For Quick Alerts
ALLOW NOTIFICATIONS  
For Daily Alerts
 

Eng W vs Aus W: ಮೊದಲ ಏಕದಿನ ಪಂದ್ಯ; ಟಾಸ್ ವರದಿ, ಆಡುವ ಬಳಗ

ಒಂದೆಡೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪುರುಷರ ತಂಡಗಳು ಐತಿಹಾಸಿಕ ಆಶಸ್ ಸರಣಿಯಲ್ಲಿ ಮುಖಾಮುಖಿಯಾಗಿದ್ದರೆ ಇತ್ತ ಮಹಿಳಾ ತಂಡಗಳು ಕೂಡ ಸೆಣೆಸಾಟ ನಡೆಸುತ್ತಿದೆ. ಏಕೈಕ ಟೆಸ್ಟ್ ಪಂದ್ಯವನ್ನು ಆಡಿದ ಬಳಿಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಿದ್ದ ಈ ಎರಡು ತಂಡಗಳು ಇದೀಗ ಏಕದಿನ ಮಾದರಿಯಲ್ಲಿ ಮುಖಾಮುಖಿಯಾಗಿದೆ.

ಮೊದಲ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಟಾಸ್ ಗೆದ್ದಿದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಇಂಗ್ಲೆಂಡ್ ಮಹಿಳಾ ತಂಡ ಆರಂಭದಲ್ಲಿ ಬೌಲಿಂಗ್ ನಡೆಸುವ ಸವಾಲು ಸ್ವೀಕರಿಸಿದೆ. ಬ್ರಿಸ್ಟಲ್‌ನ ಕೌಂಟಿ ಗ್ರೌಂಡ್‌ನಲ್ಲಿ ಈ ಪಂದ್ಯ ಆಯೋಜನೆಯಾಗಿದ್ದು ಕುತೂಹಲ ಮೂಡಿಸಿದೆ.

Womens Ashes, Eng W vs Aus W: 1st ODI, toss report playing XI details

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ಮೂರು ಮಾದರಿಯ ಆಶಸ್ ಸರಣಿ ಇದಾಗಿದ್ದು ಏಕೈಕ ಟೆಸ್ಟ್ ಪಂದ್ಯವನ್ನು ಗೆಲ್ಲುವುದರ ಜೊತೆಗೆ ಒಂದು ಏಕದಿನ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಸದ್ಯ 6 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಇನ್ನು ಎರಡು ಏಕದಿನ ದಿನ ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್ ತಂಡ 4 ಅಂಕಗಳ್ನು ಹೊಂದಿದೆ. ಹೀಗಾಗಿ ಟಿ20 ಸರಣಿಯಲ್ಲಿ ಮೇಲುಗೈ ಸಾಧಿಸುವುದು ಎರಡು ತಂಡಗಳಿಗೂ ಮಹತ್ವದ್ದಾಗಿರಲಿದೆ. ಒಂದು ಟೆಸ್ಟ್ ಗೆಲುವಿಗೆ ನಾಲ್ಕು ಅಂಕ, ಒಂದು ಏಕದಿನ ಪಂದ್ಯದ ಗೆಲುವಿಗೆ 2 ಅಂಕ ಹಾಗೂ ಟಿ20 ಪಂದ್ಯದ ಗೆಲುವಿಗೆ 1 ಅಂಕಗಳನ್ನು ಹಂಚಿಕೆ ಮಾಡಲಾಗುತ್ತದೆ.

ಇಂಗ್ಲೆಂಡ್ ಆಡುವ ಬಳಗ: ಸೋಫಿಯಾ ಡಂಕ್ಲಿ, ಟಮ್ಮಿ ಬ್ಯೂಮಾಂಟ್, ಹೀದರ್ ನೈಟ್ (ನಾಯಕಿ), ನ್ಯಾಟ್ ಸ್ಕಿವರ್-ಬ್ರಂಟ್, ಆಲಿಸ್ ಕ್ಯಾಪ್ಸೆ, ಡೇನಿಯಲ್ ವ್ಯಾಟ್, ಆಮಿ ಜೋನ್ಸ್ (ವಿಕೆಟ್ ಕೀಪರ್), ಸೋಫಿ ಎಕ್ಲೆಸ್ಟೋನ್, ಸಾರಾ ಗ್ಲೆನ್, ಕೇಟ್ ಕ್ರಾಸ್, ಲಾರೆನ್ ಬೆಲ್
ಬೆಂಚ್: ಷಾರ್ಲೆಟ್ ಡೀನ್, ಡೇನಿಯಲ್ ಗಿಬ್ಸನ್, ಲಾರೆನ್ ಫೈಲರ್, ಇಸ್ಸಿ ವಾಂಗ್

ಆಸ್ಟ್ರೇಲಿಯಾ ಆಡುವ ಬಳಗ: ಅಲಿಸ್ಸಾ ಹೀಲಿ (ನಾಯಕಿ & ವಿಕೆಟ್ ಕೀಪರ್), ಫೋಬೆ ಲಿಚ್‌ಫೀಲ್ಡ್, ಎಲ್ಲಿಸ್ ಪೆರ್ರಿ, ಬೆತ್ ಮೂನಿ, ತಹ್ಲಿಯಾ ಮೆಕ್‌ಗ್ರಾತ್, ಆಶ್ಲೀ ಗಾರ್ಡ್ನರ್, ಅನ್ನಾಬೆಲ್ ಸದರ್‌ಲ್ಯಾಂಡ್, ಜೆಸ್ ಜೊನಾಸ್ಸೆನ್, ಜಾರ್ಜಿಯಾ ವೇರ್ಹ್ಯಾಮ್, ಮೇಗನ್ ಶುಟ್, ಡಾರ್ಸಿ ಬ್ರೌನ್
ಬೆಂಚ್: ಗ್ರೇಸ್ ಹ್ಯಾರಿಸ್, ಕಿಮ್ ಗಾರ್ತ್, ಅಲಾನಾ ಕಿಂಗ್

Story first published: Wednesday, July 12, 2023, 17:59 [IST]
Other articles published on Jul 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+