For Quick Alerts
ALLOW NOTIFICATIONS  
For Daily Alerts
 

Womens Asia Cup 2024: ಯುಎಇ ವಿರುದ್ಧ ಭಾರತ ವನಿತೆಯರಿಗೆ ಭರ್ಜರಿ ಗೆಲುವು

ಜುಲೈ 21 ಭಾನುವಾರ, ಶ್ರೀಲಂಕಾದ ಡಂಬುಲ್ಲಾ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ 2024ರ ಮಹಿಳಾ ಏಷ್ಯಾಕಪ್‌ ಟೂರ್ನಿಯ ಎ ಗುಂಪಿನ 5ನೇ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಭಾರತ ವನಿತೆಯರು 78 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಟೀಮ್‌ ಇಂಡಿಯಾ ನೀಡಿದ 202 ರನ್‌ಗಳನ್ನು ಬೆನ್ನಟ್ಟುವಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವನಿತೆಯರು ವಿಫವಾಗಿದ್ದಾರೆ. ನಿಗದಿತ 20 ಓವರ್‌ಗಳಲ್ಲಿ ಯುಎಇ 7 ವಿಕೆಟ್‌ ನಷ್ಟಕ್ಕೆ 123 ರನ್‌ಗಳಿಸಲಷ್ಟೇ ಶಕ್ತವಾಗಿದೆ. ಈ ಮೂಲಕ ಹರ್ಮ್‌ಪ್ರೀತ್ ಕೌರ್ ಪಡೆ ಮಹಿಳಾ ಏಷ್ಯಾಕಪ್‌ 2024ರಲ್ಲ ಸತತ ಎರಡನೇ ಗೆಲುವು ಕಂಡಿದೆ.

Womens Asia Cup 2024 India win against United Arab Emirates

ಈ ಪಂದ್ಯದಲ್ಲಿ ಯುಎಇ ನಾಯಕಿ ಇಶಾ ಓಜಾ ಟಾಸ್ ಗೆದ್ದು ಭಾರತ ತಂಡದ ನಾಯಕಿ ಹರ್ಮ್‌ಪ್ರೀತ್ ಕೌರ್ ಅವರನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು.

ಭಾರತ ಮಹಿಳಾ ಟಿ20 ಕ್ರಿಕೆಟ್‌ನ ಇತಿಹಾಸದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು 200 ರನ್‌ಗಳ ಗಡಿ ದಾಟಿದ್ದು ಇದೇ ಮೊದಲು. ಈ ಗುರಿಯನ್ನು ತಲುಪಲು ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ರಿಚಾ ಘೋಷ್ ಅರ್ಧಶತಕ ಗಳಿಸಿದರು.

ಹರ್ಮನ್ 47 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 66 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ರಿಚಾ ಘೋಷ್ 26 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು. ಈ ಪಂದ್ಯದಲ್ಲಿ ರಿಚಾ 29 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 64 ರನ್ ಗಳಿಸಿ ಬಿರುಸಿನ ಆಟವಾಡಿದರು.

ಯುಎಇ ಪರ ಕವಿಶಾ ಅಗೋಡೆಜ್ 2 ಮತ್ತು ಸಮೈರಾ ಧರಣಿಧರಕ ಮತ್ತು ಹೀನಾ ಹೊಟ್‌ಚಂದಾನಿ ತಲಾ 1 ವಿಕೆಟ್ ಪಡೆದರು.

ಭಾರತ ತಂಡದ 202 ರನ್‌ಗಳ ಬೃಹತ್‌ ಗುರಿ ಚೇಸಿಂಗ್‌ ಮಾಡಲು ಮುಂದಾದ ಯುಎಇ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಯುಎಇ 36 ರನ್‌ಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದಾದ ಬಳಿಕ ಯಾವೊಬ್ಬ ಬ್ಯಾಟರ್ಸ್‌ ಕೂಡ ತಂಡದ ಗೆಲುವಿಗಾಗಿ ಹೋರಾಡಲಿಲ್ಲ.

ಯುಎಇ ಪರ ನಾಯಕಿ ಇಶಾ ರೋಹಿತ್ ಓಜಾ 36 ಎಸತೆಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 38 ಗಳಿಸಿದರು. ಕೊನೆಯಲ್ಲಿ ಕವಿಶಾ ಅಗೋಡೆಜ್ 32 ಎಸೆತಗಳಲ್ಲಿ 3 ಬೌಂಡರಿ ಹಾಗ 1 ಸಿಕ್ಸರ್‌ ಮೂಲಕ ಅಜೇಯ 40 ಬಾರಿಸಿ ತಂಡದ ಸ್ಕೋರ್‌ ನೂರಾರ ಗಡಿ ದಾಟಲು ಕಾರಣಕರ್ತರಾದರು. ಇದರೊಂದಿಗೆ ಟೀಮ್ ಇಂಡಿಯಾ ಗುರಿ ತಲುಪಲು ಸಾಧ್ಯವಾಗದ ಯುಎಇ ಸೋಲು ಕಂಡಿತ್ತು.

ಭಾರತದ ಪರ ದೀಪ್ತಿ ಶರ್ಮಾ 2 ವಿಕೆಟ್‌ ಉರುಳಿಸಿದರೆ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ರೇಣುಕಾ ಠಾಕೂರ್ ಸಿಂಗ್, ತನುಜಾ ಕನ್ವರ್ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಭಾರತ ಮತ್ತು ಯುಎಇ ಪ್ಲೇಯಿಂಗ್-11

ಭಾರತ : ಶಫಾಲಿ ವರ್ಮಾ, ಸ್ಮೃತಿ ಮಂಧಾನ, ದಯಾಲನ್ ಹೇಮಲತಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ಪ), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ರೇಣುಕಾ ಠಾಕೂರ್ ಸಿಂಗ್, ತನುಜಾ ಕನ್ವರ್.

ಯುಎಇ : ಇಶಾ ರೋಹಿತ್ ಓಜಾ (ನಾಯಕ), ತೀರ್ಥ ಸತೀಶ್ (ವಿಕೆ), ರಿನಿತಾ ರಜಿತ್, ಸಮೈರಾ ಧರಣಿಧರಕ, ಕವಿಶಾ ಅಗೋಡೆಜ್, ಖುಷಿ ಶರ್ಮಾ, ಹೀನಾ ಹೊಟ್‌ಚಂದಾನಿ, ವೈಷ್ಣವ್ ಮಹೇಶ್, ರಿತಿಕಾ ರಜಿತ್, ಲಾವಣ್ಯ ಕೆನ್ನಿ, ಇಂದುಜಾ ನಂದಕುಮಾರ್.

Story first published: Sunday, July 21, 2024, 17:25 [IST]
Other articles published on Jul 21, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+