For Quick Alerts
ALLOW NOTIFICATIONS  
For Daily Alerts
 

Women's Asia Cup 2024: ನೇಪಾಳ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ ವನಿತೆಯರು

ಮಂಗಳವಾರ, ಜುಲೈ 23ರಂದು ದಂಬುಲ್ಲಾದಲ್ಲಿ ನಡೆದ 2024ರ ಮಹಿಳಾ ಏಷ್ಯಾ ಕಪ್‌ನ ಎ ಗುಂಪಿನ ಪಂದ್ಯದಲ್ಲಿ ನೇಪಾಳ ತಂಡದ ವಿರುದ್ಧ ಭಾರತ ತಂಡವು 82 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಈ ಗೆಲುವಿನೊಂದಿಗೆ ಭಾರತ ಮಹಿಳಾ ತಂಡವು 2024ರ ಮಹಿಳಾ ಏಷ್ಯಾ ಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದರೆ, ನೇಪಾಳ ಮಹಿಳಾ ತಂಡವು ಟೂರ್ನಿಯಿಂದ ಹೊರಬಿತ್ತು.

Women s Asia Cup 2024 Indian women Team Beat Nepal By 82 Runs and Enters To Semifinals

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಶಫಾಲಿ ವರ್ಮಾ ಅವರ 81 ರನ್‌ಗಳ ಅಮೋಘ ಅರ್ಧಶತಕದೊಂದಿಗೆ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 178 ರನ್‌ ಕಲೆಹಾಕಿತು.

179 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ನೇಪಾಳ ಮಹಿಳೆಯರು ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಇತ್ತು. ಅಂತಿಮವಾಗಿ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 96 ರನ್‌ಗಳಿಗೆ ನಿಯಂತ್ರಣಗೊಂಡಿತು ಮತ್ತು 82 ರನ್‌ಗಳಿಂದ ಸೋಲು ಅನುಭವಿಸಿತು.

ಭಾರತ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಶಫಾಲಿ ವರ್ಮಾ ಮತ್ತು ದಯಾಳನ್ ಹೇಮಲತಾ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 14 ಓವರ್‌ಗಳಲ್ಲಿ 122 ರನ್‌ಗಳ ಜೊತೆಯಾಟ ನಿರ್ಮಿಸಿತು.

ಈ ವೇಳೆ ಸ್ಮೃತಿ ಮಂಧಾನ ಬದಲಾಗಿ ಇನ್ನಿಂಗ್ಸ್ ತೆರೆದ ದಯಾಳನ್ ಹೇಮಲತಾ 42 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 47 ರನ್ ಗಳಿಸಿ ಔಟಾದರೆ, ಶಫಾಲಿ ವರ್ಮಾ 48 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 81 ರನ್ ಬಾರಿಸಿದರು.

ಉಳಿದಂತೆ ಸಂಜೀವನ್ ಸಜನಾ 10 ರನ್, ಜೆಮಿಮಾ ರೋಡ್ರಿಗಸ್ ಅಜೇಯ 28 ರನ್ ಮತ್ತು ರಿಚಾ ಘೋಷ್ ಅಜೇಯ 6 ರನ್ ಗಳಿಸಿದರು.

ನಂತರ ಗುರಿ ಬೆನ್ನಟ್ಟಲು ಪರದಾಡಿದ ನೇಪಾಳ ಮಹಿಳಾ ತಂಡದ ಪರ ಯಾರೊಬ್ಬರು ವೈಯಕ್ತಿಕ 20 ರನ್ ಗಡಿ ದಾಟಲಿಲ್ಲ ಮತ್ತು ಭಾರತದ ಮಾರಕ ಬೌಲಿಂಗ್ ದಾಳಿಗೆ ಒತ್ತಡಕ್ಕೆ ಒಳಗಾದರು.

ಬೌಲಿಂಗ್‌ನಲ್ಲಿ ಭಾರತ ಪರ ದೀಪ್ತಿ ಶರ್ಮಾ 4 ಓವರ್‌ಗಳಲ್ಲಿ 13 ರನ್ ನೀಡಿ 3 ವಿಕೆಟ್‌ಗಳ ಹೊರತಾಗಿ, ಅರುಂಧತಿ ರೆಡ್ಡಿ ಮತ್ತು ರಾಧಾ ಯಾದವ್ ತಲಾ ಎರಡು ವಿಕೆಟ್ ಪಡೆದರು.

2024ರ ಮಹಿಳಾ ಏಷ್ಯಾ ಕಪ್‌ನ ಎ ಗುಂಪಿನಲ್ಲಿ ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ.

Story first published: Tuesday, July 23, 2024, 22:43 [IST]
Other articles published on Jul 23, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+