For Quick Alerts
ALLOW NOTIFICATIONS  
For Daily Alerts
 

ICC Women's world cup 2022 : ದಕ್ಷಿಣ ಆಪ್ರಿಕಾ ಮಣಿಸಿ ಫೈನಲ್‌ಗೇರಿದ ಇಂಗ್ಲೆಂಡ್

Womens world cup semi-Final 2: England beat South Africa and enter Final

ಮಹಿಳಾ ವಿಶ್ವಕಪ್‌ನ ಎರಡನೇ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಇಂಗ್ಲೆಂಡ್ ಮಹಿಳಾ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಸತತ ಎರಡನೇ ಬಾರಿ ಇಂಗ್ಲೆಂಡ್ ವನಿತೆಯರು ವಿಶ್ವಕಪ್ ಫೈನಲ್‌ಗೇರಿದ್ದಾರೆ. ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಪ್ರಶಸ್ತಿಗಾಗಿ ಸೆಣೆಸಾಟವನ್ನು ನಡೆಸಲಿದೆ.

ಇಂದು ನಡೆದ ಎರಡನೇ ಸೆಮಿ ಫೈನಲ್ ಕದನದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಮೊದಲಿಗೆ ಎದುರಾಳಿ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತು. ಆರಂಭಿಕ ವಿಕೆಟ್‌ಅನ್ನು ಇಂಗ್ಲೆಂಡ್ 10 ರನ್‌ಗಳಿಸುವಷ್ಟರಲ್ಲಿ ಕಳೆದುಕೊಂಡಿತ್ತು. ನಾಯಕಿ ನೈಟ್ ಕೂಡ ಒಂದು ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಇತ್ತ ಮತ್ತೊಂದು ತುದಿಯಲ್ಲಿ ಮತ್ತೋರ್ವ ಆರಂಭಿಕ ಆಟಗಾರ್ತಿ ಡೇನಿಯಲ್ ವ್ಯಾಟ್ ಭರ್ಜರಿ ಬ್ಯಾಟಿಂಗ್ ನಡೆಸುತ್ತಾ ಮುನ್ನುಗ್ಗುತ್ತಿದ್ದರೆ ಮತ್ತೊಂದು ತುದಿಯಲ್ಲಿ ಆಟಗಾರ್ತಿಯರು ಕ್ರೀಸ್ ಕಾಯ್ದುಕೊಳ್ಳಲು ವಿಫಲವಾದರು. ಆದರೆ ಸೋಫಿಯಾ ಡಂಕ್ಲಿ ಉತ್ತಮ ಜೊತೆಯಾಟ ನೀಡಿದರು.

ಡೇನಿಯಲ್ ವ್ಯಾಟ್ ಭರ್ಜರಿ ಶತಕ ಸಿಡಿಸುವ ಮೂಲಕ ಇಂಗ್ಲೆಂಡ್ ತಂಡದ ಬೃಹತ್ ಮೊತ್ತಕ್ಕೆ ಕಾರಣವಾದರು. ಡಾಂಕ್ಲೆ 60 ರನ್‌ಗಳ ಕೊಡುಗೆ ನೀಡಿದ್ದಾರೆ. ಈ ಮೂಲಕ ನಿಗದಿತ 50 ಓವರ್‌ಗಳಲ್ಲಿ ಇಂಗ್ಲೆಂಡ್ ತಂಡ 8 ವಿಕೆಟ್ ಕಳೆದುಕೊಂಡು 293 ರನ್‌ಗಳಿಸಿತು.

ಇಂಗ್ಲೆಂಡ್ ಮಹಿಳಾ ತಂಡ ನೀಡಿದ ಈ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭದಿಂದಲೇ ಕುಸಿತ ಕಾಣಲು ಆರಂಭಿಸಿತು. ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಯಾವ ಜೋಡಿಯಿಂದಲೂ ಉತ್ತಮ ಜೊತೆಯಾಟ ಬಾರಲಿಲ್ಲ. ಹೀಗಾಗಿ ಭಾರೀ ನಿರಾಸೆ ಅನುಭವಿಸಿತು. ಅಂತಿಮವಾಗಿ ಕೇವಲ 38 ಓವರ್‌ಗಳಲ್ಲಿ 156 ರನ್‌ಗಳಿಸಿ ಆಲೌಟ್ ಆಯಿತು. ಈ ಮೂಲಕ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಸೆಮಿಫೈನಲ್‌ಗೆ ತನ್ನ ಹೋರಾಟವನ್ನು ಅಂತ್ಯಗೊಳಿಸಿದೆ.

Womens world cup semi-Final 2: England beat South Africa and enter Final

ಇನ್ನು ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್‌ ಕದನದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ ತಂಡ ಫೈನಲ್ ಹಂತಕ್ಕೇರಿದೆ. ಹೀಗಾಗಿ ಮುಂದಿನ ಭಾನುವಾರ ನಡೆಯಲಿರುವ ಫೈನಲ್ ಸೆಣೆಸಾಟದಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಪ್ರಶಸ್ತಿಗಾಗಿ ಸೆಣೆಸಾಡಲಿದೆ.

ದಕ್ಷಿಣ ಆಪ್ರಿಕಾ ಪ್ಲೇಯಿಂಗ್ XI: ಲಿಜೆಲ್ಲೆ ಲೀ, ಲಾರಾ ವೊಲ್ವಾರ್ಡ್ಟ್, ಲಾರಾ ಗುಡಾಲ್, ಸುನೆ ಲೂಸ್ (ನಾಯಕಿ), ಮಿಗ್ನಾನ್ ಡು ಪ್ರೀಜ್, ಮರಿಜಾನ್ನೆ ಕಪ್, ಕ್ಲೋಯ್ ಟ್ರಯಾನ್, ತ್ರಿಶಾ ಚೆಟ್ಟಿ (ವಿಕೆಟ್ ಕೀಪರ್), ಶಬ್ನಿಮ್ ಇಸ್ಮಾಯಿಲ್, ಮಸಾಬಟಾ ಕ್ಲಾಸ್, ಅಯಾಬೊಂಗಾ ಖಾಕಾ
ಬೆಂಚ್: ಸಿನಾಲೊ ಜಫ್ತಾ, ತಜ್ಮಿನ್ ಬ್ರಿಟ್ಸ್, ತುಮಿ ಸೆಖುಖುನೆ, ನಾನ್ಕುಲುಲೆಕೊ ಮ್ಲಾಬಾ

ಇಂಗ್ಲೆಂಡ್ ಪ್ಲೇಯಿಂಗ್ XI: ಟಮ್ಮಿ ಬ್ಯೂಮಾಂಟ್, ಡೇನಿಯಲ್ ವ್ಯಾಟ್, ಹೀದರ್ ನೈಟ್ (ನಾಯಕಿ), ನಟಾಲಿ ಸ್ಕೈವರ್, ಆಮಿ ಜೋನ್ಸ್ (ವಿಕೆಟ್ ಕೀಪರ್), ಸೋಫಿಯಾ ಡಂಕ್ಲಿ, ಕ್ಯಾಥರೀನ್ ಬ್ರಂಟ್, ಸೋಫಿ ಎಕ್ಲೆಸ್ಟೋನ್, ಕೇಟ್ ಕ್ರಾಸ್, ಷಾರ್ಲೆಟ್ ಡೀನ್, ಅನ್ಯಾ ಶ್ರಬ್ಸೋಲ್
ಬೆಂಚ್: ನತಾಶಾ ಫಾರಂಟ್, ಲಾರೆನ್ ವಿನ್ಫೀಲ್ಡ್-ಹಿಲ್, ಎಮ್ಮಾ ಲ್ಯಾಂಬ್, ಫ್ರೇಯಾ ಡೇವಿಸ್

Story first published: Friday, April 1, 2022, 10:57 [IST]
Other articles published on Apr 1, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+