Women's Asia Cup 2024: ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಸ್ಮೃತಿ ಮಂಧಾನ ಹಿಂದಿಕ್ಕಿದ ಹರ್ಮನ್‌ಪ್ರೀತ್ ಕೌರ್
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಸ್ಮೃತಿ ಮಂಧಾನಾ ಅವರನ್ನು ಹಿಂದಿಕ್ಕಿ ಭಾರತದ ಪರ ಅತಿ ರನ್ ಗಳಿಸಿದ ಆಟಗಾರ್ತಿ ಎನಿಸಿದರು.
ಭಾನುವಾರ, ಜುಲೈ 21ರಂದು ದಂಬುಲ್ಲಾದಲ್ಲಿ ನಡೆದ 2024ರ ಮಹಿಳಾ ಏಷ್ಯಾ ಕಪ್‌ನ ಯುಎಇ ವಿರುದ್ಧ ಭಾರತ ತಂಡದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಈ ಸಾಧನೆ ನಿರ್ಮಿಸಿದರು.

ಯುಎಇ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಸ್ಮೃತಿ ಮಂಧಾನ 13 ರನ್ ಗಳಿಸಿ ಔಟಾದರೆ, ಶಫಾಲಿ ವರ್ಮಾ 18 ಎಸೆತಗಳಲ್ಲಿ 37 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಹರ್ಮನ್‌ಪ್ರೀತ್ ಕೌರ್ ಕ್ರೀಸ್‌ಗೆ ಆಗಮಿಸಿದಾಗ, ಸ್ಮೃತಿ ಮಂಧಾನ ಅವರ 3,378 ರನ್‌ಗಳನ್ನು ಹಿಂದಿಕ್ಕಲು ಕೇವಲ 30 ರನ್‌ಗಳ ಅಗತ್ಯವಿತ್ತು. 47 ಎಸೆತಗಳಲ್ಲಿ 7 ಬೌಂಡರಿಗಳು ಮತ್ತು 1 ಸಿಕ್ಸರ್‌ನೊಂದಿಗೆ ಬಿರುಸಿನ 66 ರನ್ ಬಾರಿಸುವ ಮಾರ್ಗದಲ್ಲಿ ಭಾರತದ ನಾಯಕಿ ಸುಂದರ ಇನ್ನಿಂಗ್ಸ್ ಆಡಿದರು.
ಪಂಜಾಬ್ ಮೂಲದ ಬ್ಯಾಟರ್ ಹರ್ಮನ್‌ಪ್ರೀತ್ ಕೌರ್ ಭಾರತಕ್ಕೆ ಜೆಮಿಮಾ ರೋಡ್ರಿಗಸ್ ಮತ್ತು ರಿಚಾ ಘೋಷ್ ಅವರೊಂದಿಗೆ ಅರ್ಧಶತಕದ ಜೊತೆಯಾಟಗಳನ್ನು ನಿರ್ಮಿಸಿದ ನಂತರ, ಅಂತಿಮ ಓವರ್‌ನಲ್ಲಿ ರನೌಟ್ ಆದರು.
ಹರ್ಮನ್‌ಪ್ರೀತ್ ಕೌರ್ ಈವರೆಗೆ 171 ಟಿ20 ಪಂದ್ಯಗಳಿಂದ 107.35ರ ಸ್ಟ್ರೈಕ್ ರೇಟ್ ಮತ್ತು 28.22ರ ಸರಾಸರಿಯೊಂದಿಗೆ 3,415 ರನ್ ಕಲೆಹಾಕಿದ್ದಾರೆ. ಈ ಸಮಯದಲ್ಲಿ ಹರ್ಮನ್‌ಪ್ರೀತ್ ತಮ್ಮ ಉಪನಾಯಕಿ ಸ್ಮೃತಿ ಮಂಧಾನ ಅವರಿಗಿಂತ 37 ರನ್‌ಗಳಿಂದ ಮುಂದಿದ್ದಾರೆ.

ಮಹಿಳಾ ಟಿ20 ಪಂದ್ಯದಲ್ಲಿ ಭಾರತ ಮೊದಲ ಬಾರಿಗೆ 200+ ಮೊತ್ತ
ಶಫಾಲಿ ವರ್ಮಾ ಮತ್ತು ಹರ್ಮನ್‌ಪ್ರೀತ್ ಕೌರ್ ಹೊರತಾಗಿ, ರಿಚಾ ಘೋಷ್ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಭಾರತೀಯ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು.
ವಿಕೆಟ್‌ಕೀಪರ್-ಬ್ಯಾಟರ್ ರಿಚಾ ಘೋಷ್ ಕೇವಲ 29 ಎಸೆತಗಳಲ್ಲಿ 12 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 64 ರನ್ ಗಳಿಸಿದರು. ಭಾರತ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿದ ಕಾರಣ, ರಿಚಾ ಘೋಷ್ ಅಜೇಯರಾಗುಳಿದರು. ಇದೇ ವೇಳೆ ಭಾರತ ತಂಡ ಮಹಿಳಾ ಟಿ20 ಪಂದ್ಯಗಳಲ್ಲಿ ಮೊದಲ ಬಾರಿಗೆ 200 ಪ್ಲಸ್ ಮೊತ್ತವನ್ನು ಕಲಹಾಕಿತು.
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ 4 ವಿಕೆಟ್‌ಗೆ 198 ರನ್ ಗಳಿಸಿದ್ದು ಚುಟುಕು ಸ್ವರೂಪದಲ್ಲಿ ಭಾರತ ತಂಡದ ಹಿಂದಿನ ಗರಿಷ್ಠ ಮೊತ್ತವಾಗಿತ್ತು. ಗಮನಾರ್ಹವಾಗಿ, 199 ರನ್‌ಗಳ ಗುರಿಯನ್ನು ಇಂಗ್ಲೆಂಡ್ ಯಶಸ್ವಿಯಾಗಿ ಬೆನ್ನಟ್ಟಿತು.
ಇನ್ನು ಯುಎಇ ತಂಡ 202 ರನ್‌ಗಳ ಗುರಿಯನ್ನು ಬೆನ್ನಟ್ಟುವ ವೇಳೆ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 123 ರನ್‌ಗಳಿಗೆ ನಿಯಂತ್ರಣಗೊಂಡಿತು ಮತ್ತು 78 ರನ್‌ಗಳಿಂದ ಸೋಲು ಅನುಭವಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications