ಮಹಿಳಾ ವಿಶ್ವ ಟಿ20: ಐರ್ಲೆಂಡ್ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ

ಗಯಾನಾ, ನವೆಂಬರ್ 16: ಗಯಾನಾದ ಪ್ರಾವಿಡೆನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ (ನವೆಂಬರ್ 15) ನಡೆದ ಐಸಿಸಿ ಮಹಿಳಾ ವಿಶ್ವ ಟಿ20 ಪಂದ್ಯದಲ್ಲಿ ಐರ್ಲೆಂಡ್ ವನಿತೆಯರನ್ನು ಸೋಲಿಸಿದ ಭಾರತ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಮಿಥಾಲಿ ರಾಜ್ ಅರ್ಧಶತಕ ನೆರವಿನಿಂದ ಭಾರತ 52 ರನ್ ಗೆಲುವನ್ನಾಚರಿಸಿತು.
ಟಾಸ್ ಸೋಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತಕ್ಕೆ ಆರಂಭಿಕ ಆಟಗಾರ್ತಿಯರಾದ ಮಿಥಾಲಿ ರಾಜ್ ಮತ್ತು ಸ್ಮೃತಿ ಮಂಧಾನ ಅವರು ಉತ್ತಮ ಆರಂಭ ನೀಡಿದರು. ಮಿಥಾಲಿ 51, ಮಂಧಾನ 33 ರನ್ ಸೇರಿಸಿದ್ದರಿಂದ ಭಾರತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದು 145 ರನ್ ಪೇರಿಸಿತು.
ಭಾರತದ ಮಹಿಳೆಯರು ನೀಡಿದ್ದ 146 ರನ್ ಗುರಿ ಬೆನ್ನತ್ತಿದ ಐರ್ಲೆಂಡ್‌ಗೆ ಅಂಥ ಬ್ಯಾಟಿಂಗ್ ಬೆಂಬಲ ಲಭಿಸಲಿಲ್ಲ. ಆರಂಭಿಕ ಆಟಗಾರ್ತಿ ಕ್ಲೇರ್ ಷಿಲ್ಲಿಂಗ್ಟನ್ 23, ಇಸೋಬೆಲ್ ಜಾಯ್ಸ್ 33 ರನ್ ಸೇರಿಸಿದರಾದರೂ ಐರ್ಲೆಂಡ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದು 93 ರನ್ ಪೇರಿಸಲಷ್ಟೇ ಶಕ್ತವಾಯಿತು.
ಐರ್ಲೆಂಡ್ ಇನ್ನಿಂಗ್ಸ್ ವೇಳೆ ರಾಧಾ ಯಾದವ್, ದೀಪ್ತಿ ಶರ್ಮಾ ಮಾರಕ ಬೌಲಿಂಗ್ ದಾಳಿ ನಡೆಸಿದರು. ರಾಧಾ 3, ದೀಪ್ತಿ 2 ವಿಕೆಟ್ ಕೆಡವುವ ಮೂಲಕ ಐರ್ಲೆಂಡ್ ತಂಡವನ್ನು ಕಾಡಿದರು. ಈ 13ನೇ ಪಂದ್ಯದ ಗೆಲುವಿನ ಬಳಿಕ ಭಾರತ ಸತತ ಮೂರು ಗೆಲುವು ಕಂಡಂತಾಗಿದೆ. ಇದರೊಂದಿಗೆ ಬಿ ಗ್ರೂಪ್‌ನಲ್ಲಿರುವ ಭಾರತ ಸೆಮಿಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications