ವಂದನಾ ಜೈನ್ ಗೂಗ್ಲಿಗೆ ಅಮಿತ್ ಮಿಶ್ರಾ ಕಕ್ಕಾಬಿಕ್ಕಿ!
ಬೆಂಗಳೂರು, ಅಕ್ಟೋಬರ್. 24: ಭಾರತ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರ ವಿರುದ್ಧದ ಹಲ್ಲೆ ಆರೋಪ ಮಾಡಿರುವ ಮಹಿಳೆ ವಂದನಾ ತಾವು ದೂರನ್ನು ಹಿಂದಕ್ಕೆ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಂದನಾ ದೂರು ಹಿಂದಕ್ಕೆ ಪಡೆಯುತ್ತಿದ್ದಾರೆ ಎಂಬ ವದಂತಿ ಗುರುವಾರ ಮಾಧ್ಯಮಗಳಲ್ಲಿ ಹರಿದಾಡಿತ್ತು. ಅಮಿತ್ ಮಿಶ್ರಾ ಗೆಳತಿಯಾಗಿದ್ದ ಬಾಲಿವುಡ್ ನಿರ್ಮಾಪಕಿ ವಂದನಾ ಬೆಂಗಳೂರಿನ ಹೋಟೆಲ್ ನಲ್ಲಿ ಮಿಶ್ರಾ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಶೋಕ್ ನಗರ ಪೊಲೀಸರಿಗೆ ದೂರು ನೀಡಿದ್ದರು.[ಮಹಿಳೆ ಮೇಲೆ ಹಲ್ಲೆ: ಸ್ಪಿನ್ನರ್ ಅಮಿತ್ ಮಿಶ್ರಾ ವಿರುದ್ಧ ಪ್ರಕರಣ ದಾಖಲು]

ಇದೀಗ ಸಂತ್ರಸ್ತ ಮಹಿಳೆ ಮಿಶ್ರಾ ನನ್ನ ಸಮ್ಮುಖದಲ್ಲಿ ಬೆಂಗಳೂರು ಪೊಲೀಸರ ಮುಂದೆ ಹಾಜರಾಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ನಾಣು ಅಮಿತ್ ಮಿಶ್ರಾ ವಿರುದ್ಧ ದೂರು ಹಿಂಪಡೆದುಕೊಂಡೇ ಇಲ್ಲ; ಆತ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ತನ್ನ ಸಮ್ಮುಖ ಪೊಲೀಸರೆಂದು ಹಾಜರಾಗಬೇಕು ಎಂದು ಹೇಳಿದ್ದಾತರೆ.
ನನಗೆ ಆತನಿಂದ ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನೋವಾಗಿದೆ. ಮಿಶ್ರಾ ಅವರು ಕಳೆದ ತಿಂಗಳಲ್ಲಿ ಭಾರತದ ಪ್ರವಾಸ-ಪೂರ್ವ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದರು ಈ ವೇಳೆ ನನ್ನ ಮೇಲೆ ಹಲ್ಲೆ ಮಾಡಿದ್ದರು ಎಂದು ಮಹಿಳೆ ಹೇಳಿದ್ದಾರೆ.[ಪ್ರಕರಣ ಹಿಂದಕ್ಕೆ ಪಡೆದ ಮಹಿಳೆ]
32 ವರ್ಷ ವಯಸ್ಸಿನ ಮಿಶ್ರಾ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿದ್ದು, ಸದ್ಯ ಮೂರನೇ ಏಕದಿನ ಪಂದ್ಯದಲ್ಲಿ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆಡುತ್ತಿದ್ದಾರೆ. ಟೆಸ್ಟ್ ತಂಡಕ್ಕೂ ಆಯ್ಕೆಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications