ಆಸ್ಟ್ರೇಲಿಯಾ ಕ್ರಿಕೆಟ್‌ನ ಪುರುಷರ ಮತ್ತು ಮಹಿಳಾ ತಂಡಗಳೆರಡೂ ವಿಶ್ವದಲ್ಲೇ ಪ್ರಬಲವಾಗಿವೆ. 2015ರಿಂದ ಪುರುಷರ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ವಿರುದ್ಧ ಎಂದಿಗೂ ಆಶಸ್ ಸರಣಿಯನ್ನು ಸೋತಿಲ್ಲ. ಆದರೆ, 2013-2014ರಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಮಹಿಳಾ ತಂಡ ಇಂಗ್ಲೆಂಡ್ ಮಹಿಳಾ ತಂಡದೆದುರು ಆಶಸ್ ಸರಣಿ ಸೋತರು.
2021-2022ರಲ್ಲಿ ಮಹಿಳೆಯರ ಆಶಸ್ ಸರಣಿಯನ್ನು ಆಸ್ಟ್ರೇಲಿಯಾ ತಂಡ 12-4 ಅಂಕಗಳ ಅಂತರದಿಂದ ತವರು ನೆಲದಲ್ಲಿ ಗೆದ್ದಿತು. ಬಹು ನಿರೀಕ್ಷಿತ 2023ರ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾದ ಪ್ರಾಬಲ್ಯವನ್ನು ಮುರಿಯಲು ಇಂಗ್ಲೆಂಡ್ ಎದುರು ನೋಡುತ್ತಿದೆ.

ಬಹು ನಿರೀಕ್ಷಿತ ಸರಣಿಯು ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ಏಕೈಕ ಟೆಸ್ಟ್ ಪಂದ್ಯ ಈಗಾಗಲೇ ಆರಂಭವಾಗಿದೆ. ಇದು ಐದು ದಿನಗಳ ಮುಖಾಮುಖಿಯಾಗಲಿದೆ. ಸಾಮಾನ್ಯವಾಗಿ ಮಹಿಳಾ ತಂಡಗಳ ಟೆಸ್ಟ್ ಪಂದ್ಯಗಳಲ್ಲಿ ನಾಲ್ಕು ದಿನಗಳ ಸ್ಪರ್ಧೆಯನ್ನು ಆಡಲಾಗುತ್ತದೆ.
ಅನುಭವಿ ಆಟಗಾರ್ತಿ ಎಲ್ಲಿಸ್ ಪೆರ್ರಿ ಆಸ್ಟ್ರೇಲಿಯಾ ಮಹಿಳಾ ತಂಡದ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಈ ಸ್ಟಾರ್ ಆಲ್‌ರೌಂಡರ್ ತನ್ನ ಸುಪ್ರಸಿದ್ಧ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಅನೇಕ ಪುರಸ್ಕಾರಗಳನ್ನು ಗಳಿಸಿದ್ದಾರೆ.

ಎಲ್ಲಿಸ್ ಪೆರ್ರಿ ಇದೀಗ ದಾಖಲೆಯ ಹತ್ತು ಮಹಿಳಾ ಆಶಸ್ ಸರಣಿಯಲ್ಲಿ ಕಾಣಿಸಿಕೊಂಡ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ತಮ್ಮ ಮುಡಿಗೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದ್ದಾರೆ. ಈ ಅದ್ಭುತ ಸಾಧನೆ ಮಾಡಿದ ಏಕೈಕ ಆಟಗಾರ್ತಿ ಎಲ್ಲಿಸ್ ಪೆರ್ರಿ ಆಗಿದ್ದಾರೆ.
2007ರಲ್ಲಿ ತನ್ನ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವಾಡಿದ ನಂತರ, ಎಲ್ಲಿಸ್ ಪೆರ್ರಿ ತಮ್ಮ ಅದ್ಭುತ ವೃತ್ತಿಜೀವನದಲ್ಲಿ ಇದುವರೆಗೆ 10 ಟೆಸ್ಟ್, 131 ಏಕದಿನ ಮತ್ತು 139 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಆಶಸ್ 2023 - ಇಂಗ್ಲೆಂಡ್ vs ಆಸ್ಟ್ರೇಲಿಯಾ
ಗುರುವಾರ, ಜೂನ್ 22ರಂದು ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ 2023ರ ಆಶಸ್ ಸರಣಿಯ ಏಕೈಕ ಪಂದ್ಯ ಆರಂಭವಾಗಿದೆ.
ಮೊದಲು ಬ್ಯಾಟಿಂಗ್ ಮಾಡುತ್ತಿರುವ ಆಸ್ಟ್ರೇಲಿಯಾ ಮಹಿಳಾ ತಂಡ ಮೊದಲ ದಿನದಾಟದ ಮೊದಲ ಇನ್ನಿಂಗ್ಸ್‌ನಲ್ಲಿ 83 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 324 ರನ್ ಗಳಿಸಿದೆ.
ಎಲ್ಲಿಸ್ ಪೆರ್ರಿ 153 ಎಸೆತಗಳಲ್ಲಿ 15 ಬೌಂಡರಿ ಸಹಾಯದಿಂದ 99 ರನ್ ಗಳಿಸುವ ಮೂಲಕ ಕೇವಲ 1 ರನ್‌ನಿಂದ ಶತಕವಂಚಿತರಾದರು. ತಹ್ಲಿಯಾ ಮೆಕ್‌ಗ್ರಾತ್ 83 ಎಸೆತಗಳಲ್ಲಿ 8 ಬೌಂಡರಿ ಸಮೇತ 66 ರನ್ ಗಳಿಸಿದರು. ಆಶ್ಲೇಗ್ ಗಾರ್ಡ್ನರ್ 40 ರನ್, ಅನ್ನಾಬೆಲ್ ಸಥರ್ಲ್ಯಾಂಡ್ 39 ರನ್ ಗಳಿಸಿದರು.