾರಿಯ ಚಾಂಪಿಯನ್ ಮೇರಿ ಕೋಮ್ (2002, 2005, 2006, 2008, 2010 ಮತ್ತು 2018), ಸರಿತಾ ದೇವಿ (2006), ಜೆನ್ನಿ ಆರ್‌ಎಲ್ (2006), ಲೇಖಾ ಕೆಸಿ (2006) ಮತ್ತು ನಿಖತ್ ಝರೀನ್ (2022) ಗೆಲುವು ಸಾಧಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications