Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women T20 World Cup: ಟೀಮ್ ಇಂಡಿಯಾಕ್ಕೆ ಶುರುವಾಗಿದೆ ಟೆನ್ಷನ್‌

ಇನ್ನೇನು ಕೆಲವೇ ದಿನಗಳಲ್ಲಿ ಇಂಗ್ಲೆಂಡ್‌ನಲ್ಲಿ ಮಹಿಳಾ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ವಿಶ್ವಕಪ್‌ ಮೇಲೆ ಟೀಮ್ ಇಂಡಿಯಾ ಚಿತ್ತ ನೆಟ್ಟಿದೆ. ಆದರೆ ಈ ಬಿಗ್‌ ಈವೆಂಟ್‌ಗೂ ಮುನ್ನ ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ಟೆನ್ಷನ್‌ ಆರಂಭವಾಗಿದೆ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, ಸರಣಿಯನ್ನು ಕೈ ಚೆಲ್ಲಿದೆ. ಈ ಮೂಲಕ ಹರ್ಮನ್‌ ಪ್ರೀತ್‌ ಪಡೆ ಮಹಿಳಾ ಟಿ20 ವಿಶ್ವಕಪ್‌ಗೂ ಮುನ್ನ ನಡೆದ ಸಿದ್ಧತಾ ಸರಣಿಯಲ್ಲಿ ನಿರಾಸೆ ಕಂಡಿದೆ.

ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾದ ಆರಂಭಿಕ ಜೋಡಿ ರನ್‌ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಅವರ ಸ್ಟಾರ್ ಓಪನಿಂಗ್ ಜೋಡಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲವಾಗಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಈ ಜೋಡಿ ರನ್‌ ಕಲೆ ಹಾಕುವಲ್ಲಿ ಹಿನ್ನಡೆ ಅನುಭವಿಸಿದೆ.

Women T20 World Cup

ಟೀಮ್ ಇಂಡಿಯಾದ ಅನುಭವಿ ಆರಂಭಿಕ ಜೋಡಿಯಾದ ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮಾ ಜೋಡಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಸ್ಮೃತಿ ಮಂಧನಾ 3 ಪಂದ್ಯಗಳಲ್ಲಿ 13ರ ಸರಾಸರಿಯಲ್ಲಿ 40 ರನ್‌ ಕಲೆ ಹಾಕಿದ್ದಾರೆ. ಇನ್ನು ಶಫಾಲಿ ವರ್ಮಾ ಸಹ ಈ ಸರಣಿಯಲ್ಲಿ ರನ್‌ ಬರ ಅನುಭವಿಸಿದ್ದಾರೆ. ಇವರು ಆಡಿದ 3 ಪಂದ್ಯಗಳಲ್ಲಿ 11ರ ಸರಾಸರಿಯಲ್ಲಿ 40 ರನ್‌ ಕಲೆ ಹಾಕಿದ್ದಾರೆ. ಆದರೆ ಸರಣಿಯಲ್ಲಿ ಯಾಸ್ತಿಕಾ ಭಾಟಿಯಾ ರನ್‌ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ. ಸರಣಿಯಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದ ಬ್ಯಾಟರ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಯಾಸ್ತಿಕಾ 3 ಪಂದ್ಯಗಳಲ್ಲಿ 39ರ ಸರಾಸರಿಯಲ್ಲಿ 119 ರನ್‌ ಸಿಡಿಸಿದ್ದಾರೆ.

ಮೂರನೇ ಪಂದ್ಯದ ಫಲಿತಾಂಶ

ಇಂಗ್ಲೆಂಡ್ ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಆರಂಭ ಕಳಪೆಯಾಗಿತ್ತು. ತಂಡದ ಮೊತ್ತ 36 ರನ್‌ ಆಗಿದ್ದಾಗ ಟೀಮ್ ಇಂಡಿಯಾ ಆರಂಭಿಕರು ಪೆವಿಲಿಯನ್‌ ಸೇರಿದರು. ಭರವಸೆಯ ಬ್ಯಾಟರ್‌ ಯಾಸ್ತಿಕಾ ಭಾಟಿಯಾ (36 ರನ್‌) ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ಜೇಮಿಮಾ ರೊಡ್ರಿಗಸ್‌ 4 ಬೌಂಡರಿ ನೆರವಿನಿಂದ 29 ರನ್‌ ಸಿಡಿಸಿದ್ದಾರೆ. 5ನೇ ವಿಕೆಟ್‌ಗೆ ಹರ್ಮನ್‌ಪ್ರೀತ್ ಕೌರ್‌ ಹಾಗೂ ದೀಪ್ತಿ ಶರ್ಮಾ ಜೋಡಿ 48 ಎಸೆತಗಳಲ್ಲಿ 67 ರನ್‌ ಕಲೆ ಹಾಕಿ ತಂಡಕ್ಕೆ ಆಧಾರವಾದರು. ಹರ್ಮನ್ ಪ್ರೀತ್ ಕೌರ್ 7 ಬೌಂಡರಿ ಸಹಾಯದಿಂದ ಅಜೇಯ 56 ರನ್‌ ಬಾರಿಸಿ ಮಿಂಚಿದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 180 ರನ್‌ ಸೇರಿಸಿತು.

Women T20 World Cup

ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಇಂಗ್ಲೆಂಡ್ ಪವರ್‌ಪ್ಲೇನಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಲಿಸ್ ಕ್ಯಾಪ್ಸಿ, ಹೀದರ್ ನೈಟ್ ಜೋಡಿ ನಾಲ್ಕನೇ ವಿಕೆಟ್‌ಗೆ 76 ಎಸೆತಗಳಲ್ಲಿ 137 ರನ್‌ ಸೇರಿಸಿತು. ಆಲಿಸ್ ಕ್ಯಾಪ್ಸಿ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 82 ರನ್‌ ಬಾರಿಸಿದರು. ಹೀದರ್ ನೈಟ್ 10 ಬೌಂಡರಿ ಸಹಾಯದಿಂದ ಅಜೇಯ 70 ರನ್‌ ಸಿಡಿಸಿದರು. ಅಂತಿಮವಾಗಿ ಇಂಗ್ಲೆಂಡ್‌ 18.3 ಓವರ್‌ಗಳಲ್ಲಿ 4 ವಿಕೆಟ್‌ಗೆ 184 ರನ್‌ ಕಲೆ ಹಾಕಿ ಜಯ ಸಾಧಿಸಿತು.

Story first published: Wednesday, June 3, 2026, 9:05 [IST]
Other articles published on Jun 3, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+