ಮಹಿಳಾ ಆಶಸ್ ಸರಣಿಯ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಅಮೋಘ ಗೆಲುವು ಸಾಧಿಸಿದೆ. ಎಲ್ಲಾ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ತಂಡ ಗೆಲುವಿನಿಂದಾಗಿ 2015ರ ಬಳಿಕ ಮೊದಲ ಬಾರಿಗೆ ಮಹಿಳಾ ಆಶಸ್‌ನಲ್ಲಿ ಗೆಲುವು ಸಾಧಿಸಿದಂತಾಗಿದೆ. ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ಬ್ರಿಜ್‌ನಲ್ಲಿ ನಡೆದ ಪಂದ್ಯದಲ್ಲಿ 89 ರನ್‌ಗಳ ಅಂಗತರದಿಂದ ಆಸ್ಟ್ರೇಲಿಯಾ ತಂಡ ಗೆದ್ದು ಬೀಗಿದೆ.
ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ಆಶ್ಲೀ ಗಾರ್ಡ್ನರ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನ ಆಸಿಸ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದೆ. ಪಂದ್ಯದ ಕೊನೆಯ ಇನ್ನಿಂಗ್ಸ್‌ನಲ್ಲಿ 8-ವಿಕೆಟ್‌ಗಳನ್ನು ಪಡೆದು ಇಂಗ್ಲೆಂಡ್‌ಗೆ ಆಘಾತ ನೀಡಿದ ಅವರು ಪಂದ್ಯದಲ್ಲಿ ಒಟ್ಟು 165 ರನ್‌ಗಳಿಗೆ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಗಾರ್ಡ್ನರ್ ಐತಿಹಾಸಿಕ ಮೈದಾನದಲ್ಲಿ ಸ್ಪಿನ್ನರ್ ಮಾಡಿದ ಅತ್ಯುತ್ತಮ ಸಾಧನೆ ಮಾಡಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಂತಿಮ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಆಟಗಾರ್ತಿ ಡ್ಯಾನಿ ವ್ಯಾಟ್ ತಮ್ಮ ಪದಾರ್ಪಣಾ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ತಂಡದ ಸಾಕಷ್ಟು ಹೋರಾಟ ನಡೆಸಿದರು. ಆದರೆ ಆಶ್ ಗಾರ್ಡ್ನರ್ ಕೊನೆಯ ದಿನದ ಎಲ್ಲಾ 5 ವಿಕೆಟ್‌ಗಳನ್ನು ಕೂಡ ಪಡೆದು ವ್ಯಾಟ್ ಹೋರಾಟವನ್ನು ವ್ಯರ್ಥಗೊಳಿಸಿದರು. ಇಂಗ್ಲೆಂಡ್ ತಂಡ 5 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿದಲ್ಲಿಂದ ಅಂತಿಮ ದಿನದಾಟ ಆರಂಭಿಸಿತು. ಆದರೆ ಕೇವಲ 62 ರನ್‌ಗಳಿಗೆ ಕೊನೆಯ 5 ವಿಕೆಟ್ ಕಳೆದುಕೊಂಡಿದೆ. ಅಂತಿಮ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತನ್ನ 268 ರನ್‌ಗಳನ್ನು ಬೆನ್ನಟ್ಟಿದ್ದು ಒಂದು ಹಂತದಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 55 ರನ್ ಗಳಿಸಿತ್ತು.
ಬಹು ಮಾದರಿಯ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಈಗ 4 ಅಂಕಗಳನ್ನು ಪಡೆದು ಮುನ್ನಡೆ ಸಾಧಿಸಿದೆ. ಆಶಸ್ ಸರಣಿಯ ಭಾಗವಾಗಿ ಈ ಎರಡು ತಂಡಗಳು 3 ಏಕದಿನ ಪಂದ್ಯ ಮತ್ತು 3 ಟಿ20 ಪಂದ್ಯಗಳನ್ನು ಕೂಡ ಆಡಲಿದೆ. ಟೆಸ್ಟ್ ಗೆಲುವಿನೊಂದಿಗೆ ಆಸ್ಟ್ರೇಲಿಯಾಕ್ಕೆ ಆಶಸ್ ಸರಣಿಯನ್ನು ವಶಕ್ಕೆ ಪಡೆಯುವ ಅದ್ಭುತ ಅವಕಾಶವನ್ನು ತನ್ನದಾಗಿಸಿಕೊಂಡಿದೆ. ಈ ಬಹು ಮಾದರಿಯ ಸರಣಿಯಲ್ಲಿ ಟೆಸ್ಟ್ ಗೆಲುವಿಗೆ 4 ಅಂಕಗಳು ಮತ್ತು ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಪ್ರತಿ ಗೆಲುವಿಗೆ 2 ಅಂಕಗಳನ್ನು ಗೆದ್ದ ತಂಡ ಪಡೆದುಕೊಳ್ಳಲಿದೆ.
ಇಂಗ್ಲೆಂಡ್ ವುಮೆನ್ಸ್ ಆಡುವ ಬಳಗ: ಟಮ್ಮಿ ಬ್ಯೂಮಾಂಟ್, ಎಮ್ಮಾ ಲ್ಯಾಂಬ್, ಹೀದರ್ ನೈಟ್ (ನಾಯಕಿ), ನ್ಯಾಟ್ ಸ್ಕಿವರ್-ಬ್ರಂಟ್, ಸೋಫಿಯಾ ಡಂಕ್ಲಿ, ಡೇನಿಯಲ್ ವ್ಯಾಟ್, ಆಮಿ ಜೋನ್ಸ್ (ವಾಕ್), ಸೋಫಿ ಎಕ್ಲೆಸ್ಟೋನ್, ಕೇಟ್ ಕ್ರಾಸ್, ಲಾರೆನ್ ಫೈಲರ್, ಲಾರೆನ್ ಬೆಲ್
ಬೆಂಚ್: ಡೇನಿಯಲ್ ಗಿಬ್ಸನ್, ಇಸ್ಸಿ ವಾಂಗ್
ಆಸ್ಟ್ರೇಲಿಯಾ ವುಮೆನ್ಸ್ ಆಡುವ ಬಳಹ: ಬೆತ್ ಮೂನಿ, ಫೋಬೆ ಲಿಚ್‌ಫೀಲ್ಡ್, ಎಲ್ಲಿಸ್ ಪೆರ್ರಿ, ತಹ್ಲಿಯಾ ಮೆಕ್‌ಗ್ರಾತ್, ಜೆಸ್ ಜೊನಾಸ್ಸೆನ್, ಅಲಿಸ್ಸಾ ಹೀಲಿ (ನಾಯಕ & ವಿಕೆಟ್ ಕೀಪರ್), ಆಶ್ಲೆ ಗಾರ್ಡ್ನರ್, ಅನ್ನಾಬೆಲ್ ಸದರ್ಲ್ಯಾಂಡ್, ಅಲಾನಾ ಕಿಂಗ್, ಕಿಮ್ ಗಾರ್ತ್, ಡಾರ್ಸಿ ಬ್ರೌನ್
ಬೆಂಚ್: ಗ್ರೇಸ್ ಹ್ಯಾರಿಸ್, ಮೇಗನ್ ಶುಟ್, ಜಾರ್ಜಿಯಾ ವೇರ್ಹ್ಯಾಮ್