Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ವಿಶ್ವಕಪ್ 2022: ಭಾರತ vs ಬಾಂಗ್ಲಾದೇಶ ಮುಖಾಮುಖಿಯಲ್ಲಿ ಯಾರು ಬಲಿಷ್ಠರು?

Womens world cup 2022: India women vs Bangladesh women head to head and probable playing XI

ಐಸಿಸಿ ವನಿತೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಈ ಬಾರಿ ನ್ಯೂಜಿಲೆಂಡ್ ನೆಲದಲ್ಲಿ ನಡೆದಿದ್ದು, ಮಾರ್ಚ್ 21ರವರೆಗೆ ಟೂರ್ನಿಯಲ್ಲಿ ಒಟ್ಟು 20 ಪಂದ್ಯಗಳು ನಡೆದಿದ್ದು, ಈ ಪೈಕಿ ಅತಿಹೆಚ್ಚು ಪಂದ್ಯಗಳಲ್ಲಿ ಜಯ ಸಾಧಿಸಿರುವ ಆಸ್ಟ್ರೇಲಿಯಾ ವನಿತೆಯರ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ವನಿತೆಯರ ತಂಡ ದ್ವಿತೀಯ ಸ್ಥಾನದಲ್ಲಿದೆ, ಇನ್ನು ವೆಸ್ಟ್ ಇಂಡೀಸ್ ವನಿತೆಯರ ತಂಡ ತೃತೀಯ ಸ್ಥಾನದಲ್ಲಿದ್ದರೆ, ಭಾರತ ವನಿತೆಯರ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಈ ಬಾರಿಯ ಟೂರ್ನಿಯ 21 ಹಾಗೂ 22ನೇ ಪಂದ್ಯಗಳು ನಾಳೆ ( ಮಾರ್ಚ್ 22 ) ನಡೆಯಲಿದ್ದು ಮೊದಲ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ವನಿತೆಯರ ತಂಡ ಹಾಗೂ ದಕ್ಷಿಣ ಆಫ್ರಿಕಾ ವನಿತೆಯರ ತಂಡಗಳು ಸೆಣಸಾಟ ನಡೆಸಲಿದ್ದು, ದ್ವಿತೀಯ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಹಾಗೂ ಬಾಂಗ್ಲಾದೇಶ ವನಿತೆಯರ ತಂಡಗಳ ನಡುವೆ ನಡೆಯಲಿದೆ.

ಇನ್ನು ಈವರೆಗೂ ಒಟ್ಟು 5 ಪಂದ್ಯಗಳನ್ನಾಡಿ ಎರಡರಲ್ಲಿ ಜಯ ಸಾಧಿಸಿ ಮೂರು ಪಂದ್ಯಗಳಲ್ಲಿ ಸೋತಿರುವ ಭಾರತ ವನಿತೆಯರ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಸೆಮಿ ಫೈನಲ್ ಪ್ರವೇಶಿಸುವ ತನ್ನ ಕನಸನ್ನು ಇನ್ನೂ ಜೀವಂತವಾಗಿಸಿಕೊಂಡಿದೆ. ಹೀಗಾಗಿ ಭಾರತ ವನಿತೆಯರ ತಂಡ ನಾಳೆ ( ಮಾರ್ಚ್ 22 ) ನಡೆಯಲಿರುವ ಬಾಂಗ್ಲಾದೇಶ ವನಿತೆಯರ ತಂಡದ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಲೇಬೇಕಾದ ಅನಿವಾರ್ಯತೆಯಲ್ಲಿದೆ.

ಇನ್ನು ಭಾರತ ವನಿತೆಯರ ತಂಡ ಹಾಗೂ ಬಾಂಗ್ಲಾದೇಶ ವನಿತೆಯರ ತಂಡಗಳ ನಡುವಿನ ಈ ಪಂದ್ಯ ಹ್ಯಾಮಿಲ್ಟನ್‌ನ ಸೆಡ್ಡಾನ್ ಪಾರ್ಕ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಈ ಪಂದ್ಯ ಬೆಳಗ್ಗೆ 6.30ಕ್ಕೆ ಆರಂಭಗೊಳ್ಳಲಿದೆ.

ಭಾರತ ವನಿತೆಯರ ತಂಡ ಹಾಗೂ ಬಾಂಗ್ಲಾದೇಶ ವನಿತೆಯರ ತಂಡಗಳ ನಡುವಿನ ಮುಖಾಮುಖಿ ಪಂದ್ಯಗಳ ಅಂಕಿಅಂಶ:

ಭಾರತ ವನಿತೆಯರ ತಂಡ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ಇದುವರೆಗೂ ಒಟ್ಟು ನಾಲ್ಕು ಮುಖಾಮುಖಿ ಏಕದಿನ ಪಂದ್ಯಗಳು ನಡೆದಿದ್ದು ನೆರೆಯ ಬಾಂಗ್ಲಾದೇಶ ವನಿತೆಯರ ತಂಡದ ವಿರುದ್ಧ ಭಾರತ ವನಿತೆಯರ ತಂಡ ಎಲ್ಲಾ ನಾಲ್ಕು ಪಂದ್ಯಗಳಲ್ಲಿಯೂ ಜಯ ಸಾಧಿಸಿದೆ. ಇನ್ನು ಬಾಂಗ್ಲಾದೇಶ ವನಿತೆಯರ ತಂಡ ಇದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯನ್ನಾಡಲು ಅರ್ಹತೆ ಪಡೆದುಕೊಂಡಿದ್ದು, ನಾಳೆ ( ಮಾರ್ಚ್ 22 ) ನಡೆಯಲಿರುವ ಪಂದ್ಯದ ಮೂಲಕ ಇದೇ ಮೊದಲ ಬಾರಿ ಭಾರತ ವನಿತೆಯರ ತಂಡವನ್ನು ವಿಶ್ವಕಪ್ ಪಂದ್ಯವೊಂದರಲ್ಲಿ ಎದುರಿಸಲಿದೆ.

ಪಂದ್ಯದ ನೇರ ಪ್ರಸಾರ:

ಭಾರತ ವನಿತೆಯರ ತಂಡ ಹಾಗೂ ಬಾಂಗ್ಲಾದೇಶ ವನಿತೆಯರ ತಂಡಗಳ ನಡುವಿನ ಈ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಪ್ರಸಾರವಾಗಲಿದ್ದು ಡಿಸ್ನೆ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಸಹ ಈ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.

ಸಂಭಾವ್ಯ ಆಡುವ ಬಳಗಗಳು:

ಭಾರತ ವನಿತೆಯರ ಸಂಭಾವ್ಯ ಆಡುವ ಬಳಗ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ, ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್

ಬಾಂಗ್ಲಾದೇಶ ಸಂಭಾವ್ಯ ಆಡುವ ಬಳಗ: ಶಮೀಮಾ ಸುಲ್ತಾನ (ವಿಕೆಟ್ ಕೀಪರ್), ಶರ್ಮಿನ್ ಅಖೇತ್ರ್, ಫರ್ಗಾನಾ ಹೊಕ್, ರುಮಾನಾ ಅಹ್ಮದ್, ನಿಗರ್ ಸುಲ್ತಾನಾ (ನಾಯಕಿ), ಸಲ್ಮಾ ಖಾತುನ್, ರಿತು ಮೋನಿ, ಫಾಹಿಮಾ ಖಾತುನ್, ನಹಿದಾ ಅಕ್ಟರ್, ಫರಿಹಾ ತ್ರಿಸ್ನಾ, ಜಹಾನಾರಾ ಆಲಂ

Story first published: Monday, March 21, 2022, 21:05 [IST]
Other articles published on Mar 21, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+