Womens Asia Cup 2024: ನೇಪಾಳ ಎದುರು ಭಾರತಕ್ಕೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ; ಸಂಭಾವ್ಯ ತಂಡ, ಪಿಚ್ ವರದಿ
ಜುಲೈ 23 ಮಂಗಳವಾರ, ಮಹಿಳಾ ಏಷ್ಯಾ ಕಪ್ 2024ರ ತನ್ನ ಮೂರನೇ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ನೇಪಾಳವನ್ನು ಎದುರಿಸಲಿದೆ. ಈ ಪಂದ್ಯ ಶ್ರೀಲಂಕಾದ ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಆರಂಭವಾಗಲಿದೆ.
ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಭಾರತ ತಂಡವನ್ನು ಮುನ್ನಡೆಸುತ್ತಿದ್ದರೆ, ಇಂದೂ ಬರ್ಮಾ ಅವರು ನೇಪಾಳ ತಂಡದ ನಾಯಕಿಯಾಗಿದ್ದಾರೆ. ಭಾರತ ಮತ್ತು ನೇಪಾಳದ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.

ಪಿಚ್ ವರದಿ
ಶ್ರೀಲಂಕಾದ ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಸ್ಟೇಡಿಯಂ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಹೀಗಾಗಿ ಸಾಮಾನ್ಯವಾಗಿ ಬ್ಯಾಟರ್‌ಗಳು ಹೆಚ್ಚಿನ ರನ್ ಗಳಿಸುವ ಅವಕಾಶ ಹೊಂದಿರುತ್ತಾರೆ. ಕಳೆದ ಪಂದ್ಯದಲ್ಲಿ ಭಾರತ ವನಿತೆಯರು ಯುಎಇ ವಿರುದ್ಧ 201 ರನ್ ಗಳಿಸಿತ್ತು.
ಇದಲ್ಲದೆ, ಶ್ರೀಲಂಕಾ ತಂಡವು ಮಲೇಷ್ಯಾ ವಿರುದ್ಧ ಈ ಪಿಚ್‌ನಲ್ಲಿ 184 ರನ್ ಗಳಿಸಿತ್ತು. ಇನ್ನು ವೇಗದ ಬೌಲರ್‌ಗಳು ಹೊಸ ಚೆಂಡಿನೊಂದಿಗೆ ಇಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಪ್ರದರ್ಶನ ನೀಡುವ ಸಾಧ್ಯತೆಗಳಿದ್ದು, ಸ್ಪಿನ್ನರ್‌ಗಳು ಹಳೆಯ ಚೆಂಡಿನೊಂದಿಗೆ ತಮ್ಮ ಪ್ರಾಬಲ್ಯ ಸಾಧಿಸುವ ಅವಕಾಶವಿರುತ್ತದೆ.
ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ರಿಚಾ ಘೋಷ್ ಅವರು ಟೀಮ್ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇವರೊಂದಿಗೆ ಸ್ಮೃತಿ ಮಂದಾನ ಮತ್ತು ಶೆಫಾಲಿ ವರ್ಮಾ ಕೂಡ ಉತ್ತಮ ಆರಂಭ ನೀಡುತ್ತಿದ್ದಾರೆ.
ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಮಂಧನ್ 45 ರನ್‌ಗಳ ಇನ್ನಿಂಗ್ಸ್ ಆಡಿದರೆ, ಯುಎಇ ವಿರುದ್ಧದ ಎರಡನೇ ಪಂದ್ಯದಲ್ಲಿ ಹರ್ಮನ್ ಮತ್ತು ರಿಚಾ ಅದ್ಭುತ ಅರ್ಧಶತಕಗಳನ್ನು ಗಳಿಸಿದರು.
ಇನ್ನೊಂದೆಡೆ ಬೌಲಿಂಗ್‌ನಲ್ಲಿ ಪೂಜಾ ವಸ್ತ್ರಾಕರ್ ಮತ್ತು ದೀಪ್ತಿ ಶರ್ಮಾ ಮಿಂಚುತ್ತಿದ್ದಾರೆ. ಇಂದು ನೇಪಾಳ ವಿರುದ್ಧವೂ ಈ ಸ್ಟಾರ್ ಬೌಲರ್ಸ್ ವಿಕೆಟ್ ಪಡೆಯುವ ನಿರೀಕ್ಷೆಯಲಿದ್ದಾರೆ.
ಈಗಾಗಲೇ ಟೀಮ್ ಇಂಡಿಯಾ ಆಡಿರುವ ಎರಡು ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಇದೀಗ ನೇಪಾಳ ಎದುರು ಭಾರತ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ.
ಭಾರತ vs ನೇಪಾಳ ಪ್ಲೇಯಿಂಗ್-11
ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಡಿ ಹೇಮಲತಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್‌ಕೀಪರ್), ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮಾ, ರೇಣುಕಾ ಸಿಂಗ್, ರಾಧಾ ಯಾದವ್, ತನುಜಾ ಕನ್ವರ್.
ನೇಪಾಳ: ಇಂದು ಬರ್ಮಾ (ನಾಯಕಿ), ಕಾಜೋಲ್ ಶ್ರೇಷ್ಠಾ, ರುಬಿನಾ ಛೆಟ್ರಿ, ಸಬ್ನಮ್ ರೈ, ಸೀತಾ ರಾಣಾ ಮಗರ್, ಪೂಜಾ ಮಹತೋ, ಬಿಂದು ರಾವಲ್, ರೋಮಾ ಥಾಪಾ, ಮಮತಾ ಚೌಧರಿ, ಕಬಿತಾ ಜೋಶಿ, ಕಬಿತಾ ಕುನ್ವಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications